ಆಮೀರ್ ಖಾನ್ ಪುತ್ರಿಯ ಮದುವೆ ಕಾರ್ಯಕ್ರಮ ನೋಡಿ ಬೆ ಚ್ಚಿಬಿದ್ದ ಜನ, ಯಾವ ರೀತಿ ನಡೆಯಿತು ಗೊ.ತ್ತಾ

 | 
Bx

ಕೆಲ ದಿನಗಳ ಹಿಂದಷ್ಟೇ ಆಮೀರ್ ಪುತ್ರಿ ಇರಾ ಖಾನ್ ತಮ್ಮ ಹಲವು ವರ್ಷಗಳ ಬಾಯ್‌ಫ್ರೆಂಡ್ ನೂಪುರ್‌ರನ್ನು ಜನವರಿ 3ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್ ನಟ ನಟಿಯರ, ಅವರ ಮಕ್ಕಳ ವಿವಾಹ ಎಂದರೆ ಎಲ್ಲರ ಕಣ್ಣೂ ಅವರು ಏನು ಧರಿಸಿದ್ದರು, ಅದನ್ನು ಯಾರು ಡಿಸೈನ್ ಮಾಡಿದ್ದು, ಯಾವೆಲ್ಲ ಆಭರಣ ಹಾಕಿದ್ದಾರೆ ಇತ್ಯಾದಿಗಳ ಮೇಲಿರುತ್ತದೆ.

ಆ ಬಗ್ಗೆ ಸಾಕಷ್ಟು ಫ್ಯಾಶನ್ ಸುದ್ದಿಯೂ ಆಗುತ್ತದೆ. ಫ್ಯಾಶನ್ ವಿಷಯದಲ್ಲಿ ತಾವು ಸಾಮಾನ್ಯರ ಐಕಾನ್ ಆಗಬೇಕೆಂದು ಬಾಲಿವುಡ್ ಮಂದಿಯೂ ಬಯಸುತ್ತಾರೆ. ಆದರೆ, ಇರಾ- ನೂಪುರ್ ವಿವಾಹ ಸಮಾರಂಭದಲ್ಲಿ ಮಾತ್ರ ನೂಪುರ್ ಧರಿಸಿದ್ದ ಬಟ್ಟೆ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಅದೇನು ಬಹಳ ಚೆನ್ನಾಗಿತ್ತೆಂದಲ್ಲ, ಬದಲಿಗೆ ವಿಚಿತ್ರವಾಗಿತ್ತು ಎಂಬ ಕಾರಣಕ್ಕೆ. 
 
ಆಮೀರ್ ಖಾನ್ ಕುಟುಂಬವಷ್ಟೇ ಅಲ್ಲ, ಅಂಬಾನಿ ಕುಟುಂಬವೂ ಭಾಗವಹಿಸಿದ್ದಂತ ವಿವಾಹ ಸಮಾರಂಭದಲ್ಲಿ ಆಮೀರ್ ಅಳಿಯ ಯಾರಿಗೂ ಕೇರ್ ಮಾಡದೆ ಚಡ್ಡಿ ಬನಿಯನ್ ಧರಿಸಿ ವಿವಾಹ ನೋಂದಣಿ ಕಾರ್ಯ ಪೂರೈಸಿದ್ದು ಸುದ್ದಿಯಾಗಿದೆ. ಅಲ್ಲಾ ಸ್ವಾಮಿ, ಅಷ್ಟೊಂದು ಹೆಸರು ಮಾಡಿದ ನಟನ ಪುತ್ರಿಯನ್ನು ವಿವಾಹವಾಗುವುದೆಂದ ಮೇಲೆ ದೊಡ್ಡ ದೊಡ್ಡ ವಿನ್ಯಾಸಕರು ತಯಾರಿಸಿದ ಶೇರ್ವಾನಿಯೋ, ಸೂಟೋ ಧರಿಸುವುದು ಬಿಟ್ಟು, ಇದೇನಿದು ಚಡ್ಡಿ ಬನಿಯನ್ನು? 
ಹೋಗಲಿ, ಸಿಂಪಲ್ ಆಗಿ ಒಂದು ಶರ್ಟ್ ಆದರೂ ಹಾಕಿಕೊಳ್ಳಲಾಗುತ್ತಿರಲಿಲ್ಲವೇ ಎನ್ನುತ್ತಿದ್ದಾರೆ ನೆಟಿಜನ್ಸ್. 

ವಿವಾಹಕ್ಕೆ ಇರಾ ಲೆಹೆಂಗಾ ಹಾಕಿ ಅದ್ದೂರಿಯಾಗಿ ಸಜ್ಜಾಗಿದ್ದರು. ಆಮೀರ್, ಆತನ ಪತ್ನಿಯರು ಎಲ್ಲರೂ ಮಿರಿಮಿರಿ ಮಿಂಚುತ್ತಿದ್ದರು. ಆದರೆ, ಮದುವೆ ವರ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿದ್ದಿದು ಬಹಳ ವಿಚಿತ್ರವಾಗಿತ್ತು. ಈ ಸಂಬಂಧ ವಿಡಿಯೋ ವೈರಲ್ ಆದ ಕೂಡಲೇ ನೆಟಿಜನ್‌ಗಳು ಕಾಮೆಂಟ್‌ಗಳ ವಿಭಾಗದಲ್ಲಿ ಹರಿಹಾಯ್ದಿದ್ದಾರೆ. 

ಒಬ್ಬ ವರನು ಅಂತಹ ಶೈಲಿಯಲ್ಲಿ ಧರಿಸಿರುವುದು ತುಂಬಾ ಮುಜುಗರದ ಸಂಗತಿ ಎಂದು ಓರ್ವ ಬಳಕೆದಾರರು ಹೇಳಿದ್ದರೆ, ಈತ ಮದುವೆಯಾಗಲು ಬಂದಿದ್ದನೋ, ಜಿಮ್‌ನಲ್ಲಿ ವರ್ಕೌಟ್ ಮಾಡಲು ಬಂದಿದ್ದನೋ ಎಂದು ಮತ್ತೊಬ್ಬರು ಪ್ರಶ್ನಿಸಿ ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.