FactCheck:ನನ್ನ ಮಗಳಿಗೆ Matrimonial Site ಅಲ್ಲಿ ಗಂಡು ಹುಡುಕಿದ್ದು, ಸ್ಪಷ್ಟತೆ ಕೊಟ್ಟ ವೈಷ್ಣವಿ ತಾಯಿ

 | 
Iii
ಕಿರುತೆರೆ ನಟಿ ಹಾಗೂ ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮತ್ತು ಬಿಗ್‌ಬಾಸ್‌ನ ಮೂಲಕವೂ ಖ್ಯಾತಿ ಗಳಿಸಿರುವ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಸಂದರ್ಭದಲ್ಲಿ ವೈಷ್ಣವಿ ಗೌಡ, ಅವರ ತಾಯಿ ಹಾಗೂ ತಂದೆ ಸಹ ಮಾಧ್ಯಮಗಳೊಂದಿಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದು. ಕೆಲವೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. 
ಅದರಲ್ಲಿ ಈ ಹಿಂದೆ ವೈಷ್ಣವಿ ಗೌಡ ಅವರ ಎಂಗೇಜ್‌ಮೆಂಟ್‌ ಮುರಿದು ಬಿದ್ದಿರುವುದು ಹಾಗೂ ಇಬ್ಬರು ಹುಡುಗಿಯರಿಂದ ವೈಷ್ಣವಿ ಅವರ ಲೈಫ್ ಹೇಗೆ ಸರಿ ಹೋಯ್ತು ಎನ್ನುವುದರ ಬಗ್ಗೆ ಅವರ ತಾಯಿ ಭಾನು ರವಿಕುಮಾರ್ ಅವರು ಮಾತನಾಡಿದ್ದಾರೆ.ವೈಷ್ಣವಿ ಗೌಡ ಅವರು ಕಿರುತೆರೆಯಿಂದ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಸೀತಾರಾಮ ಸೀರಿಯಲ್‌ನಲ್ಲಿ ವಿಭಿನ್ನ ಪಾತ್ರದ ಮೂಲಕ ಫೇಮಸ್‌ ಆಗಿದ್ದಾರೆ. ಸೀತಾರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಸೀರಿಯಲ್‌ನಲ್ಲಿ ಬರದೆ ಇರುವ ಭಿನ್ನವಾದ ಪಾತ್ರ ವೈಷ್ಣವಿ ಅವರದ್ದು. 
ಸೀರಿಯಲ್‌ ಮುಖ್ಯಘಟ್ಟದಲ್ಲಿ ಇರುವಾಗಲೇ ಅವರು ವೈಯಕ್ತಿಕ ಜೀವನದಲ್ಲೂ ಮಹತ್ವದ ಬೆಳವಣಿಗೆ ನಡೆದಿದೆ. ಏರ್‌ಫೋರ್ಸ್‌ನಲ್ಲಿರುವ ಅನುಕೂಲ್ ಮಿಶ್ರಾ ಎಂಬುವವರೊಂದಿಗೆ ವೈಷ್ಣವಿ ಅವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ವೈಷ್ಣವಿ ಅವರ ಕುಟುಂಬದವರು ಈ ವಿವಾಹ ಹಾಗೂ ಈ ಹಿಂದಿನ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ವೈಷ್ಣವಿ ಅವರಿಗೆ ಈ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಿತ್ತು. ಇದೀಗ ಅನುಕೂಲ್ ಮಿಶ್ರಾ ಅವರೊಂದಿಗೆ ಎಂಗೇಜ್ಮೆಂಟ್ ಆದ ಮೇಲೆ ಈ ವಿಷಯವೂ ಚರ್ಚೆಯಾಗುತ್ತಿದ್ದು ಇದರ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ. ವೈಷ್ಣವಿ ತನ್ನದಲ್ಲದ ತಪ್ಪಿಗೆ ನೋವು ಅನುಭವಿಸುವಂತೆ ಆಗಿತ್ತು. ಆ ಹುಡುಗನ ಬಗ್ಗೆ ಆಗ ಮಾತನಾಡಿ, ಆ ಇಬ್ಬರು ಹುಡುಗಿಯರು ಸಹಾಯ ಮಾಡಿದರು. ಅವರಿಬ್ಬರಿಗೂ ಧನ್ಯವಾದ ಹೇಳುತ್ತೇನೆ. ಏನು ಎನ್ನುವುದನ್ನ ಅವರು ತಿಳಿಸಿದರು. ಆದರೆ ಅವರು ಯಾರು ಅಂತ ಗೊತ್ತಿಲ್ಲ. ಆದರೆ ಅವರಿಂದ ನಮಗೆ ತುಂಬಾನೇ ಉಪಕಾರವಾಗಿದೆ ಅಂತ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub