'ಶ್ರುತಿ ಹರಿಹರನ್ ತನ್ನನ್ನು ತಾನೇ ಪತಿವ್ರತೆ ಅಂತ ಅಂದುಕೊಂಡಿದ್ದಾಳೆ' ಶ್ರುತಿಯ ಮತ್ತೊಂದು ‌ಮುಖ ಬಿ.ಚ್ಚಿಟ್ಟ ಡೈರೆಕ್ಟರ್ ಗುರುಪ್ರಸಾದ್

 | 
Jdjs

ಅಯೋಧ್ಯೆ ಕೇವಲ ಬಿಜೆಪಿಯವರ ದೇವಸ್ಥಾನ ಅನ್ನಿಸುತ್ತದೆ ಎಂದು ಇತ್ತಿಚಿಗೆ ಎಲ್ಲರ ಕೆಂಗಣ್ಣಿಗೆ ಗುರಿಯಾದ ನಟಿ ಶ್ರುತಿ ಹರಿಹರನ್ ಅವರು.ನಟ ಜಗ್ಗೇಶ್ ಅಭಿನಯದ ‘ರಂಗನಾಯಕ’ ಸಿನಿಮಾದ ಹಾಡೊಂದು ಈಗ ವಿವಾದದ ಕೇಂದ್ರ ಬಿಂದು ಆಗಿದೆ. ಈ ಹಾಡಿನಲ್ಲಿ ಬಿಗ್ ಬಾಸ್ ಶ್ರುತಿ, ಮೀಟೂ ಶ್ರುತಿ ಎಂದು ಬಳಕೆ ಮಾಡಲಾಗಿದೆ. ರಂಗನಾಯಕ ಸಿನಿಮಾಕ್ಕೂ, ಮೀಟೂ ಶ್ರುತಿಗೂ, ಬಿಗ್ ಬಾಸ್ ಶ್ರುತಿಗೂ ಸಂಬಂಧವೇ ಇಲ್ಲ.

ಇತ್ತೀಚಿಗಷ್ಟೇ ನಟ ಜಗ್ಗೇಶ್ ಅಭಿನಯದ ‘ರಂಗನಾಯಕ’ ಸಿನಿಮಾದ ‘ಗಾಳಿ ತಂಗಾಳಿ’ ಎನ್ನುವ ಹಾಡು ರಿಲೀಸ್ ಆಗಿದೆ. ಅದರಲ್ಲಿ ಎ ಆರ್ ವಿಖ್ಯಾತ್ ಸಾಹಿತ್ಯವಿದ್ದು, ಜೆ ಅನೂಪ್ ಸೀಳಿನ್ ಅವರ ಸಂಗೀತ ಇದೆ. ಈ ಹಾಡಿನಲ್ಲಿ ಕನ್ನಡದ ವೈಭವವನ್ನು ವರ್ಣಿಸಲಾಗಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ಅವರು ಕತ್ತೆ ಮೇಯಿಸುತ್ತಿರುತ್ತಾರೆ. ಹಾಡೊಂದರಲ್ಲಿ ಕತ್ತೆಗಳು ಕೂಗುವುದು. 

ಹಾಗೆಯೇ ಇದ್ದಕ್ಕಿದ್ದಂತೆ ಈ ಹಾಡಿನಲ್ಲಿ ಬಿಗ್ ಬಾಸ್ ಶ್ರುತಿ, ಮೀಟೂ ಶ್ರುತಿ ಅಂತ ಪದ ಬಳಕೆ ಮಾಡಲಾಗಿದೆ. ಯಾಕೆ ಈ ರೀತಿ ಪದ ಬಳಕೆ ಮಾಡಿದರು ಎನ್ನೋದಕ್ಕೆ ಗುರುಪ್ರಸಾದ್ ಅವರು ಸಂದರ್ಶನಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ. ಶರಣ್ ಅವರ ಸಹೋದರಿ ಬಿಗ್ ಬಾಸ್ ಶ್ರುತಿ. ಜಗ್ಗೇಶ್ ಅವರು ಸಿನಿಮಾದಲ್ಲಿ ಕತ್ತೆ ಮೇಯಿಸುತ್ತಾರೆ. ಸಂಗೀತದಲ್ಲಿ ಶ್ರುತಿ ತುಂಬ ಮುಖ್ಯ. ಜಗ್ಗೇಶ್ ಹಾಡುವಾಗ ಖುಷಿಗೆ ಕತ್ತೆಗಳು ಕೂಗುತ್ತವೆ. ಅದು ಸಂಗೀತದ ಪ್ರಕಾರ ಶ್ರುತಿ. 

ಆದರೆ ಶ್ರುತಿ ಬಿಟ್ಟು ಹಾಡಿದ್ದಕ್ಕೆ ಶ್ರುತಿ ಹರಿಹರನ್ ಅಂತ ಬೇಕು ಅಂತ ಪದ ಹಾಕಿದ್ದಾರೆ. ನಿನ್ನ ಗಂಡ ನನ್ನ ಮೇಲೆ ಆಸೆ ಪಟ್ಟ ಅಂತ ಅವನ ಹೆಂಡ್ತಿಗೆ ಹೇಳಿದರೆ ಮುಗೀತಾ ಇತ್ತು, ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಅವಳು ಪತಿವ್ರತೆ ಅಂತ ಸಾಬೀತುಮಾಡಿಸಲು ಹೋಗಿದ್ದಳು. ಮೀಟೂ ಶ್ರುತಿ ಕನ್ನಡದಲ್ಲಿ ರಾಡಿ ಎಬ್ಬಿಸಿದ್ದಳು. ನನಗೆ ಶ್ರುತಿ ಮೇಲೆ ಕೋಪ ಇತ್ತು. ಸಿನಿಮಾ ನನ್ನ ಮಾಧ್ಯಮ. 

ಹಾಗಾಗಿ ಈ ಮೂಲಕ ನಾನು ಸಿಟ್ಟು ತೀರಿಸಿಕೊಂಡೆ” ಎಂದು ಗುರುಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದಾರೆ.ನಟಿ ಶ್ರುತಿ ಹರಿಹರನ್ ಅವರು ಬಹುಭಾಷಾ ನಟನ ಮೇಲೆ ಮೀಟೂ ಆರೋಪ ಮಾಡಿದ್ದರು. ಅದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.