ನೆಚ್ಚಿನ ಗೆಳತಿ ಬೇರೆ ಮದುವೆ ಆಗುತ್ತಾಳೆ ಅಂತ ತನ್ನ ಗಂಡನಿಗೆ ಮದುವೆ ಮಾಡಿಕೊಟ್ಟ ಪತ್ನಿ; ಮೊದಲ ರಾತ್ರಿಯಲ್ಲಿ ಜಗಳ

 | 
Gh

ಗೆಳೆತನ ಅತ್ಯಂತ ಪವಿತ್ರ ಸ್ಥಾನ ಪಡೆದಿದೆ. ಹಾಗಾಗಿ ಗೆಳೆತನ ಅಷ್ಟು ಮಹತ್ವ ಎಂದು ಅನಿಸಿಕೊಂಡಿದೆ. ಸೋಶಿಯಲ್​​ ಮೀಡಿಯಾ ಪ್ರಭಾವಿ ವರ್ಜೀನಿಯಾ ಮೈಕಲ್ ಎಂಬ ವ್ಯಕ್ತಿ ಇತ್ತೀಚೆಗಷ್ಟೇ ತನ್ನ ಇಬ್ಬರ ಹೆಂಡಿರ ಜೊತೆಗಿನ ಸುಂದರ ಸಂಸಾರದ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ತನ್ನ ಪತ್ನಿ ಆಕೆಯ ಗೆಳತಿಯೊಂದಿಗೆ ಹೆಚ್ಚಿನ  ಆತ್ಮೀಯತೆಯನ್ನು ಹೊಂದಿದ್ದಳು. ಜೊತೆಗೆ ಆಕೆ ಯಾವಾಗಲೂ ಜೊತೆಗಿರಬೇಕೆಂದು ತನ್ನೊಂದಿಗೆ ಮದುವೆ ಮಾಡಿಸಿದ್ದಳು. ಈಗ ನಾವು ಮೂರು ಜನ ಹಾಗೂ ನಮ್ಮ ಒಟ್ಟು ಇಪ್ಪತ್ತೆಂಟು ಮಕ್ಕಳು ಒಂದೇ ಮನೆಯಲ್ಲಿ ಸಂತೋಷವಾಗಿದ್ದೇವೆ ಎಂದು ಪತಿ ಮೈಕಲ್ ವಿಡಿಯೋದಲ್ಲಿ ಹೇಳಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈತನ ಮೊದಲ ಪತ್ನಿಯ ಹೆಸರು ಅಲಿಸಿಯಾ ಕೋಲ್ಸ್ ಮತ್ತು ಎರಡನೇ ಪತ್ನಿ ಜಾಸ್ಮಿನ್ ಜೋನ್ಸ್. 1999ರಲ್ಲಿ ಮೊದಲ ಪತ್ನಿ ಅಲಿಸಿಯಾ ಕೋಲ್ಸ್ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಒಟ್ಟು ಎಂಟು ಮಕ್ಕಳಿದ್ದಾರೆ. ಇದಲ್ಲದೇ ಅಲಿಸಿಯಾನನ್ನು ಮದುವೆಯಾಗುವ ಮೊದಲೇ ಮೈಕಲ್​​ಗೆ ಹತ್ತು ಮಕ್ಕಳಿದ್ದರು.

ಮೈಕಲ್ ಮತ್ತು ಅಲಿಸಿಯಾ, ವರ್ಜೀನಿಯಾದಲ್ಲಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾರೆ. 2010 ರಲ್ಲಿ ಅಲಿಸಿಯಾಗೆ ಜಾಸ್ಮಿನ್​​ನ ಪರಿಚಯವಾಗಿದೆ. ಇವರಿಬ್ಬರ ಪರಿಚಯ ಆಳವಾಗಿ ಬೆಳೆದಿದ್ದು, ತನ್ನ ಪತಿಯನ್ನೇ ಮದುವೆಯಾಗುವಂತೆ ಅಲಿಸಿಯಾ ಜಾಸ್ಮಿನ್​​ ಬಳಿ ಕೇಳಿಕೊಂಡಿದ್ದಾಳೆ. ಬಳಿಕ ಮದುವೆಯಾಗಿದ್ದು ಮೈಕಲ್ ಮತ್ತು ಜಾಸ್ಮೀನ್ ಎಂಟು ಮಕ್ಕಳಿದ್ದಾರೆ. ಹಲವರು ಇವರಿಬ್ಬರ ಸ್ನೇಹಕ್ಕೆ ಶಹಬ್ಬಾಸ್ ಎಂದಿದ್ದಾರೆ.