ಬಿಗ್ ಬಾಸ್ ಮನೆಯಿಂದ ಬಂದ ಎರಡೇ ವಾರಕ್ಕೆ ಸಿಹಿಸುದ್ದಿ ಕೊಟ್ಟ ಮೋಕ್ಷಿತಾ ಪೈ

 | 
Hji
ಅದಾಗಲೇ ಬಿಗ್‌ ಬಾಸ್‌ ಕನ್ನಡ 11 ಶೋ ಅಂತ್ಯವಾಗಿದೆ. ಗ್ರ್ಯಾಂಡ್‌ ಫಿನಾಲೆ ಸ್ಪರ್ಧಿಗಳು ಸಂದರ್ಶನಗಳನ್ನು ಕೊಡೋದರಲ್ಲಿ ಬ್ಯುಸಿಯಾಗಿದ್ದಾರೆ, ತ್ರಿವಿಕ್ರಮ್‌, ಹನುಮಂತ ಅವರು ಈಗಾಗಲೇ ಬೇರೆ ಬೇರೆ ಊರುಗಳಿಗೆ ಭೇಟಿ ಕೊಡುತ್ತಿದ್ದಾರೆ. ಈಗ ಮೋಕ್ಷಿತಾ ಪೈ ಅವರು ಚಾಮುಂಡಿ ದೇವರ ಆಶೀರ್ವಾದ ಪಡೆದಿದ್ದಾರೆ.
ಹೌದು, ಮೋಕ್ಷಿತಾ ಪೈ ಅವರು ʼಪಾರುʼ ಧಾರಾವಾಹಿ ಖ್ಯಾತಿಯ ಸಹನಟ ಗಣಿ ಜೊತೆಗೆ ಮೈಸೂರಿನ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಮೋಕ್ಷಿತಾ ಪೈ ಅವರ ಆಟವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಸ್ವಾಭಿಮಾನಿಯಾಗಿ ಮೋಕ್ಷಿತಾ ಪೈ ಅವರು ಸಾಕಷ್ಟು ವಿಷಯದಲ್ಲಿ ಪ್ರಾಮಾಣಿಕತೆ ಮೆರೆದಿದ್ದರು. ದೊಡ್ಮನೆಯಲ್ಲಿ ಇರಬೇಕು ಅಂತ ಅವರು ಡ್ರಾಮಾ ಮಾಡಲಿಲ್ಲ, ಅಷ್ಟಾಗಿ ಜಗಳವನ್ನು ಆಡಲಿಲ್ಲ.
ತುಂಬ ಸರಳವಾಗಿದ್ದ ಮೋಕ್ಷಿತಾ ಅವರು ಇದೇ ನನ್ನ ವ್ಯಕ್ತಿತ್ವ, ನಾನು ಹೀಗೆ ಇರೋದು ಅಂತ ಸಾಬೀತುಪಡಿಸಿದ್ದರು. ಮೋಕ್ಷಿತಾ ಪೈ ಅವರು ಬಿಗ್‌ ಬಾಸ್‌ ಮನೆಯೊಳಗಡೆ ಹೋದಾಗ ಅವರ ಈ ಹಿಂದಿನ ವಿಚಾರವೊಂದು ಟ್ರೋಲ್‌ ಆಗಿತ್ತು. ಐಶ್ವರ್ಯಾ ಪೈ ಆಗಿದ್ದ ಅವರು ಟ್ಯೂಷನ್‌ ಹೇಳಿಕೊಡುತ್ತಿದ್ದರು. ಆ ವೇಳೆ ಅವರು ಪ್ರಿಯಕರನ ಜೊತೆ ಸೇರಿ ವಿದ್ಯಾರ್ಥಿನಿಯೋರ್ವರನ್ನು ಕಿಡ್ನ್ಯಾಪ್‌ ಮಾಡಿದ್ದರು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಮೇಲೆ ಈ ಪ್ರಕರಣ ಮುಚ್ಚಿ ಹೋಗಿತ್ತು. ಐಶ್ವರ್ಯಾ ಅವರು ನಿರಪರಾಧಿ ಎಂಬ ಸೆರ್ಟಿಫಿಕೇಟ್‌ ಸಿಕ್ಕಿತ್ತು. ಇದು 2014ರಲ್ಲಿ ನಡೆದಿತ್ತು. ಇದಾದ ಬಳಿಕ 2019ರಲ್ಲಿ ಮೋಕ್ಷಿತಾ ಪೈ ಅವರು ʼಪಾರುʼ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು.ಮೋಕ್ಷಿತಾ ಪೈ ಅವರು ಉಗ್ರಂ ಮಂಜು, ಗೌತಮಿ ಜಾಧವ್‌, ಶಿಶಿರ್‌ ಶಾಸ್ತ್ರೀ ಜೊತೆ ಜೊತೆ ಸ್ನೇಹದಿಂದ ಇದ್ದರು. ಆಮೇಲೆ ಮಂಜು, ಗೌತಮಿಯಿಂದ ಮೋಕ್ಷಿತಾ ಪೈ ದೂರ ಆಗುವ ಹಾಗೆ ಆಯ್ತು. ಈದೀಗ ಮೈಸೂರು ದೇವಿ ಸನ್ನಿಧಿಯಲ್ಲಿ ಎಲ್ಲರು ಮತ್ತೊಮ್ಮೆ ಬೇಟಿ ಆಗಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.