18 ವರ್ಷದ ಹುಡುಗಿಯ ಸೌಂದರ್ಯಕ್ಕೆ ಮರುಳಾಗಿ ಬುಟ್ಟಿಗೆ ಹಾಕಿದ 50ರ ಅಜ್ಜ
Feb 19, 2025, 17:14 IST
|

ಹುಬ್ಬಳ್ಳಿಯಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಮನೆಯಿಂದ 18 ವರ್ಷದ ಯುವತಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮನೆಬಿಟ್ಟು ಹೋಗಿದ್ದ 18ರ ಯುವತಿ 50 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಈಗಾಗಲೇ ವ್ಯಕ್ತಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸಹ ಇದೀಗ 18 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. 18 ವರ್ಷ ಹುಡುಗಿ ಜೊತೆಗೆ 50 ವರ್ಷ ಅಂಕಲ್ ಲವ್ ಸ್ಟೋರಿ
ಹೌದು… ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿದ್ದಾರೆ. ಯುವತಿ ಕರೀಷ್ಮಾಳನ್ನ ಮದುವೆಯಾಗಿರುವ ಪೋಟೋವನ್ನು ಪ್ರಕಾಶ್ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದರಿಂದ ಶಾಕ್ ಆದ ಪೋಷಕರು ನಮ್ಮ ಮಗಳ ತಲೆಕೆಡಿಸಿ ಮದುವೆಯಾಗಿದ್ದಾನೆಂದು ಆರೋಪಿಸಿದ್ದಾರೆ.
ಅಜ್ಜಿ ಮನೆಗೆ ಹೋಗಿದ್ದ ಕರೀಷ್ಮಾ ದಿಢೀರ್ ನಾಪತ್ತೆ ಆಗಿದ್ದಳು. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಕಣ್ಣೀರು ಹಾಕಿದ್ದರು. ಅಲ್ಲದೇ ಮಗಳ ಫೋಟೋ ಹಿಡಿದು ರಸ್ತೆ ರಸ್ತೆಗಳಲ್ಲಿ ಅಲೆದಾಡಿ ಹುಡುಕಿಕೊಡಿ ಎಂದು ಪೊಲೀಸರು, ಮಾಧ್ಯಮಗಳು ಸೇರಿದಂತೆ ಕಂಡ ಕಂಡವರ ಮುಂದೆ ಮನವಿ ಮಾಡುತ್ತಿದ್ದರು.
ಆದ್ರೆ, ಇದೀಗ ಕರೀಷ್ಮಾ ಪ್ರಕಾಶನ ಜೊತೆ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಸೆಕ್ಯೂರಿಟಿ ಕೆಲಸ ಮಾಡುತ್ತಿರುವ 50 ವರ್ಷದ ಪ್ರಕಾಶ್ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳೂ ಸಹ ಇವೆ. ಇದರ ಬೆನ್ನ್ಲಲೇ ಇದೀಗ 18 ವರ್ಷದ ಕರೀಷ್ಮಾ ಎನ್ನುವ ಯುವತಿಯನ್ನು ಸಹ ಮದುವೆಯಾಗಿದ್ದಾರೆ.
ದೇವಸ್ಥಾನದಲ್ಲಿ ಕರೀಷ್ಮಾಳ ಜೊತೆ ಮದುವೆಯಾಗಿರುವ ಫೊಟೋವನ್ನು ಪ್ರಕಾಶ್ ಸ್ಟೇಟಸ್ ಹಾಕಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.