ಅಂಬಾನಿ ಫಂಕ್ಷನ್ ನಲ್ಲಿ ಕುಣಿಯಲು ಅಮಲು ಪದಾರ್ಥ ಸೇವನೆ ಮಾ.ಡಿದ್ರಾ ಅಮೀರ್ ಖಾನ್; ಖಾನ್ ಗಳ ಎಡವಟ್ಟು

 | 
Hshs

ಅಮೀರ್ ಖಾನ್ ದೇಶ ಕಂಡ ಅದ್ಭುತ ಕಲಾವಿದ. ಆದರೆ ವಿವಾದಗಳಿಂದಲೆ ಹೆಚ್ಚು ಸುದ್ದಿ ಮಾಡಿದವ. ಹೌದು ಆಮೀರ್ ಖಾನ್ ತಮ್ಮ ಮುಂದಿನ ಚಿತ್ರ ಸಿತಾರೆ ಜಮೀನ್ ಪರ್ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಲಾಲ್​ ಸಿಂಗ್​ ಚಡ್ಡಾ ಸೇರಿದಂತೆ ಒಂದಾದ ಮೇಲೊಂದರಂತೆ  ಸಿನಿಮಾ ಹೀನಾಯವಾಗಿ ಸೋಲುತ್ತಿರುವುದರಿಂದ ಮುಂದಿನ ಚಿತ್ರಗಳ ಆಯ್ಕೆಯಲ್ಲಿ ಅವರು ತುಂಬಾ ಕಾಳಜಿ ವಹಿಸುತ್ತಿದ್ದಾರೆ.  

ಅವರ ಮುಂಬರುವ ಚಿತ್ರದ ಸೆಟ್‌ಗಳಿಂದ, ಅಮೀರ್ ಲೈವ್ ಇನ್‌ಸ್ಟಾಗ್ರಾಮ್ ಸೆಷನ್ ಮಾಡಿದರು.ಇದರಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು ಮತ್ತು ಸೂಪರ್ ಸ್ಟಾರ್ ಉತ್ತರಿಸಿದರು. ಕೆಲವು ವಿಚಿತ್ರ ಪ್ರಶ್ನೆಗಳಿಂದಾಗಿ ಆಮೀರ್ ಟ್ರೋಲಿಂಗ್ ಎದುರಿಸಬೇಕಾಯಿತು.

ಮೊದಲನೆಯದಾಗಿ, ಈ ಸೆಷನ್​ನಲ್ಲಿ ನಟ ಮಿಸ್ಸಿಂಗ್ ಲೇಡೀಸ್ ಚಿತ್ರದಲ್ಲಿನ ರೋಲ್​ ಬಗ್ಗೆ ಫ್ಯಾನ್​ ಒಬ್ಬರು ಅಸಮಾಧಾನ ವ್ಯಕ್ತಪಡಿಸಿ, ಶೈಲಿಯನ್ನು ಬದಲಾಯಿಸುವಂತೆ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್, ಅದು ಚೆನ್ನಾಗಿದೆ...ನನ್ನ ಶೈಲಿ ವಿಶಿಷ್ಟವಾಗಿದೆ, ಆದ್ದರಿಂದ ಹೆಚ್ಚು ಜನರಿಗೆ ಇಷ್ಟವಾಗುವುದಿಲ್ಲ, ಆದ್ದರಿಂದ ಇದನ್ನು ಹೆಚ್ಚು ಜನರು ಹೊಗಳುವುದಿಲ್ಲ' ಎಂದು ಹೇಳಿದರು. 

ಇದೇ ವೇಳೆ ಇನ್ನೊಬ್ಬ ಕಮೆಂಟಿಗ  , ಸರ್, ನೀವು ಡ್ರಗ್ಸ್ ತೆಗೆದುಕೊಳ್ಳುತ್ತೀರಿ ಎಂದು ತೋರುತ್ತದೆ, ಡ್ರಗ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಹೇಳಿದರು. ಇದಕ್ಕೂ ಉತ್ತರಿಸಿದ ನಟ, ನೀವು ಏನು ಹೇಳುತ್ತಿದ್ದೀರಿ ಎಂದು ಆಮಿರ್​ ಖಾನ್​ ಮರುಪ್ರಶ್ನೆ ಹಾಕಿದ್ದಾರೆ. ಆ ಮೂಲಕ ತಾವು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. 

ಆದರೆ, ಅಭಿಮಾನಿಗಳು ಇಲ್ಲಿಗೆ ನಿಲ್ಲಲಿಲ್ಲ ಮತ್ತು ಒಬ್ಬರು ನೀವು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪೂರ್ವದಲ್ಲಿ ಡ್ಯಾನ್ಸ್ ಮಾಡಿದ್ದೀರಿ, ಆದರೆ ನಿಮ್ಮ ಮಗಳು ಆಯ್ರಾ ಮದುವೆಯಲ್ಲಿ ಏಕೆ ನೃತ್ಯ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಈ ಸಮಾರಂಭದಲ್ಲಿ ನಟಿಸಲು ಬಹುತೇಕ ಎಲ್ಲಾ ಸ್ಟಾರ್​ಗಳು ತೆಗೆದುಕೊಳ್ಳುವಂತೆ ಮೂರು ಖಾನ್​ಗಳು ಕೋಟ್ಯಂತರ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. 

ಆದರೆ ತಾವು ದುಡ್ಡನ್ನು ತೆಗೆದುಕೊಂಡಿಲ್ಲ ಎನ್ನುವ ಅರ್ಥ ಬರುವಂತೆ ಆಮೀರ್​ ಅವರು, ಸಭ್ಯ ಪ್ರತಿಕ್ರಿಯೆ ನೀಡಿ, ನನ್ನ ಮಗಳ ಮದುವೆಯಲ್ಲೂ ಡ್ಯಾನ್ಸ್ ಮಾಡಿದ್ದೇನೆ, ಹಾಗೆ ಈಗಲೂ ಮಾಡಿದ್ದೇನೆ ಅಷ್ಟೇ ಎಂದು ಜಾರಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.