ಅವಕಾಶವಿಲ್ಲದೆ ಮರ ಹತ್ತಲು ಶುರು ಮಾಡಿದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ, ಅವತಾರ ನೋಡಲು ಎರಡು ಕಣ್ಣು ಸಾಲಲ್ಲ

 | 
Hs
 ಸ್ಯಾಂಡಲ್‌ವುಡ್‌ ನಟಿ ಸಂಯುಕ್ತಾ ಹೆಗಡೆ ಇತ್ತೀಚಿಗೆ ತಮ್ಮ ಬಿಡುವಿನ ಸಮಯವನ್ನು ಬಾಲಿ ದ್ವೀಪದಲ್ಲಿ ಕಳೆದಿದ್ದಾರೆ. ಅಲ್ಲಿನ ಸುಂದರ ಬೀಚ್‌ಗಳಲ್ಲಿ ವಿಹರಿಸಿರುವ ಅವರು ಅಲ್ಲಿನ ಸಂಸ್ಕ್ಕೃತಿಯೊಂದಿಗೆ ಬೆರೆತು ಗಮನ ಸೆಳೆದಿದ್ದಾರೆ. ಅವೆಲ್ಲವನ್ನೂ ಮೀರಿ ಅಲ್ಲಿನ ಸುಂದರ ತಾಣಗಳಲ್ಲಿ ವಿಭಿನ್ನ ಫೋಟೊಶೂಟ್‌ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ.
ಅವರು ಬಾಲಿಯಲ್ಲಿ ಟೆಲಿಫೋನ್‌ ಬೂತ್‌ನಲ್ಲಿ ಫೋನ್‌ ಹಿಡಿದು ನಿಂತಿರುವ ಭಂಗಿಯಿಂದ ಹಿಡಿದು ಹಲವು ಬಗೆಯ ಅಪರೂಪದ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. ಈ ಪೈಕಿ ಅವರು ತೆಂಗಿನ ಮರ ಏರುತ್ತಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ. ಅವರ ಈ ಸುಂದರ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟಿಸಿದ್ದಾರೆ. 
ಕೆಲವರು ಅವರನ್ನು ‘ಮುದ್ದಾದ ಕೋತಿ’ ಎಂದಿದ್ದಾರೆ. ಹಲವರು ಅವರ ಹಾಟ್‌ ಆ್ಯಂಡ್‌ ಕ್ಯೂಟ್‌ ಲುಕ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಸಂಯುಕ್ತಾ ಹೆಗಡೆ ಅವರು ಆಗಾಗ ಪ್ರವಾಸ ಮಾಡುತ್ತಾ, ಹೊಸ ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಿರುತ್ತಾರೆ.ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಸಂಯುಕ್ತಾ ಹೆಗಡೆ ಅವರು ಬಹುಭಾಷೆಯಲ್ಲೂ ಫೇಮಸ್ ಆಗಿದ್ದಾರೆ.
ಕನ್ನಡ ಬಿಟ್ಟರೆ ತಮಿಳು ಸಿನಿಮಾಗಳಲ್ಲಿ ಸಂಯುಕ್ತಾ ಹೆಗಡೆ ಅವರು ಹೆಚ್ಚು ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲದೆ MTVಯ ರೋಡಿಸ್ ಕಾರ್ಯಕ್ರಮದ 15ನೇ ಸಂಚಿಕೆಯಲ್ಲಿ ಭಾಗವಹಿಸಿದ್ದ ಸಂಯುಕ್ತ, ಕನ್ನಡ ಬಿಗ್ ಬಾಸ್ 5ನೇ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ತಮಿಳಿನಲ್ಲಿ ವಾಚ್‌ಮಾನ್, ಕೋಮಲಿ, ಪಪ್ಪಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.