ಪತ್ನಿ ಗ ರ್ಭಿಣಿ ಆಗುತ್ತಿದ್ದಂತೆ ದೊಡ್ಡ ನಿರ್ಧಾರ ತೆಗೆದುಕೊಂಡ ಗಂಡ;

 | 
He

ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ಬಿ-ಟೌನ್ನ ಆದರ್ಶ ದಂಪತಿ ಆಗಿದ್ದಾರೆ. ಮದುವೆಯಾಗಿ 12 ವರ್ಷ ಕಳೆದರೂ ಇಬ್ಬರೂ ನವ ಜೋಡಿಯಂತೆ ಕಾಣ್ತಾರೆ. ಈ ಕ್ಯೂಟ್ ಕಪಲ್ ಅಂದ್ರೆ ಅಭಿಮಾನಿಗಳಿಗೂ ಬಲು ಇಷ್ಟ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ ಮತ್ತು ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತಾರೆ.

ಇದೀಗ ದಂಪತಿ ತಮ್ಮ ಜೀವನದಲ್ಲಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಈ ಬಗ್ಗೆ ಯೋಚಿಸುತ್ತಿದ್ದರು, ಇದೀಗ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾತೆ.

ನಟ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ನಟಿ ಜೆನಿಲಿಯಾ ದೇಶಮುಖ್ ಸಿನಿರಂಗದಲ್ಲಿ ಆದರ್ಶ ದಂಪತಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಈ ಆದರ್ಶ ದಂಪತಿ ಆದರ್ಶ ನಿರ್ಧಾರ ತೆಗೆದುಕೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಅಂದಹಾಗೆ ಇದೀಗ ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.ಯಾರಿಗಾದರೂ ಜೀವನದ ಉಡುಗೊರೆಗಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ ಎಂದು ಇಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ರಿತೇಶ್ ಮತ್ತು ಜೆನಿಲಿಯಾ ಅವರ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇಬ್ಬರಿಗೂ ಧನ್ಯವಾದ ಸಲ್ಲಿಸಿ, ಅವರ ನಿರ್ಧಾರವನ್ನು ಶ್ಲಾಘಿಸಿದೆ.

ಬಾಲಿವುಡ್ ಸ್ಟಾರ್ ಜೋಡಿಗಳಾದ ರಿತೇಶ್ ಮತ್ತು ಜೆನಿಲಿಯಾ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಅಂಗಾಂಗ ದಾನದ ಹೆಜ್ಜೆ ಈ ಉದಾತ್ತ ಕಾರ್ಯಕ್ಕೆ ಸೇರಲು ಹೊಸ ಸ್ಫೂರ್ತಿಯಾಗಿದೆ ಎಂದು NOTTO ಸಂಸ್ಥೆ ಹೇಳಿದೆ.ರಿತೇಶ್ ಹಲವು ವರ್ಷಗಳ ಹಿಂದೆಯೇ ಅಂಗಾಂಗ ದಾನ ಮಾಡಲು ಬಯಸಿದ್ದರು. ಈ ಕೆಲಸದಲ್ಲಿ ಅವರಿಗೆ ಪತ್ನಿ ಜೆನಿಲಿಯಾ ಬೆಂಬಲ ನೀಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.