ಸಿನಿಮಾದಲ್ಲಿ ಸೈ ಎನಿಸಿಕೊಂಡ ಕಿಚ್ಚ ಸುದೀಪ್, ಯಶಸ್ವಿ ಕ್ರಿಕೆಟರ್ ಆಗಿದ್ದು ಹೇಗೆ ಗೊತ್ತಾ
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕರುನಾಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಇವತ್ತು ಸಿನಿಮಾ ಮಾತ್ರವಲ್ಲದೇ ಕ್ರಿಕೆಟ್ ಜಗತ್ತಿನಲ್ಲೂ ಯಶಸ್ಸು ಕಂಡ ನಟ. ಹೌದು, ಕರ್ನಾಟಕ ಬುಲ್ಡೋಜರ್ಸ್ ಕ್ರಿಕೆಟ್ ಟೀಮ್ ಮೂಲಕ ಇಡೀ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ಅವರು ಮುಟ್ಟಿದೆಲ್ಲ ಚಿನ್ನವಾಗುತ್ತದೆ ಎಂಬುವುದಕ್ಕೆ ಹಲವಾರು ಉದಾಹರಣೆಗಳಿವೆ. ಅದರಲ್ಲೂ ಮುಖ್ಯವಾಗಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಾಕಷ್ಟು ಯಶಸ್ಸು ಕಂಡಿದ್ದರು. ಕರ್ನಾಟಕದಲ್ಲಿ ಅತಿ ಹೆಚ್ಚು ಟಿ ಆರ್ ಪಿ ಬರುವ ಶೋ ಗಳಲ್ಲಿ ಬಿಗ್ ಬಾಸ್ ಕೂಡ ಒಂದು.
ನಟ ಕಿಚ್ಚ ಸುದೀಪ್ ಅವರು ಯಾವುದೇ ಒಂದು ಕೆಲಸ ಕೈಗೆತ್ತಿಕೊಂಡರೆ ಸಾಕು, ಆ ಕೆಲಸದಲ್ಲಿ ಯಶಸ್ಸು ಕಾಣದೆ ಬಿಡುವುದಿಲ್ಲ. ಇದೀಗ ಕಿಚ್ಚ ಸುದೀಪ್ ಅವರು ಕರ್ನಾಟಕ ಬುಲ್ಡೋಜರ್ಸ್ ಟೀಮ್ ನಲ್ಲಿ ಸಾಕಷ್ಟು ಬಾರಿ ಗೆದ್ದು ಬಂದಿದ್ದಾರೆ. ಇತ್ತೀಚೆಗೆ ಕರ್ನಾಟಕ ಬುಲ್ಡೋಜರ್ಸ್ ಟೀಮ್ ಎರಡು ಬಾರಿ ಪ್ರಶಸ್ತಿ ಗೆದ್ದು ನಂತರದಲ್ಲಿ ಹಲವು ಬಾರಿ ರನ್ನರ್ ಆಪ್ ಕೂಡ ಆಗಿವೆ. ಕಿಚ್ಚ ಸುದೀಪ್ ರವರ ಬ್ಯಾಟಿಂಗ್ ಚಾಕಚಕ್ಯತೆಯಿಂದ ಸಾಕಷ್ಟು ಬಾರಿ ಕರ್ನಾಟಕ ಬುಲ್ಡೋಜರ್ಸ್ ಯಶಸ್ವಿಯಾಗಿ ಗೆದ್ದಿದೆ.