ಹೊಸ ವರ್ಷಕ್ಕೆ ವರ್ತೂರ್ ಸಿಹಿಸುದ್ದಿ, ತನಿಷಾ ಜೊತೆ ಮದುವೆ ಫಿಕ್ಸ್ ಆಗಿದೆ ಎಂದ ಸಂತು
Dec 30, 2024, 18:40 IST
|
ವರ್ತೂತ್ ಸಂತು ಹಾಗೂ ತನಿಷಾ ಅವರು ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡವರು. ಈ ಇಬ್ಬರ ಬಿಗ್ ಬಾಸ್ ಆಟ ನೋಡಿದ ವೀಕ್ಷಕರು ಫಿದಾ ಆಗಿದ್ದರು.
ಇನ್ನು ಈ ಜೋಡಿಯ ಮೋಡಿ ನೋಡಿ ಬಿಗ್ ಬಾಸ್ ಮುಗಿದ ಬಳಿಕವೂ ಇವರಿಬ್ಬರೂ ಮದುವೆ ಆಗಬೇಕು ಎಂಬುವುದು ಬಿಗ್ ಬಾಸ್ ವೀಕ್ಷಕರ ಆಸೆಯಾಗಿತ್ತು. ಈ ಇಬ್ಬರು ಜೋಡಿ ಶಿವಪಾರ್ವತಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ.
ಇನ್ನು ವರ್ತೂರ್ ಹಾಗೂ ತನಿಷಾ ಅವರು ಬಿಗ್ ಬಾಸ್ ಮುಗಿದ ಬಳಿಕ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಜೋಡಿ ಯಾವಾಗ ಮದುವೆ ಆಗುತ್ತಾರೆ ಎಂದು ವರ್ತೂರ್ ಸಂತು ಬಳಿ ಅಭಿಮಾನಿಗಳ ಕೊರಿಕೆಯಾಗಿದೆ.