ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
ಮಂಗಳೂರು: ಸ್ನೇಹಿತರೆ ನಮಸ್ಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಎಂಬುವುದು ಸಾಕಷ್ಟು ಹಳೆಯದಾದ ಒಂದು ಅಧ್ಬುತ ಕ್ರೀಡೆ. ಹೌದು, ಬಹುವರ್ಷಗಳ ಹಿಂದೆಯೇ ಈ ಕ್ರೀಡೆ ದಕ್ಷಿಣ ಕನ್ನಡದಲ್ಲಿ ಚಾಲ್ತಿಯಲ್ಲಿತ್ತು.
ಈ ಕ್ರೀಡೆ ವರ್ಷಕ್ಕೆ ಒಂದು ಬಾರಿ ದಕ್ಷಿಣ ಕನ್ನಡದ ಎಲ್ಲ ಭಾಗಗಳಲ್ಲೂ ನಡೆಯುತ್ತದೆ. ಈ ಕ್ರೀಡೆ ನೋಡಲು ಸಾಕಷ್ಟು ಜನರು ಸೇರುತ್ತಾರೆ. ದಕ್ಷಿಣ ಕನ್ನಡದ ಹಲವಾರು ಭಾಗಗಳಿಂದ ಕೋಟ್ಯಾಂತರ ಜನರು ಈ ಕ್ರೀಡೆ ವೀಕ್ಷಣೆ ಮಾಡುತ್ತಾರೆ. ಜೊತೆಗೆ ರಾಜ್ಯದ ರಾಜಕಾರಣಿಗಳು ಕೂಡ ಕಂಬಳ ಗದ್ದೆಯನ್ನು ನೋಡುತ್ತಾರೆ.
ಇನ್ನು ಈ ಕಂಬಳದ ಕೋಣಗಳಿಗೆ ಸಾಕಷ್ಟು ಬೇಡಿಕೆ ಇದೆ. ಹೌದು, ಒಂದು ಕಂಬಳದ ಕೋಣಗೆ ಸುಮಾರು ಒಂದು ಕೋಟಿ ವರೆಗೂ ಬೆಲೆ ನಿಗದಿ ಮಾಡಲಾಗುತ್ತದೆ. ದಕ್ಷಿಣ ಕನ್ನಡದ ಪರಂಪರೆಯ ಮನೆ ಅಥವಾ ಗುತ್ತು ಮನೆಗಳಲ್ಲಿ ಇಂತಹ ಕಂಬಳ ಕೋಣಗಳು ಹೆಚ್ಚಾಗಿ ಇರುತ್ತದೆ. ಈ ಕೋಣಗಳನ್ನು ಸಾಕುವುದು ಕೂಡ ಒಂದು ಕಷ್ಟಕರ ಕೆಲಸ. ಹೌದು, ಕಂಬಳ ಕೋಣಗಳಿಗೆ ಬೇಕಾದಷ್ಟು ಆಹಾರ ನೀಡಬೇಕು. ಜೊತೆಗೆ ಈ ಕೋಣಗಳಿಗೆ ಕಂಬಳ ಗದ್ದೆಯಲ್ಲಿ ಯಾವ ರೀತಿ ವರ್ತಿಸ ಬೇಕು ಎಂಬ ವಿಚಾರ ಕೂಡ ಅಚ್ಚುಕಟ್ಟಾಗಿ ಹೇಳಿ ಕೊಡಬೇಕಾಗುತ್ತದೆ.
ಇನ್ನು ಕಂಬಳ ಗದ್ದೆಗೆ ಇಳಿಯುವ ಕೋಣಗಳಿಗೆ ತನ್ನ ಒಡೆತನದ ಮನೆಯಲ್ಲಿ ಸಾಕಷ್ಟು ಪೂಜೆ ಕಾರ್ಯಕ್ರಮ ನೇರವೇರುತ್ತದೆ. ಜೊತೆಗೆ ತುಳುನಾಡಿನ ದೈವ, ದೇವರುಗಳ ಆಶೀರ್ವಾದ ಪಡೆಯಲಾಗುತ್ತದೆ. ನಂತರದಲ್ಲಿ ಕಂಬಳ ಗದ್ದೆಗೆ ಕೋಣಗಳನ್ನು ಇಳಿಸಲಾಗುತ್ತದೆ. ಇನ್ನು ಕಂಬಳ ಗದ್ದೆ ಕ್ರೀಡೆಯಲ್ಲಿ ಗೆದ್ದು ಬಂದ ಕೋಣಗಳಲ್ಲಿ ಸನ್ಮಾನ ಕೂಡ ಮಾಡಲಾಗುತ್ತದೆ.