ಜಾಹ್ನವಿ ಜೊತೆ 44 ವರ್ಷದ ಆಂಕಲ್ ಸು.ಖದಾಟ; ಗ್ರಾಮಸ್ಥರಿಂದ ಬಹಿಷ್ಕಾರ

 | 
Hvg

8ನೇ ತರಗತಿ ಓದ್ತಿದ್ದ ಪುಟ್ಟ ಹುಡುಗಿ. ಚೆನ್ನಾಗಿ ಬದುಕಬೇಕು ಜೊತೆಗೆ ಜೀವನದಲ್ಲಿ ಸಾಧಿಸಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದ ಬಾಲಕಿ. ಈಗ ಈ ಬಾಲಕಿ ಬದುಕು ದುರಂತ ಅಂತ್ಯ ಕಂಡಿದೆ. ಹೊಸ ವರ್ಷದಂದು ಮನೆ ಬಿಟ್ಟಿದ್ದ ಹುಡುಗಿ ವಾಪಸ್ ಶವವಾಗಿ ಮನೆ ಸೇರಿದ್ದಾಳೆ.

ಮೃತ ಬಾಲಕಿ ಹೆಸರು ಜಾಹ್ನವಿ. ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಖಾಸಗಿ ಶಾಲೆ ಒಂದರಲ್ಲಿ 8ನೇ ತರಗತಿ ಓದುತ್ತಿದ್ದಳು. ತನ್ನ ಪಾಡಿಗೆ ಓದು ಬರಹ ಅಂತಿದ್ದ ಹುಡುಗಿಗೆ ಇದೇ ಶಾಲೆಯಲ್ಲಿ ಬಸ್ ಡ್ರೈವರ್​ ಆಗಿ ಕೆಲಸ ಮಾಡ್ತಿದ್ದ ಸಂತೋಷ ಪ್ರೀತಿ ಪ್ರೇಮ ಅಂತ ತಲೆ ಕೆಡಿಸಿದ್ದ. ಭಯಕ್ಕೂ ಅಥವಾ ಮರ್ಯಾದೆಗೂ ಗೊತ್ತಿಲ್ಲ, ಬಾಲಕಿ ಸಂತೋಷ ಹೇಳಿದಂತೆ ಕೇಳೋದಕ್ಕೆ ಶುರು ಮಾಡಿದ್ದಳು. 

ಹೊಸ ವರ್ಷದ ಮುನ್ನಾ ದಿನ ಬಸ್ ಚಾಲಕ ಸಂತೋಷ ಜೊತೆ ಹೋಗಿದ್ದ ಜಾಹ್ನವಿ ಹಳಿಯ ಮೇಲೆ ಹೆಣವಾಗಿ ಸಿಕ್ಕಿದ್ದಾಳೆ. ಈ ವೇಳೆ 31ನೇ ತಾರೀಖು ರಾತ್ರಿ ವಿದ್ಯಾರ್ಥಿನಿ ಜಾಹ್ನವಿ ಸ್ನೇಹಿತರ ಜೊತೆ ನ್ಯೂ ಇಯರ್ ಪಾರ್ಟಿಗೆ ಹೋಗ್ತಿನಿ ಅಂತ ಮನೆಯಿಂದ ಆಚೆ ಬಂದಿದ್ದಾಳೆ. ಆದ್ರೆ ಮನೆಯಿಂದ ಆಚೆ ಬಂದ ಜಾಹ್ನವಿಯನ್ನ ಬಸ್ ಚಾಲಕ ಸಂತೋಷ ಕರೆದುಕೊಂಡು ಹೋಗಿದ್ದಾನೆ. ದುರಂತ ಏನಂದ್ರೆ ಮಧ್ಯರಾತ್ರಿಯಲ್ಲಿ ರೈಲಿಗೆ ಸಿಲುಕಿ ಇಬ್ಬರೂ ಸಾವನ್ನಪ್ಪಿದ್ದಾರೆ. ಹೊಸ ವರ್ಷದ ಮೊದಲ ದಿನದ ಸೂರ್ಯನನ್ನ ಕಣ್ತುಂಬಿಕೊಳ್ಳುವ ಮೊದಲೇ ಜಾಹ್ನವಿ ಉಸಿರು ನಿಂತು ಹೋಗಿದೆ.

ಬಾಲಕಿ ಜಾಹ್ನವಿಗೆ ಈ ಬಸ್ ಚಾಲಕ ಮೂರು ವರ್ಷದಿಂದ ಪ್ರೀತಿ ಪ್ರೇಮ ಅಂತ ಪೀಡಿಸ್ತಿದ್ದಂತೆ. ಇದರ ಮಧ್ಯೆ ಬಾಲಕಿ ಕೂಡ ಈ ಸಂತೋಷ ಜೊತೆ ಕದ್ದು ಮುಚ್ಚಿ ಫೋನ್​ನಲ್ಲಿ ಮಾತಾಡುತ್ತಿದ್ದಳಂತೆ. ಆದ್ರೆ ಈ ವಿಚಾರ ಪೋಷಕರಿಗೂ ಗೊತ್ತಾಗಿ ಬಸ್ ರೂಟ್ ಕೂಡ ಚೇಂಜ್ ಮಾಡಿದ್ರಂತೆ. ಆದ್ರೂ ಸಂತೋಷ ಬಾಲಕಿ ಬೆನ್ನು ಬಿಟ್ಟಿಲ್ಲ. ಆಕೆ ಹಿಂದೆ ಬಿದ್ದು ಹುಡುಗಿ ಮೈಂಡ್ ವಾಶ್ ಮಾಡಿದ್ದಾನೆ. ಕೊನೆಗೆ ಹೊಸ ವರ್ಷದ ರಾತ್ರಿ ಸಂತೋಷ ಮತ್ತು ಬಾಲಕಿ ಜಾಹ್ನವಿ ಇಬ್ಬರೂ ರೈಲಿಗೆ ಅಡ್ಡಲಾಗಿ ನಿಂತು ಪ್ರಾಣ ಕಳೆದುಕೊಂಡಿದ್ದಾರೆ.

ದುರಂತ ಏನಂದ್ರೆ ಈ ಬಸ್ ಚಾಲಕನಿಗೆ ಮದುವೆಯಾಗಿ ಪಿಯುಸಿ ಓದುವ ಮಗ ಕೂಡ ಇದ್ದಾನೆ. ಆದ್ರೂ ಈ ಪಾಪಿ ಏನೂ ಅರಿಯದ ಕಂದನ ತಲೆ ಕೆಡಿಸಿ ಬಿಟ್ಟಿದ್ದ. ಬಾಲಕಿಗೆ ಇಲ್ಲ ಸಲ್ಲದನ್ನ ಹೇಳಿ ಇದೀಗ ಆಕೆ ಪ್ರಾಣವನ್ನು ಬಲಿ ಪಡೆದಿದ್ದಾನೆ. ಬಸ್​ ಚಾಲಕನ ದುರ್ಬುದ್ಧಿಯಿಂದ ಬಾಳಿ ಬದುಕಬೇಕಿದ್ದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಅತ್ತ ಮಗಳನ್ನ ಕಳೆದುಕೊಂಡಿರುವ ಪೋಷಕರು ಮಗಳ ನೆನಪಲ್ಲೇ ಕಾಲ ಕಳೆಯುವಂತಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿದೆ.