ಕ್ರಿಕೆಟ್ ಆಟಗಾರರಿಗೆ ಯಾಕೆ ಅಷ್ಟೊಂದು ಹಣ ನೀಡಲಾಗುತ್ತದೆ, ಕ್ರಿಕೆಟ್ ಜಗತ್ತಿಗೆ ಕಾಲಿಟ್ಟವರು ಶ್ರೀಮಂತರು ಆಗುವುದು ಹೇಗೆ
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕ್ರಿಕೆಟ್ ಜಗತ್ತಿಗೆ ಕಾಲಿಡುವ ಆಟಗಾರರು ಒಂದೇ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ಜೊತೆಗೆ ತಮ್ಮ ಜೀವನದಲ್ಲಿ ಯಾವತ್ತೂ ಹಣದ ಸಮಸ್ಯೆ ಬಂದಂತಹ ಮಟ್ಟಿಗೆ ಬೆಳೆದು ನಿಲ್ಲುತ್ತಾರೆ. ಹೌದು, ಒಬ್ಬ ಸಮಾನ್ಯ ವ್ಯಕ್ತಿ ಭಾರತದ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಆತನ ಜೀವನವೇ ಬದಲಾಗುತ್ತದೆ.
ಏಕೆಂದರೆ, ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಕ್ರಿಕೆಟ್ ವೀಕ್ಷಣೆ ಮಾಡುವವರ ಸಂಖ್ಯೆ ಜಾಸ್ತಿ. ಹೌದು, ಭಾರತದಲ್ಲಿ IPL ಕ್ರಿಕೆಟ್ ಕ್ರೀಡೆ ನಡೆಯುವಾಗ ಇಡೀ ವಿಶ್ವವೇ ಈ ಆಟವನ್ನು ನೋಡುತ್ತಿರುತ್ತದೆ. ಜೊತೆಗೆ ಎಲ್ಲ ಟಿವಿ ಮಾಧ್ಯಮಗಳಲ್ಲಿ ಕ್ರಿಕೆಟ್ ಆಟದ ನೇರ ಪ್ರಸಾರ ಕಂಡುಬರುತ್ತದೆ.
ಇನ್ನು ಟಿವಿ ಮಾಧ್ಯಮ ಹಾಗೂ ಮೊಬೈಲ್ ಗಳಲ್ಲಿ ಕ್ರಿಕೆಟ್ ಆಟ ಕಂಡು ಬರುವ ಮೂಲಕ ಸಾಕಷ್ಟು ಹಣದ ಮೂಲ ಈ ಕ್ರಿಕೆಟ್ ಜಗತ್ತಿಗೆ ಹರಿದು ಬರುತ್ತದೆ. ಹೌದು, ಕೋಟ್ಯಾಂತರ ಜನ ಕ್ರಿಕೆಟ್ ನೋಡುವ ಮೂಲಕ ಸಾಕಷ್ಟು ಜಾಹೀರಾತುಗಳು ಟಿವಿ ಹಾಗೂ ಮೊಬೈಲ್ ಪರದೆಯ ಮೇಲೆ ಕಾಣುವ ಮೂಲಕ, ಎಲ್ಲ ಜಾಹಿರಾತು ಕಂಪನಿಗಳು ಈ ಕ್ರಿಕೆಟ್ ಒಡೆತನದ ವ್ಯಕ್ತಿಗಳಿಗೆ ಹಣ ಪಾವತಿ ಮಾಡುತ್ತಾರೆ.
ಜೊತೆಗೆ ಕ್ರಿಕೆಟ್ ಆಟಗಾರರಿಗೆ ಪ್ರತಿ ತಿಂಗಳು ಸಂಬಳದ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಜೊತೆಗೆ IPL ಬಂದಾಗ ಕ್ರಿಕೆಟ್ ಆಟಗಾರರಿಗೆ ಕೋಟ್ಯಾಂತರ ಬೆಲೆಗಳ ಮೂಲಕ ಕೆಲವೊಂದು ಕ್ರಿಕೆಟ್ ಕಂಪನಿಗಳಿಗೆ ಮಾರಟವಾಗುತ್ತಾರೆ. IPL ನಡೆಸುವ ಕೋಟಿಯ ಸರದಾರರಿಗೆ ಈ ಕ್ರಿಕೆಟ್ ಆಟಗಾರರು ಮಾರಾಟವಾಗುತ್ತಾರೆ. ಇದರಿಂದ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಆಟಗಾರರಿಗೆ ಬೇಕಾದಷ್ಟು ಆಸ್ತಿ ಪಾಸ್ತಿ ಮಾಡಲು ಅವಕಾಶ ಒದಗಿಬರುತ್ತದೆ.