ಕಿಚ್ಚನ ಚಪ್ಪಾಳೆ ಯಾವನಿಗೆ ಬೇಕು ಸ್ವಾಮಿ, ಕಿ.ಡಿಕಾರಿದ ಆರ್ಯವರ್ಧನ್ ಗುರೂಜಿ

 | 
Hh

ಆರ್ಯವರ್ಧನ ಗುರೂಜಿ ಈದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಆಗಾಗ ಏನೇನೋ ಹೇಳಿಕೆಯನ್ನು ನೀಡುತ್ತಾ ಜನರ ಗಮನ ಸೆಳೆಯುತ್ತಿದ್ದ ಇವರು ಕೆಲ ದಿನಗಳ ಹಿಂದಷ್ಟೇ ಹುಲಿ ಉಗುರು ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದರು. ಇದೀಗ ಬಿಗ್ಬಾಸ್ ಬಗ್ಗೆ  ಹಾಗೂ ನಟ ಸುದೀಪ್ ಕುರಿತು ಹೇಳಿಕೆ ನೀಡಿರುವ ವೀಡಿಯೊ ಒಂದು ವೈರಲ್ ಆಗುತ್ತಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಗ್ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿದ್ದ ಆರ್ಯವರ್ಧನ್ ಗುರೂಜಿ ತಮ್ಮ ಮಾತಿನಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ರು. ಬಿಗ್ ಬಾಸ್ ಸೀಸನ್ 9ರ ಫೈನಲ್ ನಾಲ್ಕು ಸ್ಪರ್ಧಿಗಳಲ್ಲಿ ಆರ್ಯವರ್ಧನ್ ಗುರೂಜಿ ಕೂಡ ಒಬ್ಬರಾಗಿದ್ರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿದ್ದ ಆರ್ಯವರ್ಧನ್ ಗುರೂಜಿ ಫೈನಲ್‍ ತಲುಪುತ್ತಾರೆ ಅಂತಾನೇ ಫ್ಯಾನ್ಸ್ ಖುಷಿಯಲ್ಲಿದ್ದರು. 

ಆದರೆ ಅನಿವಾರ್ಯವಾಗಿ ಬಿಗ್ ಬಾಸ್ 9ರ ಮನೆಯಿಂದ ಹೊರಬಿದ್ದಿದ್ದರು  ಅದು ಅಭಿಮಾನಿಗಳಿಗೆ ಒಂದು ರೀತಿ ಶಾಕ್ ಆಗಿತ್ತು. ಇನ್ನು ಎಲ್ಲೆಡೆ ಅವರಿಗೆ ಸಂಧಾಯವಾಗಿರುವ ಹಣ ಸರಿಸುಮಾರು 40 ಲಕ್ಷ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಎಲಿಮಿನೇಟ್ ಆಗಿ ಹೊರ ಬಂದವರಿಗೆ 20 ಸಾವಿರ ರೂಪಾಯಿ ಸಿಕ್ಕಿರುವುದು ಹೆಚ್ಚು ಎನ್ನುತ್ತಾರೆ. 

ಇದಕ್ಕೂ ಮೀರಿ ಸುದೀಪ್ ಯಾರಿಗಾದರೂ ಆಕ್ಟಿಂಗ್‌ನಲ್ಲಿ ಅವಕಾಶ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಬರುವ ವೋಟ್‌ಗಳನ್ನು ಟಿವಿಯಲ್ಲಿ ತೋರಿಸಬೇಕು. ಪಬ್ಲಿಕ್ ಮೇಲೆ ಎತ್ತಾಕಬಾರದು. ಹೀಗೆ ಮಾಡಿ ಪಬ್ಲಿಕ್‌ನ ಬಕ್ರಾ ಮಾಡ್ತಾರೆ ಜನರನ್ನು ದಡ್ರು ಮಾಡ್ತಾರೆ.

ಮೊದಲು ಸೇಫ್ ಆಗಿರುವವರ ವೋಟ್‌ ಮತ್ತು ಕೊನೆಯಲ್ಲಿ ಎಲಿಮಿನೇಟ್ ಆಗುವವರು ವೋಟ್ ಎಷ್ಟು ಬಂದಿದೆ ತೋರಿಸಬೇಕು. ಅದನ್ನು ಬಿಟ್ಟು ಸುಮ್ಮನೆ ಹೇಳೋದಲ್ಲ . ಇದು ಬರೀ ಕಾಂಟ್ರವರ್ಸಿ ಮಾಡುತ್ತದೆ. ಇಲ್ಲಿ ಯಾರೂ ಚಪ್ಪಾಳೆಯ ಸದ್ದು ಕೇಳೋಣ ಅಂತ ಬರೋದಿಲ್ಲ. ಅದ್ರ ಬದಲು ಹಣ ನೀಡಿ ಎಂದು ಆರ್ಯವರ್ಧನ್ ಗುರೂಜಿ ಬಿಗ್ಬಾಸ್ ಕುರಿತಾಗಿ ಹೇಳಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.