ಫಿಗರ್ ಚೆನ್ನಾಗಿದ್ದರೆ ಮಾತ್ರ ಡೈರೆಕ್ಟರ್ ಓಕೆ ಅಂತಾರೆ; ಅನುಪಮ ಗೌಡ
| Mar 2, 2025, 07:35 IST
ಕನ್ನಡ ಚಿತ್ರರಂಗದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಆಂಕರ್ ಆಗಿ ಕೆಲಸ ಮಾಡುವ ಅನುಪಮ ಗೌಡ ಅವರು ಇತ್ತಿಚೆಗೆ ಜಿಮ್ ವರ್ಕೌಟ್ ವಿಡಿಯೋ ಹಾಕಿ ಎಲ್ಲರ ಗಮನಸೆಳೆದಿದ್ದರು. ಹೌದು, ಸುಮಾರು 33 ವರ್ಷದ ಅನುಪಮ ಅವರು ಬಾಲ್ಯದಿಂದಲೇ ಕಷ್ಟಪಟ್ಟು ಬೆಳೆದು ಬಂದವರು.
ತಂದೆಯ ಪ್ರೀತಿ ಕಾಣದ ಈ ಹೆಣ್ಣು ಮಗಳು ಇವತ್ತು ಒಂಟಿ ಜೀವನದಲ್ಲೇ ಬೆಳೆದ ದಾರಿ ನಿಜಕ್ಕೂ ಮೆಚ್ಚುವಂತಹದ್ದು. ಹೌದು, ಸೀರಿಯಲ್ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ ತದನಂತರ ಆಂಕರ್ ವೃತ್ತಿ ಆಯ್ಕೆ ಮಾಡಿಕೊಂಡು ಇವತ್ತು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆಯ ಮೂಲಕ ತನ್ನ ಜೀವನ ಚೆನ್ನಾಗಿ ಇಟ್ಟುಕೊಂಡಿದ್ದಾರೆ.
ಇನ್ನು ಅನುಪಮ ಗೌಡ ಅವರು ಇತ್ತಿಚೆಗೆ ಜಿಮ್ ವರ್ಕೌಟ್ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತನ್ನ ದಿನನಿತ್ಯದ ಜೀವನದಲ್ಲಿ ಜಿಮ್ ಕೂಡ ಎಷ್ಟು ಮುಖ್ಯ ಎಂಬುವುದು ಈ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇನ್ನು ಚೆನ್ನಾಗಿರುವ ಫಿಗರ್ ಇರಬೇಕೆಂದರೆ ನಾವು ದಿನಲೂ ಇಂತಹ ಕಸರತ್ತು ಮಾಡಲೇಬೇಕು ಎನ್ನುತ್ತಾರೆ ಅನುಮಪಗೌಡ.