ದ ರ್ಶನ್ ಗೆ ದೊಡ್ಡ ಕಂಟಕ; ಇನ್ನುಮುಂದೆ ಜೈ ಲೇ ಗತಿ ಎಂದ ಗುರೂಜಿ

 | 
Yu

ದರ್ಶನ್‌ ಸುದ್ದಿ ಇಡೀ ಕರ್ನಾಟಕ್ಕೆ ಬೇಸರ ಮೂಡಿಸಿದೆ. ಅಷ್ಟೊಂದು ಒಳ್ಳೆಯ ನಟ ನಿಜ ಜೀವನದಲ್ಲಿ ಇಷ್ಟೊಂದು ಕಠೋರವಾಗಿ ವರ್ತಿಸಿದ್ದಾರೆಯೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹೆಚ್ಚು ಫ್ಯಾನ್‌ ಫಾಲೋವರ್‌ ಹೊಂದಿರು ದರ್ಶನ್ ತನ್ನ ಅಭಿಮಾನಿಯನ್ನು ಕೊಲೆ ಮಾಡಿರುವ ಆರೋಪ ಪಟ್ಟಿ ಹೊತ್ತು ಇದೀಗ ಜೈಲ್‌ನಲ್ಲಿದ್ದಾರೆ.

ಒಂದು ವೇಳೆ ಆರೋಪ ಸಾಬೀತಾದರೆ ಇಂಥ ನಟನ ಅಭಿಮಾನಿಯಾಗಿದ್ದಕ್ಕೆ ಪಶ್ಚಾತಾಪ ಪಡಬೇಕಾಗುತ್ತದೆ, ಏಕೆಂದರೆ ಅದು ಅಕ್ಷಮ್ಯ ಅಪರಾಧ, ಆದರೆ ಈಗ ಕೇಸ್‌ ತನಿಖಾ ಹಂತದಲ್ಲಿದೆ.ಆದರೆ ದರ್ಶನ್‌ ಅವರ ರಾಶಿಯಲ್ಲಿ ಇದೀಗ ಶನಿ ಸಾಡೇಸಾತಿಯಿದೆ.

ನಟ ದರ್ಶನ್‌ರವರದ್ದು ಕುಂಭ ರಾಶಿ, ಇದೀಗ ಕುಂಭ ರಾಶಿಯಲ್ಲಿ ಶನಿ ಸಾಡೇ ಸಾತಿಯ ಎರಡನೇ ಹಂತ ನಡೆಯುತ್ತಿದೆ. ಈ ಶನಿ ಸಾಡೇಸಾತಿ ಪ್ರಭಾವ 2028ರವರೆಗೆ ಕುಂಭ ರಾಶಿಯವರಿಗೆ ಇರಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಶನಿ ಸಾಡೇಸಾತಿ ಅತ್ಯಂತ ಕಠಿಣ ಸಮಯ ಎಂದು ಹೇಳಲಾಗುವುದು, ಈ ಶನಿ ಸಾಡೇ ಸಾತಿ ಶುರುವಾದರೆ ವ್ಯಕ್ತಿ ಬದುಕಿನಲ್ಲಿ ತುಂಬಾನೇ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಈ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತಾಡಿದ ಅವರು, ಆರ್​ಆರ್​ ನಗರದ ವಾಸ್ತು ಸರಿಯಿಲ್ಲ. ಆರ್.ಆರ್​ ನಗರಕ್ಕೆ ಹೋಗುವವರು ಒಂದಲ್ಲಾ ಒಂದು ಕೇಸ್​​ನಲ್ಲಿ ಸಿಕ್ಕಿ ಬೀಳುತ್ತಾರೆ ಎಂದು ಹೇಳಿದ್ದರು. ಆದರೆ ಅವರ ಜ್ಯೋತಿಷ್ಯದಂತೆಯೇ ಆರ್​.ಆರ್​ ನಗರದಲ್ಲಿ ವಾಸಾಗಿದ್ದ ನಟ ದರ್ಶನ್​ ಹಾಗೂ ಪವಿತ್ರ ಗೌಡ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಹೀಗೆ ಗ್ರಹ ದ ಪ್ರತಿಕೂಲ ಸಮಸ್ಯಗೆ ದರ್ಶನ್ ತುತ್ತಾಗಿದ್ದಾರೆ ಎಂದಿದ್ದಾರೆ.