ಧ ರ್ಮಸ್ಥಳದಲ್ಲಿ ಹೊಸ ಕ್ರಾಂತಿ; ನೂರಾರು ಜನರಿಗೆ ಅನ್ನ ಹಾಕಿದ ದೇವರಿಗೆ ಜನರು ಮಾಡುತ್ತಿರುವುದೇ ನು

 | 
U
ಸೌಜನ್ಯಾ ಪ್ರಕರಣದ ನಂತರ ಜನ ಧರ್ಮಸ್ಥಳನಡೆಸಲು ಆರಂಭಿಸಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೌದು ಇವತ್ತು ದೇಶದ ಮೈಕ್ರೋ ಫೈನಾನ್ಸ್ ಗಳಲ್ಲಿ ಎಸ್.ಕೆ.ಡಿ.ಆರ್.ಪಿ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂರನೇ ಸ್ಥಾನದಲ್ಲಿದೆ ಎಂದು “ಸಾ-ಧನ್” ವರದಿ ಹೇಳುತ್ತದೆ. ವೈಚಿತ್ರ್ಯದ ಸಂಗತಿ ಎಂದರೆ ದೇಶದ 10 ಟಾಪ್ ಸಂಸ್ಥೆಗಳಲ್ಲಿ 9 ಪ್ರೈವೇಟ್ ಲಿಮಿಟೆಡ್ ಗಳಾದರೆ ಎಸ್.ಕೆ.ಡಿ.ಆರ್.ಪಿ ಮಾತ್ರ ಟ್ರಸ್ಟ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ವ್ಯವಹಾರದ ವಿಚಾರಲ್ಲಿ ದೇಶದ ಬೃಹತ್‌ ಸರಕಾರೇತರ ಸಂಸ್ಥೆಗಳಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಯೂ ಒಂದು. ಹುಟ್ಟಿದ್ದು 1982ರಲ್ಲಿ. 
ಮುಂದೆ ಎಸ್.ಕೆ.ಡಿ.ಆರ್.ಡಿ.ಪಿ ಹೆಸರಿನಲ್ಲಿ 18 ಮಾರ್ಚ್ 1991ರಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬೆಳ್ತಂಗಡಿಯಲ್ಲಿ ಘೋಷಣೆಯಾಗುತ್ತದೆ. ಇವತ್ತು ಕರ್ನಾಟಕದ ಮೂಲೆ ಮೂಲೆ ಹಾಗೂ ಕೇರಳದ ಕೆಲವು ಭಾಗಗಳಲ್ಲಿ ಈ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 2013ರ ಸೆಪ್ಟೆಂಬರ್ 30ರ ಅಂತ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಈ ಮೈಕ್ರೋ ಫೈನಾನ್ಸ್ 125 ಶಾಖೆಗಳ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತಿರುತ್ತದೆ.
ಅವತ್ತಿಗೆ ತಳಮಟ್ಟದ ಪ್ರತಿನಿಧಿಗಳು ಹೊರತಾಗಿಯೂ ಇದರಲ್ಲಿ ಒಟ್ಟು 5,572 ಜನ ಕಾರ್ಯನಿರ್ವಹಿಸುತ್ತಿದ್ದರು. ಇಲ್ಲಿಯವರೆಗೆ 3.6 ಲಕ್ಷ ಸಂಘಗಳಲ್ಲಿ 37 ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ ಶೇಕಡ 80 % ಸದಸ್ಯರು ಸಾಲ ಪಡೆದುಕೊಂಡಿದ್ದರು ಎನ್ನುತ್ತಾರೆ ನಿರ್ದೇಶಕರಾದ ಮಂಜುನಾಥ್ ಅವರು. ಇದರಲ್ಲಿ ಮಹಿಳಾ ಸದಸ್ಯರ ಸಂಖ್ಯೆಯೇ ಹೆಚ್ಚಿದ್ದು ಶೇಕಡಾ 76.13 % ರಷ್ಟಿದ್ದಾರೆ. 2015- 16ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 30,000 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ್ದು, ಸದ್ಯ 5,400 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ.
ಸಾಲ ಕಟ್ಟಲಾಗದ ತಾಳಿ ಸರ ಮಾಡಿದವರು, ಅವಮಾನದಿಂದ ನೇಣಿಗೆ ಕೊರಳೊಡ್ಡಿದವರು, ಸಾಲ ಕಟ್ಟಿದ್ದಕ್ಕೆ ಹಾಕಿದ ಧಮ್ಕಿಗಳು, ಮನೆಯ ಸೂರು ಹಂಚು ಎಳೆದ ನೂರಾರು ವಾಸ್ತವ ಕಥೆಗಳನ್ನು ಧರ್ಮಸ್ಥಳ ಸುತ್ತಮುತ್ತಲಿನ ಹಾಗೂ ಕರಾವಳಿ ಜಿಲ್ಲೆಗಳ ಜನ ಇವತ್ತಿಗೂ ಹಂಚಿಕೊಳ್ಳುತ್ತಾರೆ. ಗ್ರಾಮ ಭಾರತದ ಅಭಿವೃದ್ದಿಯ ಸೋಗಿನಲ್ಲಿ ನಡೆಯುತ್ತಿರುವ ದಂಧೆಯ ಕರಾಳ ಕಥೆಗಳಿವೆ. ಹಾಗಾಗಿ ಸೌಜನ್ಯಾಗೆ ನ್ಯಾಯ ಸಿಕ್ಕಿದಮೇಲೆ ಬಡ್ಡಿ ಹಣ ಕಟ್ಟುತ್ತೇವೆ ಎನ್ನುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.