ವಾರದ ಮೊದಲ ದಿನವೇ ಆಟದಲ್ಲಿ‌‌ ಸೋತು ಫಿನಾಲೆ ಟಿಕೆಟ್ ಕೈತಪ್ಪಿಸಿಕೊಂಡ ರಜತ್, ಭವ್ಯಾ ಮುಖದಲ್ಲಿ ನಗು

 | 
Gh
ಬಿಗ್ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಕಾಂಪಿಟೇಶನ್ ಹೆಚ್ಚಿದೆ. ಯಾರು ಗೆಲ್ತಾರೆ ಯಾರು ಮನೆ ಸೇರ್ತಾರೆ ಹೇಳೋಕೆ ಆಗದು. ಹೌದು. ಇದೀಗ ಬಿಗ್ಬಾಸ್ ಮಿಡ್ ವೀಕಲ್ಲೇ ಮನೆಯಿಂದ ಸ್ಪರ್ಧಿಯೊಬ್ಬರು ಹೊರಬೀಳಲಿರುವುದು ಖಚಿತ ಎಂದಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಸ್ಪರ್ಧಿಯ ಮನದಲ್ಲಿ ತಲ್ಲಣ ಎದುರಾಗಿದೆ.
ಸ್ನೇಹಿತರೇ... ಇದೀಗ ಬಿಗ್ಬಾಸ್ ವಾರದ ಟಾಸ್ಕ್ ಗೆಲ್ಲುವ ಸದಸ್ಯ ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಗ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಮೊಕ್ಷಿತಾ ಹಾಗೂ ಭವ್ಯಾ ಗೌಡ ಸೇರಿಕೊಂಡು ರಜತ್ ಕಡೆಗೆ ಟಾರ್ಗೆಟ್ ಮಾಡಿದಂತಿದೆ. ಬಿಗ್ಬಾಸ್ ನೀಡಿದ್ದ ಟಾಸ್ಕ್ ಒಂದಕ್ಕೆ ಹೆಚ್ಚು ಮರದ ತುಂಡನ್ನು ನೆಟ್ ಒಳಗೆ ಹೊಂದಿದ ಸದಸ್ಯ ಎಲಿಮಿನೇಟ್ ಆಗ್ತಾರೆ ಅಂದಿದ್ದಕ್ಕೆ ಮೊಕ್ಷೀತಾ ಹಾಗೂ ಭವ್ಯಾ ರಜತ್ ಚಿತ್ರ ಇದ್ದ ನೆಟ್ ಗೆ ಹೆಚ್ಚಾಗಿ ಮರದ ತುಂಡನ್ನು ಹಾಕಿದ್ದಾರೆ ಎನ್ನುವ ವಿಡಿಯೋ ತುಣುಕುಗಳು ಬಿಡುಗಡೆ ಆಗಿವೆ.
ಸ್ನೇಹಿತರೆ.. ಆದರೆ ಇದೀಗ ಅದೇ ಕಾರಣದಿಂದ ಮೋಕ್ಷಿಯಾ ಹಾಗೂ ಭವ್ಯಾ ತ್ರಿವಿಕ್ರಮ್ ಹಾಗೂ ರಜತ್ ಅವರಿಂದ ಟಾರ್ಗೆಟ್ ಆಗಿದ್ದಾರೆ.. ಸಮರ್ಥನೆ ಮಾಡಿಕೊಳ್ಳಬೇಕು. ನೆಗೆಟಿವ್ ಎಲಿಮಿನೇಷನ್ ಇಂದ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡ್ತಿರಾ ಅಂತ ಹೇಳಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಿರುವ ಬಿಗ್ಬಾಸ್ ಅಂತಿಮ ಹಂತದಲ್ಲಿದೆ. ಈ ವಾರ ಮುಗಿಯೋದ್ರ ಒಳಗಾಗಿ ಮತ್ತೊಮ್ಮೆ ಸ್ಪರ್ಧಿ ಮನೆ ಸೇರ್ತಾರೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ವಿನ್ನರ್ ಯಾರಾಗ್ತಾರೆ ಅನ್ನೊ ಕುತೂಹಲಕ್ಕೆ ಕೂಡ ತೆರೆಬೀಳಲಿದೆ.