ದೀಪಾವಳಿ ಹಬ್ಬಕ್ಕೆ ಸಿಹಿಸುದ್ದಿ ಕೊಟ್ಟ ಜೋಡಿ; ತರುಣ್ ತುಂಬಾ ಅವಸರದ ಹುಡುಗ ಎಂದ ಸೋನಲ್
Oct 30, 2024, 13:29 IST
|

ಕಳೆದೆರಡು ತಿಂಗಳ ಹಿಂದೆ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು .3 ದಿನಗಳ ಕಾಲ ವಿವಿಧ ಮದುವೆ ಶಾಸ್ತ್ರಗಳು ನಡೆದಿದ್ದವು .ಚಿತ್ರರಂಗದ ಹಲವರು ಮದುವೆ ಸಮಾರಂಭಕ್ಕೆ ಹಾಜರಾಗಿ ನವ ವಧು-ವರರನ್ನು ಆಶೀರ್ವದಿಸಿದ್ದರು. ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತಾರಾಲೋಕವೇ ಧರೆಗಿಳಿದಿತ್ತು.
ರಾಬರ್ಟ್' ಚಿತ್ರದಲ್ಲಿ ತರುಣ್ ಹಾಗೂ ಸೋನಲ್ ಒಟ್ಟಿಗೆ ಕೆಲಸ ಮಾಡಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಶುರುವಾಗಿತ್ತು. ಆ ಸ್ನೇಹ ಮುಂದೆ ಪ್ರೀತಿ ತಿರುಗಿ ಇದೀಗ ಮದುವೆಯ ಮುದ್ರೆ ಬಿದ್ದಿದೆ. ಆದರೆ 'ರಾಬರ್ಟ್' ಸಿನಿಮಾ ಸಮಯದಲ್ಲಿ ನಮ್ಮಿಬ್ಬರನ್ನು ದರ್ಶನ್ ರೇಗಿಸುತ್ತಿದ್ದರು. ಆಗ ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಇರಲಿಲ್ಲ. 'ಕಾಟೇರ' ಸಿನಿಮಾ ಸಮಯದಲ್ಲಿ ಇಬ್ಬರೂ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡೆವು ಎಂದು ತರುಣ್ ಹೇಳಿದ್ದರು.
ತರುಣ್ ಹಾಗೂ ಸೋನಲ್ ಮದುವೆ ನೆರವೇರಿದೆ. ಬಹಳ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಿತು. ಆದರೆ ಇಡೀ ಸಮಾರಂಭದಲ್ಲಿ ಅದೊಂದು ಕೊರತೆ ಎದ್ದು ಕಾಣುತ್ತಿತ್ತು ಎನ್ನುವುದು ಕೆಲವರ ಅಭಿಪ್ರಾಯ. ಅದು ನಟ ದರ್ಶನ್ ಉಪಸ್ಥಿತಿ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿ 90 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ದರ್ಶನ್- ತರುಣ್ ಸ್ನೇಹ ಎಂಥದ್ದು ಎನ್ನುವುದು ಗೊತ್ತೇಯಿದೆ.
ಇನ್ನು ಸೋನಾಲ್ ಮಂಥೆರೊಗೂ ದರ್ಶನ್ ಆಪ್ತರಾಗಿದ್ದರು. ಹಾಗಾಗಿ ಮದುವೆ ಮನೆಯಲ್ಲಿ ಅವರು ಇದ್ದದ್ದರೆ ಚೆನ್ನಾಗಿತ್ತು ಎಂದು ತರುಣ್, ಸೋನಲ್, ನಂದಕಿಶೋರ್ ಆದಿಯಾಗಿ ಹಲವರು ಹೇಳಿದ್ದಾರೆ. ದರ್ಶನ್ ಅಭಿಮಾನಿಗಳಂತೂ ಮದುವೆ ಸಮಾರಂಭದಲ್ಲಿ ನಮ್ಮ ಬಾಸ್ ಇದ್ದಿದ್ದರೆ ಚೆನ್ನಾಗಿತ್ತು ಎಂದು ಬೇಸರಿಸಿಕೊಂಡಿದ್ದಾರೆ. ಇನ್ನು ಸೋನಾಲ್ ಮಂಥೆರೋ ದಪ್ಪ ಆಗಿರೋದ್ರಿಂದ ವಿಶೇಷ ಇರಬಹುದು ಎಂದು ಕೂಡ ಹೇಳಲಾಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.