ಭಕ್ತರೊಬ್ಬರ ಮಗು ಹಾವಿನ ಮೇಲೆ ಕಾಲಿಡುವ ಮುನ್ನ ರಕ್ಷಣೆ ಮಾಡಿದ ಶ್ವಾನ, ಕರಾವಳಿಯಲ್ಲಿ ಹೀರೋ ಆದ ನಾಯಿ

 | 
Gji

ಪ್ರಾಣಿಗಳೇ ಮನುಜನಿಗಿಂತ ಮೇಲು ಅನ್ನೋದು ಸುಳ್ಳಲ್ಲ.ಇನ್ನೇನು ಸ್ವಲ್ಪ ಹೆಚ್ಚು ಕಡಿಮೆಯಾದರೆ ಆ ಮಗು ಹಾವನ್ನು ತುಳಿದೇ ಬಿಡುತ್ತಿತ್ತು, ಆದರೆ ಶ್ವಾನವೊಂದು ಅದನ್ನು ತುಳಿಯದಂತೆ ಅಡ್ಡನಿಂತು, ಹಾವು ತೆರಳಲು ಅವಕಾಶ ನೀಡಿ ಮಗುವನ್ನು ರಕ್ಷಿಸಿತು. ಅಂದ ಹಾಗೆ ಈ ಘಟನೆ ನಡೆದದ್ದು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಆದಿಸುಬ್ರಹ್ಮಣ್ಯದ ಬಳಿ.

ಕುಕ್ಕೆ ಸುಬ್ರಹಣ್ಯ ಕ್ಷೇತ್ರಕ್ಕೆ ಆಗಮಿಸಿ, ರಸ್ತೆಯಲ್ಲಿ ತೆರಳುತ್ತಿದ್ದ ಭಕ್ತರ ಗುಂಪಿನಲ್ಲಿದ್ದ ಮಗುವೊಂದು ಹಾವನ್ನು ತುಳಿಯುವುದನ್ನು ಬೀದಿ ನಾಯಿಯೊಂದು ತಪ್ಪಿಸಿ, ರಕ್ಷಿಸಿದ ಘಟನೆ ಇದು ಎಂಬ ಸಂದೇಶವಿರುವ ಬರಹವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಿಯ ಎಂಬ ಪರೋಪಕಾರಿ ಶ್ವಾನ ಮಗುವನ್ನು ರಕ್ಷಿಸಿ ಹೀರೋ ಆಗಿದೆ.

ಆದಿ ಸುಬ್ರಹ್ಮಣ್ಯ ಬಳಿ ಸಾಗುತ್ತಿದ್ದ ತಂಡದಲ್ಲಿ ಮಹಿಳೆಯೊಬ್ಬರು ಪುಟ್ಟ ಮಗುವನ್ನು ರಸ್ತೆಯಲ್ಲಿ ಬಿಟ್ಟು, ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿಸಲು ತೆರಳಿದ್ದರು. ಆಗ ಮಗು ರಸ್ತೆಯ ಬದಿ ಬಂದಿತ್ತು. ಅದೇ ಸಮಯದಲ್ಲಿ ನಾಗರ ಹಾವೊಂದು ಅಲ್ಲೇ ರಸ್ತೆ ದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿದೇ ಬಿಡುತ್ತದೆ ಎನ್ನುವಷ್ಟರಲ್ಲಿ ಅಲ್ಲೇ ಮಲಗಿದ್ದ ಬೀದಿ ನಾಯಿ ಓಡೋಡಿ ಬಂದು ಮಗುವಿಗೆ ಅಡ್ಡ ನಿಂತು ಹಾವನ್ನು ತುಳಿಯದಂತೆ ರಕ್ಷಿಸಿದೆ. 

ಹಾಗೇ ಹಾವು ಮುಂದೆ ತೆರಳಲು ಅನುವು ಮಾಡಿಕೊಟ್ಟಿದೆ. ಇದರಿಂದ ಮಗುವಿನ ಪ್ರಾಣ ಉಳಿದಿದೆ. ಪ್ರತ್ಯಕ್ಷ ದರ್ಶಿಗಳು ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಜನರು ಶ್ವಾನದ ಫೋಟೋವನ್ನು ಹಂಚಿಕೊಂಡು ಹೀರೋಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.ಸುಬ್ರಹ್ಮಣ್ಯ ಪೇಟೆಯಲ್ಲಿರುವ ಈ ಬೀದಿನಾಯಿ ಕರಿಯ ಎಂದೇ ಎಲ್ಲರಿಗೂ ಚಿರಪರಿಚಿತ. ಸದಾ ದೇವಸ್ಥಾನದ ಬಳಿ ಅಡ್ಡಾಡುವ ಈ ಶ್ವಾನ ಎಂದರೆ ಸ್ಥಳೀಯಗರಿಗೆ ಬಹಳ ಪ್ರೀತಿ. ಇದೀಗ ಈ ಶ್ವಾನದ ಸಾಹಸ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.