ಮೂಡ್ ಬಂದಾಗ ಮನೆಗೆ ಕರೆಯುತ್ತಿದ್ದ ಅಜ್ಜ, ಆಂಟಿಯ ಶೀಲದ ಜೊತೆ 70ರ ವೃದ್ಧನ ಕಸರತ್ತು

 | 
Hji

ಇಳಿ ವಯಸ್ಸಿನವರ ಪ್ರೀತಿ- ಪ್ರೇಮವು ಈಗ ಠಾಣೆ ಮಟ್ಟಿಲೇರಿದೆ. 70ರ ವೃದ್ಧ ಪ್ರೀತಿಸಿ ಮದುವೆ ಆಗದೆ ಮೋಸ ಮಾಡಿದ್ದಾನೆ ಎಂದು 63ರ ವೃದ್ಧೆ ದೂರು ನೀಡಿದ್ದಾರೆ. ಹೌದು ದಯಾಮಣಿ ಎನ್ನುವ 63 ವರ್ಷದ ಮಹಿಳೆ ಲೋಕನಾಥ್‌ ವಿರುದ್ಧ ನೀಡಿದ್ದಾರೆ. ಲೋಕನಾಥ್‌ ಎಚ್‌ಎಎಲ್‌ ನೌಕರ ಹಾಗೂ ಎಚ್‌ಎಎಲ್‌ ಯೂನಿಯನ್‌ ಅಧ್ಯಕ್ಷರೂ ಆಗಿ ಸದ್ಯ ನಿವೃತ್ತರಾಗಿದ್ದಾರೆ. 

ದಯಾವಾಣಿಗೆ ಒಬ್ಬಳು ಮಗಳಿದ್ದು, ಲೋಕನಾಥ್‌ಗೂ ಕೂಡ ಮಕ್ಕಳಿದ್ದು ಪತ್ನಿ ಮೃತಪಟ್ಟಿದ್ದಾರೆ. ಕಳೆದ ಐದು ವರ್ಷದ ಹಿಂದೆ ಲೋಕನಾಥ್‌ ಅವರಿಗೆ ದಯಾವಾಣಿ ಪರಿಚಯವಾಗಿತ್ತು. ಈ ವೇಳೆ ಮಗನಿಗೆ ಮದುವೆ ಮಾಡಬೇಕು ಯಾವುದಾದರೂ ಹೆಣ್ಣು ಹುಡುಕಿ ಕೊಡಿ ಎಂದು ಲೋಕನಾಥ್‌ ದಯಾವಾಣಿಗೆ ತಿಳಿಸಿದ್ದರು. ಈ ಸಂಬಂಧ ಸುಮಾರು 25ಕ್ಕೂ ಹೆಚ್ಚು ಹುಡುಗಿಯರನ್ನು ತೋರಿಸಿದ್ದರು.

ಈ ನಡುವೆ ಹೆಚ್ಚು ಆತ್ಮೀಯತೆ ಬೆಳಸಿಕೊಂಡಿದ್ದ ದಯಾವಾಣಿ ಹಾಗೂ ಲೋಕನಾಥ್‌ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಸುಮಾರು ಐದು ವರ್ಷಗಳ ಕಾಲ ಅಜ್ಜ-ಅಜ್ಜಿಯ ಪ್ರೀತಿ ಪ್ರೇಮ ಮುಂದುವರಿದಿದೆ. ನನ್ನನ್ನು ನೋಡಿಕೊಳ್ಳುವವರು ಯಾರು ಇಲ್ಲ ನೀನೆ ನನ್ನ ಜತೆಯಲ್ಲಿರು ನಿನ್ನ ಮದುವೆ ಆಗುತ್ತೇನೆ ಎಂದು ನಂಬಿಸಿದ್ದ ಎನ್ನಲಾಗಿದೆ. ಆತನ ಮಾತನ್ನು ನಂಬಿ ವೃದ್ಧೆ ದಯಾವಾಣಿ ಈತನೊಂದಿಗೆ ಮುರುಡೇಶ್ವರ, ಗೋಕರ್ಣ ಎಂದೆಲ್ಲಾ ಟ್ರಿಪ್‌ಗೆ ಹೋಗಿದ್ದಾರೆ. ಲೋಕನಾಥ್‌ನನ್ನು ಅತಿಯಾಗಿ ನಂಬಿದ್ದ ಆಕೆ ಆಗಾಗ ಹಣ ಸಹಾಯ ಕೂಡ ಮಾಡಿದ್ದಾರೆ. 

ಐದು ವರ್ಷದ ಬಳಿಕ ದಯಾವಾಣಿ ಅವರನ್ನು ಲೋಕನಾಥ್‌ ಅಂತರವನ್ನು ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಏಕಾಏಕಿ ದೂರವಾಗುತ್ತಿರುವ ಕಾರಣವನ್ನು ಪ್ರಶ್ನೆ ಮಾಡಿದಾಗ ಮನೆಯಲ್ಲಿ ಮಕ್ಕಳು ನಮ್ಮಿಬ್ಬರ ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ ಇದನ್ನು ಪ್ರಶ್ನೆ ಮಾಡಲು ಹೋದರೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ದಯಾವಾಣಿ ಅವರ ಆರೋಪವಾಗಿದೆ. ಈ ಸಂಬಂಧ ತನಗೆ ನ್ಯಾಯ ಬೇಕು ಎಂದು ದಯಾವಾಣಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.