ಮುದ್ದಾಗಿರುವ ಮ ಹಿಳೆಯ ಬಲೆಗೆ ಬಿದ್ದ 70ರ ಅಜ್ಜ; ಒಂದೇ ವಾರದಲ್ಲಿ ಒಂದು ಲಕ್ಷ ದೋಖಾ
Aug 21, 2024, 18:50 IST
|
ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದ ಅರ್ಚಕನೊಬ್ಬ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮಂಡ್ಯದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇಗುಲದ ಅರ್ಚಕ ವಿಜಯ್ ಕುಮಾರ್ ಹಣ ಕಳೆದುಕೊಂಡ ಅರ್ಚಕ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇಗುಲದ ಅರ್ಚಕ ವಿಜಯ್ ಕುಮಾರ್ ಕುಟುಂಬದಿಂದ ದೂರಾಗಿ ಒಬ್ಬರೇ ವಾಸಿಸುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಈತನಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿಯ ಪರಿಚಯವಾಗಿತ್ತು.
ಅರ್ಚಕ ವಿಜಯ್ ಕುಮಾರ್ ಫೇಸ್‌ಬುಕ್‌ನಲ್ಲಿ ಸುಂದರಿ ಜೊತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದರು. ಈ ರೀತಿ ಚಾಟಿಂಗ್ ಮೂಲಕವೇ ವಿಜಯ್ ಕುಮಾರ್ ಪೂರ್ವಾಪರ ಅರಿತ ಯುವತಿ ಮನೆಯ ಸಮಸ್ಯೆ, ಆರೋಗ್ಯ ಸಮಸ್ಯೆ ಎಂದು ಹೇಳುತ್ತಾ ಹಂತ-ಹಂತವಾಗಿ ಆಟನಿಂದ ಲಕ್ಷಾಂತರ ರೂ. ಹಣ ಪಡೆದಿದ್ದಾಳೆ.
ಬಣ್ಣ ಬಣ್ಣದ ಮಾತುಗಳಿಂದ ಮರುಳಾಗಿ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣ ಟ್ರಾನ್ಸ್‌ಫರ್ ಮಾಡಿದ್ದ ಅರ್ಚಕ ವಿಜಯ್ ಕುಮಾರ್ ಬಳಿಕ ಭೇಟಿ ಆಗುವಂತೆ ಸುಂದರಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಇಂದು ಭೇಟಿಯಾಗುತ್ತೇನೆ, ನಾಳೆ ಭೇಟಿಯಾಗುತ್ತೇನೆ ಎಂದು ಸತಾಯಿಸುತ್ತಿದ್ದ ಫೇಸ್‌ಬುಕ್ ಸುಂದರಿ ಬಳಿಕ ಫೇಸ್‌ಬುಕ್‌ನಲ್ಲಿ ವಿಜಯ್ ಕುಮಾರ್ ಅವರನ್ನೇ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.
ಫೇಸ್‌ಬುಕ್ ಸುಂದರಿ ಮಾಯವಾದ ಬಳಿಕ ತಾವು ಬಣ್ಣದ ಮಾತುಗಳನ್ನು ನಂಬಿ ಯಾಮಾರಿರುವ ಬಗ್ಗೆ ವಿಜಯ್ ಕುಮಾರ್ ಗೆ ಮನವರಿಕೆ ಆಗಿದ್ದು, ಆಕೆಯಿಂದ ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರಿಗೆ ಮೊರೆ. ಈ ಸಂಬಂಧ ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ಅರ್ಚಕ ವಿಜಯ್ ಕುಮಾರ್ ದೂರು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.