ಕಾವೇರಿ ಮೂಲಸ್ಥಾನದಲ್ಲಿ ಅಭಿಷೇಕ್ ಅಂಬರೀಶ್ ಪೂಜೆ ಸಲ್ಲಿಕೆ, ಯಾರಿಗೂ ತಿಳಿಯದೆ ಕಾವೇರಿ ಪರ ನಿಂತ ಅಭಿ

 | 
Hbg

ಈಗಾಗಲೇ ಕಾವೇರಿ ವಿವಾದಕ್ಕೆ ಸ್ಯಾಂಡಲ್‌ವುಡ್‌ ಸಾಥ್‌ ನೀಡಿದೆ. ಬಹಳಷ್ಟು ಕನ್ನಡದ ನಟ-ನಟಿಯರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇದೀಗ ಅಂಬಿ ಅವರ ಪುತ್ರ ಅಭಿಷೇಕ್ ಅಂಬರೀಶ್‌ ಅವರು ಪತ್ನಿ ಅವಿವಾ ಜತೆಯಾಗಿ ಕಾವೇರಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ. 

ಕಾವೇರಿ ಉಗಮ ಸ್ಥಾನ ತಲಕಾಡಿನಲ್ಲಿ ನಿನ್ನೆ ಅಭಿಷೇಕ್ ಅಂಬರೀಶ್, ಪತ್ನಿ ಅವಿವಾ ಅಭೀಷೇಕ್ ತಾಯಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗಿ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥಿಸಿದರು. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹಸರು ಶಾಲು ಹೊದ್ದು ಪೂಜೆ ಸಲ್ಲಿಸಿದರು ಅಭಿಷೇಕ್‌. ಕೊಡಗು ಜಿಲ್ಲೆಯ ತಲಕಾವೇರಿಗೆ ದಂಪತಿ ಭೇಟಿ ನೀಡಿದ್ದಾರೆ. 

ಮಳೆ ಬರಲಿ ಎಂದು ಪ್ರಾರ್ಥಿಸುವುದರ ಜತೆಗೆ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಪತಿ ಪತ್ನಿಯಿಬ್ಬರು ಕಾವೇರಿ ವಿವಾದ ಕೊನೆಗೊಳ್ಳಲಿ ಎಂದು ಉಪವಾಸವನ್ನು ಸಹ ಮಾಡಿದ್ದಾರೆ. ಇನ್ನು ಕೆಲದಿನಗಳ ಹಿಂದೆ ಕಾವೇರಿ ನೀರು ವಿವಾದದ ಬಗ್ಗೆ ರಾಜಕಾರಣವನ್ನು ಬದಿಗಿಟ್ಟು ತಮಿಳುನಾಡು ಮತ್ತು ಕರ್ನಾಟಕ ಪರಸ್ಪರ ಮಾತುಕತೆ ನಡೆಸಿ ಸರ್ವಸಮ್ಮತವಾದ ನಿರ್ಧಾರ ಕೈಗೊಂಡರೆ

ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ನಟ ಅಭಿಷೇಕ್ ಅಂಬರೀಶ್ ಅಭಿಪ್ರಾಯಪಟ್ಟರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ರೈತರ ಜೊತೆ ಕುಳಿತು ಸಾಥ್ ನೀಡಿದರು. ಸ್ಥಳದಲ್ಲಿದ್ದ ನಿರ್ಮಲಾನಂದ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದು ಮಾತನಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.