ಮು.ಸ್ಲಿಂಮರ ಡೋಂಗಿ ಬಾಬಾ ಕೊಟ್ಟ ಮದ್ದಿನಿಂದ ಕ್ಯಾನ್ಸರ್ ಬರೆಸಿಕೊಂಡ ಯುವತಿ, ಇಡೀ ದೇಶವೇ ಆ ಘಾತ

 | 
Hhh

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಇಷ್ಟು ಮುಂದುವರೆದಿದೆ ಆದರೂ ಜನರಲ್ಲಿ ಮೂಡನಂಬಿಕೆ ಮಾಸಿಲ್ಲ.ಡೋಂಗಿ ಬಾಬಾನ ಮಾತು ಕೇಳಿ ಕುಟುಂಬ ಸದಸ್ಯರೇ ಕ್ಯಾನ್ಸರ್ ಪೀಡಿತ ಯುವತಿಯನ್ನು ನಾಲ್ಕೈದು ತಿಂಗಳು ಗೃಹ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಿರುವ ಘಟನೆ ಲಗ್ಗೆರೆ ಬಳಿಯ ರಾಜೀವ್‌ಗಾಂಧಿ ನಗರದಲ್ಲಿ ನಡೆದಿದೆ. 

ನಾಲ್ಕು ತಿಂಗಳು ಚಿತ್ರಹಿಂಸೆ ಅನುಭವಿಸಿದ ಯುವತಿ ಕೊನೆಗೆ ಪರಿಚಯಸ್ಥರಿಗೆ ವಾಟ್ಸಾಪ್ ಗೆ ಸಂದೇಶ ಕಳಿಸಿದ್ದರಿಂದ ಸಂಕಷ್ಟದಿಂದ ಹೊರಬರುವಂತಾಯಿತು. ಆದರೆ ಬಾಬಾನ ಮಾತು ಕೇಳಿ ಗೃಹಬಂಧನದಲ್ಲಿದ್ದದ್ದರಿಂದ ಸೂಕ್ತ ಚಿಕಿತ್ಸೆ ಸಿಗದೆ ಕ್ಯಾನ್ಸರ್ ಉಲ್ಬಣಗೊಂಡಿದೆ. ಆಕೆ ಇದೀಗ ಸಾವು ಬದುಕಿನ ನಡುವೆ ಹೊರಾಡುವಂತಾಗಿದೆ.

ಗೃಹ ಬಂಧನದಲ್ಲಿದ್ದ ಯುವತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ಮನೆಯಲ್ಲಿ ಕೂಡಿ ಹಾಕುವಂತೆ ಸೂಚಿಸಿದ್ದ ಡೋಂಗಿ ಬಾಬಾಗೆ ಮಹಿಳಾ ಪರ ಸಂಘಟನೆಗಳ ಸದಸ್ಯೆಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗ್ರಾಮವೊಂದರ ಆ ಯುವತಿ ಬಿಕಾಂ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಯುವತಿಗೆ 4 ತಿಂಗಳ ಹಿಂದೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಕುಟುಂಬ ಸದಸ್ಯರು ಯುವತಿಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಬೆನ್ನು ನೋವು ಶಮನವಾಗಿರಲಿಲ್ಲ.

ಹೀಗಾಗಿ, ಕುಟುಂಬ ಸದಸ್ಯರು ಯುವತಿಯನ್ನು ಮನೆಯ ಸಮೀಪದ ದರ್ಗಾವೊಂದರ ಬಾಬಾನ ಬಳಿ ಕರೆದೊಯ್ದಿದ್ದರು. ಆ ಬಾಬಾ, ಯುವತಿಗೆ ದೆವ್ವ ಹಿಡಿದಿದ್ದು, ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ, ಎಂದು ಹೇಳಿದ್ದ. ಬಾಬಾ ಸೂಚನೆಯಂತೆ ಕುಟುಂಬ ಸದಸ್ಯರು ಯುವತಿಯನ್ನು ನಾಲ್ಕೈದು ತಿಂಗಳಿಂದ ಗೃಹ ಬಂಧನದಲ್ಲಿಇರಿಸಿದ್ದರು. 

ಅಲ್ಲದೆ ಯುವತಿಗೆ ಊಟ ಕೊಡದೆ ಪ್ರತಿನಿತ್ಯ ಅರಿಶಿನ ಬೆರೆಸಿದ ನೀರು ಮತ್ತು ನಿಂಬೆ ರಸ ಕುಡಿಸುತ್ತಿದ್ದರು. ಬಹಳ ದಿನದಿಂದ ಆಹಾರವಿಲ್ಲದೆ ಯುವತಿ ಬಹಳ ನಿತ್ರಾಣಗೊಂಡಿದ್ದಳು. ಆದರೂ ಆಕೆಯ ಸಹೋದರ ಪ್ರಶಾಂತ್‌ ಮತ್ತು ಮನೆಯವರು ಆಕೆಯನ್ನು ಆಸ್ಪತ್ರೆಗೂ ಕರೆದೊಯ್ದಿದಿರಲಿಲ್ಲ.

ಯುವತಿ ಬೆನ್ನು ನೋವು ತಾಳಲಾರದೆ ಮನೆಯಲ್ಲಿ ಪ್ರತಿನಿತ್ಯ ಕಿರುಚಾಡುತ್ತಿದ್ದಳು. ಆ ಸಂದರ್ಭದಲ್ಲೆಲ್ಲ ಸಹೋದರ ಆಕೆಯನ್ನು ಅಮಾನವೀಯವಾಗಿ ಥಳಿಸುತ್ತಿದ್ದ. ಇನ್ನು ಸಹಿಸಲು ಸಾಧ್ಯವೇ ಇಲ್ಲ ಎಂದಾದಾಗ ಅಂತಿಮವಾಗಿ ಯುವತಿಯು ಪರಿಚಯಸ್ಥರ ಮೊಬೈಲ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿ, ತನ್ನನ್ನು ಕಾಪಾಡುವಂತೆ ಮನವಿ ಮಾಡಿದ್ದಳು. 

ದೇಹ ಸ್ಥಿತಿ ಗಂಭೀರವಾದಾಗ ಕುಟುಂಬ ಸದಸ್ಯರು ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಆಕೆ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವುದು ದೃಢಪಟ್ಟಿತ್ತು. ಕುಟುಂಬ ಸದಸ್ಯರು ಯುವತಿಗೆ ಆರಂಭದಲ್ಲೇ ಚಿಕಿತ್ಸೆ ಕೊಡಿಸಿದ್ದರೆ ಕ್ಯಾನ್ಸರ್‌ ನಿವಾರಣೆ ಹಂತಕ್ಕೆ ಬರುತ್ತಿತ್ತು. ಆದರೆ ದರ್ಗಾವೊಂದರ ಬಾಬಾನ ಮಾತು ಕೇಳಿ ಯುವತಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸದ ಕಾರಣ ಕಾಯಿಲೆ ಉಲ್ಭಣಗೊಂಡಿರುವುದು ನೋವಿನ ಸಂಗತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.