ನೆನಪಿರಲಿ‌ ಪ್ರೇಮ್ ಕಷ್ಟಪಟ್ಟು ಕಟ್ಟಿದ ‌ಮನೆ, ಇದುವೇ ನನ್ನ ಸ್ವರ್ಗ ಎಂದ ಲವ್ಲಿ ಸ್ಟಾರ್

 | 
ಹ್
 ಸ್ಯಾಂಡಲ್ವುಡ್ನಲ್ಲಿ ನೆನಪಿರಲಿ ಪ್ರೇಮ್ ಎಂತಲೇ ಚಿರಪರಿಚಿತರಾಗಿರುವ ಲವ್ಲಿ ಸ್ಟಾರ್ ಪ್ರೇಮ್ 18 ಏಪ್ರಿಲ್ 1976ರಲ್ಲಿ ಜನಸಿದರು. ಮೊದಲಿಗೆ ಕಿರುತೆರೆಯಲ್ಲಿ  ಟಿ.ಎನ್.ಸೀತಾರಾಮ್‌ ಅವರ ಮನ್ವಂತರ ಸೀರಿಯಲ್‌ನಲ್ಲಿ ಕಲಾವಿದರಾಗಿ ಬಣ್ಣ ಹಚ್ಚಿದ ಪ್ರೇಮ್ ನಂತರ ಆರ್ಧ ಸತ್ಯ ಎಂಬ ಧಾರಾವಾಹಿಯಲ್ಲೂ ಅವಕಾಶ ಪಡೆದರು. 
2004ರಲ್ಲಿ ಪ್ರಾಣ ಸಿನಿಮಾದಲ್ಲಿ ನಾಯಕ ನಟರಾಗಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟ ಪ್ರೇಮ್ ಆವರಿಗೆ ದೊಡ್ಡ ಪ್ರಮಾಣದಲ್ಲಿ ಬ್ರೇಕ್ ಕೊಟ್ಟಿದ್ದು 2005ರಲ್ಲಿ ತೆರೆಕಂಡ ನೆನಪಿರಲಿ ಚಿತ್ರ ನಟ ಪ್ರೇಮ್ ಗೆ ಸಿನಿ ಕರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿತು.  ಅಂದಿನಿಂದ ಅವರು ನೆನಪಿರಲಿ ಪ್ರೇಮ್ ಎಂತಲೇ ಖ್ಯಾತಿ ಪಡೆದಿದ್ದಾರೆ. 
2006ರಲ್ಲಿ ನಟ ಪ್ರೇಮ್, ಮೋಹಕ ತಾರೆ ರಮ್ಯಾ ಅವರೊಂದಿಗೆ ನಟಿಸಿದ ಜೊತೆ ಜೊತೆಯಲಿ ಸಿನಿಮಾ ಬರೋಬ್ಬರಿ 25 ವಾರಗಳಿಗೂ ಹೆಚ್ಚು ಪ್ರದರ್ಶನಕಂಡು ದಾಖಲೆಯನ್ನೇ ನಿರ್ಮಿಸಿತು. ಅಷ್ಟೇ ಅಲ್ಲ, ಇವರ ಜೀವನದಲ್ಲಿ ಹಣಕಾಸಿನ ಸ್ಥಿತಿಯನ್ನು ಸುಧಾರಿಸಿದ ಸಿನಿಮಾ ಕೂಡ ಹೌದು. 
2006ರಲ್ಲಿ ತೆರೆಕಂಡ ದಿನಕರ್ ತೂಗದೀಪ್ ನಿರ್ದೇಶನದ ಜೊತೆ ಜೊತೆಯಲಿ ಸಿನಿಮಾದಲ್ಲೇ ಹೆಚ್ಚು ಹಣ ನೋಡಿದ್ದು ಎಂದು ಸ್ವತಃ ನಟ ಪ್ರೇಮ್ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಸಿನಿಮಾದಿಂದಲೇ ತಮ್ಮ ಕಷ್ಟದ ಸಮಯಗಳು ಕಳೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು. ಸ್ವಂತ ಮನೆ ಕಟ್ಟಿಸಿದ್ದು ಅದು ಬೆಂಗಳೂರಿನ ವಿನಾಯಕ ನಗದರ ಎರಡನೇ ರಸ್ತೆಯಲ್ಲಿ ಎಂದು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.