ದರ್ಶನ್ ಅವರಿಗೆ ರಾಖಿ ಕಟ್ಟಲು ಬಂದ ಮಂಗಳಮುಖಿ, ಆದರೆ ದಾಸ ಮಾಡಿದ ಕೆಲಸ ಏನು ಗೊತ್ತಾ

 | 
Hd

ಅಣ್ಣ-ತಂಗಿಯರ ಬಂಧವನ್ನು ಸಾರುವ ಹಬ್ಬ ರಕ್ಷಾ ಬಂಧನ. ದೇಶದ ಮೂಲೆ ಮೂಲೆಯಲ್ಲೂ ರಾಖಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಣ್ಣನಿಗೆ ತಂಗಿಯಂದಿರು ರಾಖಿ ಕಟ್ಟಿ ಅವರಿಂದ ಆಶೀರ್ವಾದವನ್ನು ಪಡೆಯುತ್ತಿದ್ದಾರೆ. ರಾಖಿ ಹಬ್ಬದಂದು ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಮನೆಯಲ್ಲೂ ಸಂಭ್ರಮ ಮನೆ ಮಾಡಿತ್ತು. 

ಹೀಗಾಗಿ ಕರ್ನಾಟಕದ ತಮ್ಮ ಅಭಿಮಾನಿಗಳಿಗೆ ಅಕ್ಕತಂಗಿಯಂದಿರಿಗೆ ದರ್ಶನ್ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿದ್ದರು. ರಕ್ಷಾ ಬಂಧನದ ಈ ಶುಭ ದಿನದಂದು ಚಾಲೆಂಜಿಂಗ್ ಸ್ಟಾರ್ ಟ್ವೀಟ್ ಮಾಡಿದ್ದರು. ರಾಖಿ ಕಟ್ಟಿರುವ ಫೋಟೊವೊಂದನ್ನು ಶೇರ್ ಮಾಡಿದ್ದರು. ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು ಎಂದು ಟ್ವೀಟ್ ಮೂಲಕ ನಾಡಿನ ಜನತೆಗೆ ರಕ್ಷಾ ಬಂಧನದ ಶುಭಾಶಯಗಳನ್ನು ಹರಿಸಿದ್ದರು. 

ಇನ್ನು ದರ್ಶನ್ ಟ್ವೀಟ್‌ಗೆ ಕಂಡು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಇನ್ನು ಹಲವಾರು ಮಹಿಳಾಮಣಿಗಳು ದರ್ಶನ್ ಗೆ ರಾಖಿ ಕಟ್ಟಲು ಅವರ ಮನೆಯ ಮುಂದೆ ಕ್ಯೂ ಹಚ್ಚಿ ನಿಂತಿದ್ದರು. ಅವರಲ್ಲಿ ಮಂಗಳ ಮುಖಿಯಾದ ಅಕ್ಷರ ಅಕ್ಕ ಎನ್ನುವವರು ಬಹಳ ಸಮಯದ ತನಕ ಕಾದು ದರ್ಶನ್ ಅವರಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿ ಹೋಗಿದ್ದಾರೆ. 

ಇನ್ನು ಎಲ್ಲರಂತೆ ದರ್ಶನ್ ಅವರ ಬಳಿಯೂ ಪ್ರೀತಿಯಿಂದ ಮಾತನಾಡಿ ಹರಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.