ಚಂದ್ರಯಾನ-3 ಯಶಸ್ವಿ ಆಗುತ್ತೆ ಅನ್ನೋದಕ್ಕೆ ಸಿಕ್ತು 3 ಸಾಕ್ಷಿಗಳು, ಎಲ್ಲರೂ ತಪ್ಪದೇ ನೋಡಿ

 | 
ರಿ

 ಚಂದಿರನನ್ನು ತಲುಪುವ ಭಾರತದ ಮೂರನೇ ಪ್ರಯತ್ನವಾದ ಚಂದ್ರಯಾನ-3 ಮಿಷನ್​ಗೆ ಈಗ ಚಾಲನೆ ದೊರೆತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಡಾವಣಾ ವಾಹನ ಜಿಎಸ್​ಎಲ್​ವಿ ಮಾರ್ಕ್ 3 (ಎಲ್​ಎಂವಿ 3) ಹೆವಿ-ಲಿಫ್ಟ್ ಮೂಲಕ ಬಾಹ್ಯಾಕಾಶ ನೌಕೆಯನ್ನು ಚಂದಿರನತ್ತ ಉಡಾಯಿಸಿದೆ.

2019ರಲ್ಲಿ ಕೈಗೊಳ್ಳಲಾದ ಚಂದ್ರಯಾನ- 2 ಮಿಷನ್​ನ ಅನುಸರಣೆ ಹಾಗೂ ಪ್ರತಿರೂಪವೇ ಆಗಿದೆ ಚಂದ್ರಯಾನ-3. ಬಾಹ್ಯಾಕಾಶ ನೌಕೆಯು ತನ್ನ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚಂದ್ರಯಾನ-2ರ ಮಿಷನ್ ಭಾಗಶಃ ವೈಫಲ್ಯವನ್ನು ಅನುಭವಿಸಿತ್ತು. ಈ ವೈಫಲ್ಯದಿಂದ ಹೊರಬಂದು ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಇಸ್ರೋ ಮರುಯತ್ನಕ್ಕೆ ಮುಂದಾಗಿದೆ.

ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಇಳಿಯುವ ಪ್ರದೇಶವು ಬಹುತೇಕವಾಗಿ ಚಂದ್ರಯಾನ-2 ರೀತಿಯಲ್ಲಿಯೇ ಇದೆ. 70 ಡಿಗ್ರಿ ಅಕ್ಷಾಂಶದಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಲ್ಯಾಂಡರ್ ಅವರೋಹಣವಾಗಲಿದೆ. ಚಂದ್ರಯಾನ-3 ರ ಮಾರ್ಗ ಕೂಡ ಚಂದ್ರಯಾನ-2 ಅನ್ನು ಹೋಲುತ್ತದೆ. ಈ ಯಾನವು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಭೂಮಿ ಕಕ್ಷೆಯಿಂದ ಹೊರಹೋಗುವಿಕೆ, ಚಂದ್ರನ ಕಕ್ಷೆಗೆ ಬದಲಾವಣೆ ಮತ್ತು ಚಂದ್ರನ ಕಕ್ಷೆಯ ಪ್ರವೇಶ ಈ ಹಂತಗಳಾಗಿವೆ. ಭೂಮಿಯಿಂದ ದೂರವಾಗುತ್ತ ಹೋಗುವಾಗ ಐದು ಬಾರಿ ಭೂಮಿಯ ಕಕ್ಷೆಯನ್ನು ನೌಕೆಯು ಬದಲಾಯಿಸುತ್ತದೆ. ಚಂದ್ರನ ಬಳಿ ಹೋಗುವಾಗ ನಾಲ್ಕು ಬಾರಿ ಚಂದ್ರನ ಕಕ್ಷೆಯನ್ನು ಬದಲಾಯಿಸುತ್ತ ಅದನ್ನು ಸಮೀಪಿಸುತ್ತದೆ. ಈ ರೀತಿ ಚಂದ್ರನ ಮೇಲ್ಮೈಯಿಂದ 100 ಕಿ.ಮೀ. ಕಕ್ಷೆಗೆ ಸಾಗುತ್ತದೆ.

ಪೊ›ಪಲ್ಷನ್ ಮಾಡ್ಯೂಲ್​ನಿಂದ (ಇಂಜಿನ್ ಹಾಗೂ ಇಂಧನವಿರುವ ಭಾಗ) ಲ್ಯಾಂಡರ್ ಬೇರ್ಪಟ್ಟು ಚಂದ್ರನ ಸಮೀಪವಿರುವ ಕಕ್ಷೆಯನ್ನು ಪ್ರವೇಶಿಸುತ್ತದೆ. ಈ ಮೂಲಕ ಚಂದ್ರನಿಗೆ 30 ಕಿಮೀ ಅಂತರಕ್ಕೆ ಸಮೀಪಿಸುತ್ತದೆ. ತದನಂತರ ಲ್ಯಾಂಡರ್ ಮೃದುವಾಗಿ ಲ್ಯಾಂಡಿಂಗ್ ಕಾರ್ಯವಿಧಾನಗಳನ್ನು ಪ್ರಾರಂಭಿಸುತ್ತದೆ. ಲ್ಯಾಂಡಿಂಗ್ ನಂತರ ಇದು ಒಂದು ಚಂದ್ರನ ದಿನ ಕಾರ್ಯನಿರ್ವಹಿಸುತ್ತದೆ. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮನಾಗಿರುತ್ತದೆ.

ಮಾಡ್ಯೂಲ್ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಉಡಾವಣಾ ಸಮಯವು ಭೂಮಿಯ ಸುತ್ತ ಚಂದ್ರನ ಕಕ್ಷೆಯ ಸಮಯಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಖರವಾದ ಲೆಕ್ಕಾಚಾರಗಳನ್ನು ಇಸ್ರೋ ಮಾಡಿ ಉಡಾವಣೆ ಕೈಗೊಂಡಿದೆ. ಚಂದ್ರನ ಮೇಲ್ಮೈ ಕುರಿತಂತೆ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುವುದಕ್ಕಾಗಿ ಅನೇಕ ಪ್ರಮುಖ ಪೇಲೋಡ್​ಗಳನ್ನು ಸಹ ಈ ನೌಕೆಯು ಹೊತ್ತೊಯ್ದಿದೆ. ಈಗಾಗಲೆ ಸಿಕ್ಕಿರುವ ಚಂದ್ರನ ಮೇಲ್ಮೈ ಮೇಲೆ ಸಾಕಷ್ಟು ಕುಳಿಗಳಿವೆ ಹಾಗೂ ನೆರಳಿನ ಪ್ರದೇಶವಿದೆ. ಇನ್ನು 2030ರ ವೇಳೆಗೆ ಚೀನಾ ಚಂದ್ರನ ಮೇಲೆ ಮಾನವ ವಸಾಹತು ಸ್ಥಾಪಿಸುವ ಯೋಜನೆಯಲ್ಲಿದೆ. ಇದನ್ನೆಲ್ಲ ನೋಡುತ್ತಿದ್ದರೆ ಈ ಸಲದ ಚಂದ್ರಯಾನ 3 ಯಶಸ್ವಿ ಆಗುವ ಎಲ್ಲ ಲಕ್ಷಣಗಳೂ ಕೂಡ ಕಾಣುತ್ತಿದೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.