ರೀಲ್ಸ್ ಹುಚ್ಚು ಹೆಚ್ಚಾಗಿ ಸ್ವಂತ ಮಗುವಿಗೆ ಅ ಪಾಯ ತಂದಿಟ್ಟ ಮಹಿಳೆ, ವಿಡಿಯೋ ನೋಡಿದ್ರೆ ಮೈಝಲ್ಲೆನ್ನುತ್ತೆ

 | 
Js
 ಹೆಸರು ಮತ್ತು ಹಣಕ್ಕೆ ಜನ ಎನ್ ಬೇಕಾದರೂ ಮಾಡ್ತಾರೆ. ಹೌದು . ಜನ ಈಗೀಗ ಲೆಕ್ಕವಿಲ್ಲದಷ್ಟು ಸೆಲ್ಫಿ ತೆಗೆಯುವುದು, ರೀಲ್ಸ್‌‌‌ ಮಾಡುವುದು ಮತ್ತು ವ್ಲಾಗ್‌ಗಳನ್ನು ಮಾಡುವುದು  ಸರ್ವೇ ಸಾಮಾನ್ಯವಾಗಿದೆ. ತಮ್ಮ ವಿಡಿಯೋ ಭಾರಿ ವೈರಲ್‌ ಆಗಬೇಕು ಎಂದು ಏನು ಬೇಕಾದರೂ ಮಾಡ್ತಾರೆ ರೀಲ್ಸ್‌‌ ಸ್ಟಾರ್ಸ್‌‌ಗಳು. 
ತಮ್ಮ ಜೀವವನ್ನೂ ಲೆಕ್ಕಿಸದೇ ಕೇವಲ ವೀವ್ಸ್‌‌ಗೋಸ್ಕರ ಏನೂ ಬೇಕಾದರೂ ಮಾಡ್ತಾರೆ ಜನ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೀನೊಬ್ಬಳು ತಾಯಿನಾ? ನಿನಗೆ ಮಾನವೀಯತೆ ಇದೆಯಾ? ಎಂದು ನೆಟ್ಟಿಗರು ಮಹಿಳೆಯ ವಿರುದ್ಧ ಛೀಮಾರಿ ಹಾಕುತ್ತಿದ್ದಾರೆ. ಹೌದು ಈ ವಿಡಿಯೋ ನೋಡಿದ್ರೆ ಎಂತವರಾದ್ರು ಬೈದೇ ಬೈತೀರಿ.
ವೈರಲ್‌ ಆದ ವಿಡಿಯೋ ಅತ್ಯಂತ ಭಯಾನಕವಾಗಿದ್ದು, ಮಗುವಿನ ಸ್ಥಿತಿ ಕಂಡು ಜನರು ಮರಗುತ್ತಿದ್ದಾರೆ. ತಾಯಿ ಆದವಳು ಮಗುವಿಗೆ ಏನಾದರೂ ಆಗಬಿಡುತ್ತೋ ಎಂದು ಕಣ್ಣಲ್ಲಿ ಕಣ್ಣಿಟ್ಟು ಸಾಕು ಸಲುಹುತ್ತಾಳೆ. ಆದರೆ ಇಲ್ಲಿ ಸ್ವತಃ ತಾಯಿಯೇ ಮಗುವಿಗೆ ಸಮಸ್ಯೆ ತರುವಂತೆ ನಡೆದುಕೊಂಡಿದ್ದಾಳೆ.  ಬಾವಿಯ ಅಂಚಿನಲ್ಲಿ  ಎರಡೂ ಕಾಲನ್ನು ಇಳಿಸಿಕೊಂಡು ಕೈಯಲ್ಲಿ ಮಗು ಹಿಡಿದುಕೊಂಡು ರೀಲ್ಸ್‌ ಮಾಡಿದ್ದಾಳೆ.
ಕ್ಲಿಪ್‌ನಲ್ಲಿ,ಬಾವಿಯ ಅಂಚಿನಲ್ಲಿ ಕುಳಿತು ಹಾಡಿಗೆ ಲಿಪ್ ಸಿಂಕ್ ಮಾಡುತ್ತಿರುವುದು ನೀವು ನೋಡಬಹುದು. ಮಗು ತಾಯಿಯ ಕಾಲಿನ ಮೇಲೆ ನಿಂತಿದೆ.  ಮಗುವಿನ  ದೇಹವು ತೆರೆದ ಬಾವಿಯ ಹತ್ತಿರ ತೂಗಾಡುವಂತಹ ಸ್ಥಿತಿಯಲ್ಲಿದೆ. ಮಗುವನ್ನು ಹಿಡಿದಕೊಂಡು ಆಕೆ ರೀಲ್ಸ್‌ ಬೇರೆ ಮಾಡಿದ್ದಾಳೆ. ಆದರೆ ಈ ಮಹಿಳೆಯ ಸ್ಟಂಟ್‌‌ಗೆ ನೆಟ್ಟಿಗರು ಹಿಡಿ ಶಾಪ ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಧ್ವನಿ ಎತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.