ಸಣ್ಣ ವಯಸ್ಸಿನ ಬಾಲಕ ಭಿಕ್ಷೆ ಬೇಡಿ ಕೋಟ್ಯಾಂತರ ರೂಪಾಯಿಯ ಒಡೆಯ, ಬೆ.ಚ್ಚಿಬಿದ್ದ ಅಧಿಕಾರಿಗಳು

 | 
Hj

ಪಿರಾನ್ ಕಲಿಯಾರ್ ಪ್ರಾರ್ಥನಾ ಮಂದಿರದ ಮುಂದೆ ಭಿಕ್ಷೆಗಾಗಿ ಕೈ ಚಾಚುತ್ತಿದ್ದ 10 ವರ್ಷದ ಶಹ್‌ಜೆಬ್ ಆಲಂ, ನಾಪತ್ತೆಯಾಗಿ ಒಂದು ವರ್ಷ ಬಳಿಕ ಇದೀಗ ಕೋಟ್ಯಧಿಪತಿಯಾಗಿ ಮನೆಗೆ ಮರಳಿರುವುದು ಎಲ್ಲರ ಗಮನ ಸೆಳೆದಿದೆ.ಅನಾಥನಾಗಿದ್ದ ಬಾಲಕ, ಹರಿದ ಬಟ್ಟೆಗಳೊಂದಿಗೆ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾರ್ಥನಾ ಮಂದಿರದ ಬಳಿ ತೆರಳಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಂದ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಈ ಘಟನೆ ಆತನ ಜೀವನವನ್ನೇ ಬದಲಿಸಿತ್ತು.

ಆತ 10 ವರ್ಷದ ಬಾಲಕ. ಪ್ರಾರ್ಥನಾ ಮಂದಿರದ ಬಳಿ ಭಿಕ್ಷೆ ಬೇಡುವುದು, ಅಲ್ಲಿಯೇ ಇರುವ ಸ್ಥಳವೊಂದರ ಬಳಿ ಮಲಗುವುದು. ಕಳೆದ ಒಂದು ವರ್ಷದಿಂದ ಬಾಲಕನ ನಿತ್ಯದ ಕೆಲಸ ಇದೇ ಆಗಿತ್ತು. ಆತನಿಗೆ ಸಹಾಯ ಮಾಡಲು ತನ್ನವರು ಅಂತ ಯಾರು ಇರಲಿಲ್ಲ. ಹೀಗಾಗಿ ಅನಾಥನಾಗಿದ್ದ ಬಾಲಕ, ಹೊಟ್ಟೆ ತುಂಬಿಸಿಕೊಳ್ಳಲು ಪ್ರಾರ್ಥನಾ ಮಂದಿರದ ಬಳಿ ತೆರಳಿ ಹರಿದ ಬಟ್ಟೆಗಳೊಂದಿಗೆ ಮಂದಿರಕ್ಕೆ ಭೇಟಿ ನೀಡಿ ಭಕ್ತರಿಂದ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. 

ಆತನನ್ನು ಅಲ್ಲಿನ ಜನರು ಶಹಜೇಬ್ ಆಲಂ ಎಂದು ಕರೆಯುತ್ತಿದ್ದರು.ಆದರೆ ಈಗ ದಿನ ಬೆಳಗಾಗುತ್ತಿದ್ದಂತೆ ಆತನ ಜೀವನವೇ ಬದಲಾಗಿದೆ. ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ ಆತ ಒಡೆಯನಾಗಿದ್ದಾನೆ. ಅರೇ, ಭಿಕ್ಷೆ ಬೇಡುತ್ತಿದ್ದ ಬಾಲಕ ದಿನಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿ  ಆಗಿದ್ದೇಕೆ ಅಂತ ಯೋಚನೆ ಮಾಡ್ತಿದ್ದೀರಾ? ಇಲ್ಲಿದೆ ವಿವರ
2021ರಲ್ಲಿ ಬಾಲಕನ ತಾಯಿ ಇಮ್ರಾನಾ, ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಪರಿಣಾಮ ಬಾಲಕನನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. 

ಸ್ಥಳೀಯರೊಬ್ಬರು ಅನಾಥನಾಗಿದ್ದ ಶಹಜೇಬ್​​ಗೆ, ಪಿರಾನ್​ ಕಲಿಯಾದಲ್ಲಿ ಆಶ್ರಯ ಪಡೆದುಕೊಳ್ಳಲು ಸಲಹೆ ನೀಡಿದ್ದರು. ಅಂದಹಾಗೇ, ಪಿರಾನ್​ ಕಲಿಯಾರ್, ಸೂಫಿ ಪಂಥದ ಪ್ರಸಿದ್ಧ ಪ್ರಾರ್ಥನಾ ಮಂದಿರವಾಗಿದೆ. ಇಲ್ಲಿಯೇ ಬಾಲಕ ಭಿಕ್ಷೆ ಬೇಡುತ್ತಾ ಜೀವನ ಮಾಡುತ್ತಿರುತ್ತಾನೆ. ಇಂತಹ ಸ್ಥಿತಿಯಲ್ಲಿದ್ದ ಬಾಲಕನ ಜೀವನ ಬದಲಾಗಿದ್ದು ಇಲ್ಲಿಯೇ ನೋಡಿ. ಶಹಜೇಬ್​ ಆಲಂ, ಅವರ ತಾತ ಅಂದರೆ, ಮೊಹಮ್ಮದ್ ನವೀದ್​ ಅವರ ತಂದೆ ಮೊಹಮ್ಮದ್ ಯಾಕುಬ್​​ ತಮ್ಮ, ಉಯಿಲಿನಲ್ಲಿ ತಮ್ಮ ಹೆಸರಿನ ಆಸ್ತಿಯಲ್ಲಿ ಬಾಲಕನ ತಂದೆಗೆ ಹೋಗಬೇಕಿದ್ದ ಸುಮಾರು 2 ಕೋಟಿ ರೂಪಾಯಿ ಆಸ್ತಿಯನ್ನು ಮೊಮ್ಮಗನ ಹೆಸರಿನಲ್ಲಿ ಬರೆದಿದ್ದರು. ಇದರಂತೆ ಅವರ ಮರಣದ ನಂತರ ಆ 2 ಕೋಟಿ ರೂಪಾಯಿ ಮೊಮ್ಮಗನಾದ ಶಹಜೇಬ್​​ಗೆ ಸೇರಬೇಕಿತ್ತು.

ಆಸ್ತಿ ಬಾಲಕ ಶಹಜೇಬ್​ ಹೆಸರಿಗೆ ಬಂದರೂ, ಆತ ಎಲ್ಲಿದ್ದಾನೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಸಂಬಂಧಿಕರು ಬಾಲಕನ ಪತ್ತೆಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದ್ದರು. ಈ ವೇಳೆ ಶಹಜೇಬ್​, ಪಿರಾನ್​ ಕಲಿಯಾರ್​​ನಲ್ಲಿ ಭಿಕ್ಷೆ ಬೇಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಸಂಬಂಧಿಗಳು ಆತನನ್ನು ಕರೆದುಕಂಡು ಉತ್ತರ ಪ್ರದೇಶದ ಸಹರಾನ್ಪುರ್​ಗೆ ವಾಪಸ್​ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.