ಕಣ್ಣಾಮುಂದೆ ಅಪ್ಸರೆ ಬಂದರು ಕೂಡ ಕಣ್ಣೆತ್ತಿ ನೋಡದ ಡೆಲಿವರಿ ಯುವಕ; ನ ಟಿ ಶಾ ಕ್

 | 
Jj

ಸಿನೆಮಾ ಹೀರೋ ಹಿರೊಯಿನ್ ಕಂಡರೆ ಸಾಕು ದೇವರನ್ನೇ ಕಂಡಂತೆ ಆಡುತ್ತಾರೆ. ಹೌದು ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು.. ಸೆಲ್ಪಿ ಕೇಳೋದು.. ಮಾತನಾಡಲು ಹವಣಿಸೋದು ಸಹಜ .ಯಾಕೆಂದರೆ ಅವರೆಲ್ಲ ಈ ಪ್ರಪಂಚದವರಲ್ಲ ಬದಲಿಗೆ ದೇವ ಮಾನವರೆನ್ನುವುದು ಅನೇಕರಲ್ಲಿರುವ ಕಲ್ಪನೆ.ಆದರೆ.. ಇದಕ್ಕೆ ಸಂಪೂರ್ಣ ತದ್ವಿರುದ್ಧ ಆಲೋಚನೆ ವೈರಲ್ ಆದ ಈ ಡೆಲಿವರಿ ಹುಡುಗನದ್ದು.

ಹೌದು, ತ್ಯಾಪ್ಸಿ ಪನ್ನು ಗೊತ್ತಲ್ಲವಾ..? ಮೊನ್ನೆಯಷ್ಟೇ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ನಾಯಕಿ. ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದ ತ್ಯಾಪ್ಸಿ ಸದ್ಯಕ್ಕೆ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ.. ಮಾಯಾನಗರಿ ಮುಂಬೈನಲ್ಲಿ ಇವರಿಗೆ ಇವರದ್ದೇ ಆದ ಅಭಿಮಾನಿ ಬಳಗ ಇದೆ. ಇವರ ಅಭಿನಯವನ್ನ ಮೆಚ್ಚಿಕೊಳ್ಳುವ ಒಂದು ವರ್ಗ ಇದೆ.

https://www.instagram.com/reel/C7Taul7S2mV/?igsh=MTc4MmM1YmI2Ng==

ಇಂಥ ತ್ಯಾಪ್ಸಿ ಪನ್ನು ಕಣ್ಮುಂದೆ ಬಂದರೂ, ಡೆಲಿವರಿ ಬಾಯ್ ಕಣ್ಣೆತ್ತಿ ನೋಡಿಲ್ಲ. ಬದಲಿಗೆ ತನ್ನ ಪಾಡಿಗೆ ಕೆಲಸವನ್ನ ಮಾಡಿದ್ದಾನೆ. ಬಾಲಿವುಡ್‌ನ ನಾಯಕಿ ತನ್ನೆದುರು ಬಂದರು ತನ್ನ ಗ್ರಾಹಕರನ್ನ ಅಲ್ಲಿ ಹುಡಕಿದ್ದಾನೆ. ಸದ್ಯಕ್ಕೆ.. ಕಾಯಕದಲ್ಲಿ ಕೈಲಾಸ ಕಂಡ ಈ ಡೆಲಿವರಿ ಬಾಯ್‌ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಕೆಲಸದ ಮೇಲಿರುವ ನಿಷ್ಠೆ-ಶ್ರದ್ಧೆ ಮತ್ತು ಶ್ರಮಕ್ಕೆ ಸಾಮಾಜಿಕ ಜಾಲತಾಣ ಸೆಲ್ಯೂಟ್ ಹೊಡೆಯುತ್ತಿದೆ.

ಅನೇಕರು ಅಪ್ಸರೆ ಬಂದರೂ ನೋಡಲಿಲ್ಲವಲ್ಲ ಗುರು ನೀನು ಎಂದರೆ, ಇನ್ನೂ ಕೆಲವರು ಏಕಾಗ್ರತೆ ಬದುಕಿನ ಗುರಿ ಮತ್ತು ಸಾಧನೆಗೆ ದಾರಿ ಅನ್ನುವುದನ್ನ ನೀವೂ ಸಾಬೀತು ಮಾಡಿದ್ದೀರಾ ಅದಕ್ಕೆ ನಿಮಗೆ ಅಭಿನಂದನೆ ಎನ್ನುತ್ತಿದ್ದಾರೆ. ಇವರಿಗೆ ಸಂಸ್ಥೆ ಪ್ರೋತ್ಸಾಹ ಧನವನ್ನ ನೀಡಬೇಕೆಂದು ಮನವಿಯನ್ನೂ ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲವರು ತ್ಯಾಪ್ಸಿಯ ಫೋಟೋ ತೆಗೆಯಲು ಹವಣಿಸುತ್ತಿದ್ದ ಪಾಪರಾಜಿಗಳಿಗೆ ಛೀಮಾರಿಯನ್ನೂ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.