ಶಿವಣ್ಣನಿಗೆ ಕ್ಯಾನ್ಸರ್ ಚಿಕಿತ್ಸೆ ಯಶಸ್ವಿ, ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ದಂಪತಿಗಳು

 | 
ಹೈ
ವರನಟ ರಾಜ್ಕುಮಾರ್ ಪುತ್ರ ಶಿವರಾಜ್ ಕುಮಾರ್ ಅವರು ಇತ್ತಿಚೆಗೆ ತೀರಾ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಅಮೆರಿಕಾದ ಪ್ರತಿಷ್ಠಿತ ವೈದ್ಯರ ‌ಮೊರೆ ಹೋಗಿದ್ದರು. ಶಿವಣ್ಣ ಅವರನ್ನು ಸಂಪೂರ್ಣವಾಗಿ ಪರಿಶೀಲಿಸಿದ ವೈದ್ಯರಿಗೆ ಕ್ಯಾನ್ಸರ್ ಖಾಯಿಲೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು..
ನಂತರದಲ್ಲಿ ಈ ಬಗ್ಗೆ ಆತಂಕ ಬೇಡ ಎಂದು ಶಿವಣ್ಣನಿಗೆ ಸಮಾಧಾನ ಮಾಡಿದ್ದಾರೆ ಡಾಕ್ಟರ್. ಇನ್ನು ಪತ್ನಿ‌ ಜೊತೆ ಅಮೆರಿಕಾದಿಂದ ಮರಳಿ‌ ಭಾರತಕ್ಕೆ‌ ಬಂದಿದ್ದ ಶಿವಣ್ಣ ಮತ್ತೆ ಎಂದಿನಂತೆ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇನ್ನು ಇತ್ತಿಚೆಗೆ ತಿರುಪತಿ ತಿಮ್ಮಪ್ಪನ ಬಳಿ ಹೋಗಿದ್ದ ಶಿವಣ್ಣ ಹಾಗೂ ಪತ್ನಿ ಶ್ರೀ ವೆಂಕಟರಮಣನಿಗೆ ಮುಡಿಕೊಟ್ಟು ವಾಪಸಾಗಿದ್ದಾರೆ‌.
ಶಿವಣ್ಣ ತಿರುಪತಿಯಿಂದ ಬಂದ ಬಳಿಕ ಜಾಲತಾಣದಲ್ಲಿ ಹೊಸ ವಿಚಾರ ವೈರಲ್ ಆಗಿತ್ತು. ಶಿವಣ್ಣ ಅವರಿಗೆ ಕ್ಯಾನ್ಸರ್ ಗುಣಮುಖವಾಗಿ ಮುಡಿಕೊಟ್ಟಿದ್ದಾರೆ ಎಂಬ ವಿಚಾರ. ಆದರೆ ಇದು ಶುದ್ಧ ‌ಸುಳ್ಳು, ಶಿವಣ್ಣ ಅವರು ತಿಮ್ಮಪ್ಪನ ಬಳಿ ಯಾವ ಕಾರಣಕ್ಕೆ ಹರಕೆ ಹೊತ್ತು ಮುಡಿ ಕೊಟ್ಟಿದ್ದಾರೆ ಎಂಬ ವಿಚಾರ ಇನ್ನೂ ಬೆಳಕಿಗೆ ಬಂದಿಲ್ಲ