ಅಪ್ಪನಿಗೆ ಸ್ಕೇಟಿಂಗ್ ಹೇಳಿಕೊಟ್ಟ ಸ್ನೇಹಿತ್, ತಂದೆ ಮಗನ ಬಾಂಧವ್ಯ ನೋಡಿ ಖುಷಿ ಪಟ್ಟ ಕರುನಾಡು

 | 
ಪಬಹ೬

ಬಿಗ್ ಬಾಸ್ ಸೀಸನ್ 10 ಮಾಡಿದ ಮೋಡಿ ಅಷ್ಟಿಷ್ಟಲ್ಲ. ಮನೆಯಲ್ಲಿ ವರ್ತೂರು ಸಂತೋಷ್- ತನಿಷಾ, ಕಾರ್ತಿಕ್ -ಸಂಗೀತಾ, ಹಾಗೂ ನಮೃತಾ-ಸ್ನೇಹಿತ್ ಸೇರಿ ಒಟ್ಟು 3 ಜೋಡಿಗಳು ಈ ಬಾರಿಯ ಬಿಗ್ ಬಾಸ್ ನಲ್ಲಿ ಸದ್ದು ಮಾಡಿತ್ತು. ವರ್ತೂರು, ತನಿಷಾ, ಕಾರ್ತಿಕ್, ಸಂಗೀತಾ ಜೋಡಿ ನಾವು ಫ್ರೆಂಡ್ಸ್ ಫ್ರೆಂಡ್ಸ್ ಅಂತಾನೆ ಸೀಸನ್ ಮುಗಿಸಿಬಿಟ್ರು. 

ಆದ್ರೆ ಸ್ನೇಹಿತ್ ಮಾತ್ರ ನಮೃತಾ ಮೇಲೆ ಜೆನ್ಯೂನ್ ಲವ್ ತೋರಿಸಿದ್ರು. ಪ್ರತಿ ಸಾರಿ ಆಟ ಗೆದ್ದಾಗ್ಲೂ ನಮೃತಾ ದಿಸ್ ಇಸ್ ಫಾರ್ ಯೂ ಅಂತ ಹೇಳ್ತಾ ಇದ್ರು.ಈಗ ಇಬ್ಬರೂ ಕೂಡ ಮುಖ ನೋಡ್ತಿಲ್ಲ. ಹೊರಗೆ ಸ್ನೇಹಿತ್ ನಮೃತಾ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತ ಇಲ್ಲ. ಇನ್ನು ಬಿಗ್ ಬಾಸ್ ಬಾಸ್ ಮುಗಿದ ಮೇಲೆ ವಿನಯ್ ಗುಂಪು ಮೈಸೂರಿಗೆ ಭೇಟಿ ನೀಡಿತ್ತು. ಆದ್ರೆ ಆ ತಂಡದಲ್ಲಿ ಸ್ನೇಹಿತ್ ಮಾತ್ರ ಕಾಣಿಸ್ಲಿಲ್ಲ.

ವಿನಯ್,ರಕ್ಷಕ್, ಮೈಕಲ್ ಜೊತೆ ನಮ್ರತಾ ಕೂಡ ಮೈಸೂರಿಗೆ ಭೇಟಿ ನೀಡಿ, ಚಾಮುಂಡಿ ದೇವಿಯ ದರ್ಶನ ಪಡೆದಿದ್ದಾರೆ. ಈ ಸಂದರ್ಭ ಜನ ನಮೃತಾ ಬಳಿ ಸ್ನೇಹಿತ್ ವಿಷಯ ಪ್ರಸ್ತಾಪಿಸಿದ್ದಾರೆ. ಆಗ ನಮೃತಾ ಏನನ್ನೂ ರಿಯಾಕ್ಟ್ ಮಾಡದೇ ಮುಂದೆ ಹೋಗಿದ್ದಾರೆ.ಇವರಿಬ್ರೂ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಯನ್ನೂ ಇನ್ನೂ ಮರೆತಿಲ್ಲ ಅನ್ನೋದು ಗೊತ್ತಾಗಿದೆ. ಯಾಕೋ ಈ ಜೋಡಿಗಳಲ್ಲಿ ತನಿಷಾ ಮತ್ತು ವರ್ತೂರು ಅವರೇ ಇವತ್ತಿನವರೆಗೂ ಚೆನ್ನಾಗಿ ಮಾತನಾಡಿಕೊಂಡು ತಮ್ಮ ಫ್ರೆಂಡ್ ಶಿಪ್ ನ್ನು ಉಳಿಸಿಕೊಂಡಿದ್ದಾರೆ.

ಇನ್ನು ಸ್ನೇಹಿತ್ ತನ್ನ ತಂದೆಗೆ ಸ್ಕೇಟ್ ಬೋರ್ಡಿಂಗ್ ಹೇಳಿಕೊಡ್ತಿದ್ದಾರೆ. ಹೌದು ಬಾಲ್ಯದಲ್ಲಿ ಕೈ ಹಿಡಿದು ನಡೆಯಲು ಕಲಿಸಿದ ಅಪ್ಪನಿಗೆ ಕೈ ಹಿಡಿದು ಆಟ ಕಲಿಸಿದ್ದಾರೆ.ಸ್ನೇಹಿತ್‌ಗೆ ಅವರ ತಾಯಿ ಎಂದರೆ ತುಂಬಾನೆ ಇಷ್ಟ. ಅದು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಕೂಡ ಅಲ್ಲಲ್ಲಿ ಕಾಣುತ್ತಿತ್ತು. ಯಾವುದೇ ಒಂದು ಗೆಲುವು ಬಂದರೂ ಅದನ್ನ ನನ್ನ ತಾಯಿಗೆ ಅರ್ಪಿಸುತ್ತೇನೆ ಎಂದು ಹೇಳುತ್ತಿದ್ದರು. 

ಈಗಲೂ ಕೂಡ ತಂದೆ ತಾಯಿ ಮೇಲೆ ಅಪಾರ ಗೌರವ ಹೊಂದಿರುವ ಸ್ನೇಹಿತ್ ತಂದೆ ತಾಯಿ ಬಳಿ ತನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಯಾಚಿಸಿ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.