ಆ ಒಂದು ಕೆಟ್ಟ ಕೆಲಸದಿಂದ ಆ‌ ತ್ಮಹತ್ಯೆ ಮಾಡಿಕೊಂಡ 21 ವರ್ಷದ BBA ವಿದ್ಯಾರ್ಥಿನಿ

 | 
ರ

ಕೆಲ ದಿನಗಳ ಹಿಂದಷ್ಟೇ ಎಲ್ಲರೂ ನ್ಯೂ ಇಯರ್ ಸಂಭ್ರಮದಲ್ಲಿದ್ರು. ಹೊಸ ವರ್ಷವನ್ನ ಕುಡಿದು ಕುಪ್ಪಳಿಸಿ ಸ್ವಾಗತಿಸಿದ್ರು. ಆದರೆ ಇಲ್ಲೊಂದು ಯುವತಿ ಚಿಕ್ಕದೊಂದು ವಿಚಾರಕ್ಕೆ ಕೋಪಗೊಂಡು ನೇಣಿಗೆ ಶರಣಾಗಿದ್ದಾಳೆ. ನ್ಯೂ ಇಯರ್ ಸಂಭ್ರಮದ ಹೊತ್ತಲ್ಲೇ ಆತುರದ ನಿರ್ಧಾರಕ್ಕೆ ಪ್ರಾಣ ಬಿಟ್ಟಿದ್ದಾಳೆ. ಫೋಟೋಶೂಟ್​​ಗೆ ಮಾಲ್ ಗೆ ಹೋಗಬೇಡ ಎಂದು ಪೋಷಕರು ಬುದ್ಧಿ ಹೇಳಿದಕ್ಕೆ ನೊಂದ ವರ್ಷಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರಿನ ಸುಧಾಮನಗರದ ಮನೆಯಲ್ಲಿ ಬಿಬಿಎ ಜೊತೆಗೆ ಫೋಟೋಗ್ರಫಿ ಸಹ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು 21ವರ್ಷದ ವರ್ಷಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ವರ್ಷಿಣಿ, ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಬಿಬಿಎ ಜೊತೆಗೆ ಫೋಟೋಗ್ರಫಿ ಸಹ ಓದುತ್ತಿದ್ದಳು. ವರ್ಷಿಣಿ ನಿನ್ನೆ ಮಾಲ್​ಗೆ ಹೋಗಿ ಫೋಟೋಶೂಟ್​​ ಮಾಡಿಸಬೇಕು ಎಂದು ರೆಡಿಯಾಗಿದ್ದಳು. 

ಮೃತ ವರ್ಷಿಣಿ ಬಿಬಿಎ ಜೊತೆಗೆ ಫೋಟೋಗ್ರಫಿ ಸಹ ಓದುತ್ತಿದ್ದಳು. ಇನ್ನು ಆಕೆಗೂ ಫೋಟೋ ಶೂಟ್‌ ಎಂದರೆ ಅಚ್ಚುಮೆಚ್ಚಾಗಿತ್ತು. ಮೊಬೈಲ್‌ನಲ್ಲೇ ಫೋಟೋಗಳನ್ನು ತೆಗೆಯುವುದು, ರೀಲ್ಸ್‌ ವಿಡಿಯೋಗಳನ್ನು ಮಾಡುತ್ತಿದ್ದಳು. ನಿನ್ನೆ ವರ್ಷಾಂತ್ಯ ಆಚರಣೆ ಜೊತೆಗೆ ವರ್ಷಿಣಿ ನಿನ್ನೆ ಮಾಲ್​ಗೆ ಹೋಗಿ ಫೋಟೋಶೂಟ್​​ ಮಾಡಿಸಬೇಕು ಎಂದು ಸಿದ್ಧಳಾಗಿದ್ದಳು.

ಆದರೆ ಪೋಷಕರು ಮಾಲ್​ಗೆ ಹೋಗಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ನೊಂದ ವರ್ಷಿಣಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯುವತಿ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.