ಐಶ್ವರ್ಯ ರೈಗೆ ಡಿವೋರ್ಸ್ ಕೊಟ್ಟ ಅಭಿಷೇಕ್? ಏನಿದು ಕಹಿಸುದ್ದಿ, ಕಾರಣ ಬೆಚ್ಚಿಬಿದ್ದ ಬಚ್ಚನ್ ಮಗ

 | 
Vbh

ಇದೀಗ ಎಲ್ಲೆಡೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರ ಪುತ್ರ ಅಭಿಷೇಕ್‌ ಬಚ್ಚನ್‌ ತಮ್ಮ ಪತ್ನಿ ಜೊತೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ಡಿವೋರ್ಸ್‌ ಪಡೆಯಲಿದ್ದಾರೆಂಬ ಸಂಗತಿ ಎಲ್ಲೆಡೆ ವೈರಲ್‌ ಆಗಿದೆ. ಈ ಸೆಲೆಬ್ರಿಟಿ ದಂಪತಿಗಳ ಮಧ್ಯೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. 

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಸಂಗತಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ಸಮಯದಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ವದಂತಿಗಳು ಮುಖ್ಯಾಂಶಗಳಲ್ಲಿವೆ. ಆದರೆ ಈ ಜೋಡಿಯು ಈ ಸಂಗತಿಯನ್ನು ದೃಢೀಕರಿಸಸಿಲ್ಲ. ಆದರೆ ಇತ್ತೀಚೆಗೆ ನಟ ಅಭಿಷೇಕ್‌ ಬಚ್ಚನ್‌ ಮದುವೆಯಲ್ಲಿ ಹಾಕಿದ್ದ ಉಂಗುರ ಇಲ್ಲದೇ ಕಾಣಿಸಿಕೊಂಡರು. 

ಇದೇ ವಿಚಾರ ಅವರ ವಿಚ್ಛೇದನ ವದಂತಿ ಹಬ್ಬಲು ಕಾರಣವಾಗುತ್ತಿದೆ. ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಅವರನ್ನು ಬಾಲಿವುಡ್‌ನ ಪವರ್ ಕಪಲ್ ಎಂದು ಕರೆಯಲಾಗುತ್ತದೆ. 2007 ರಲ್ಲಿ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಮದುವೆಯಾದರು. ಅತ್ಯುತ್ತಮ ಜೋಡಿ ಎಂದೇ ಹೆಸರಾಗಿದ್ದರು. ಅಭಿಷೇಕ ಬಚ್ಚನ್ ಉತ್ತಮ ನಟ ಆದರೆ ಅವರ ಅದೃಷ್ಟ ಕೈ ಹಿಡಿಯಲೇ ಇಲ್ಲ.

ಡಿವೋರ್ಸ್ ರೂಮರ್ಸ್ ವೇಳೆ ಐಶ್ವರ್ಯಾ ರೈ ಹಳೇ ಸಂದರ್ಶನದ ವಿಡಿಯೋ ವೈರಲ್ ಆಗಿದೆ. 2010ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ, ಅಭಿಷೇಕ್ ಜೊತೆ ನಾನು ಪ್ರತಿದಿನ ಜಗಳವಾಡುತ್ತೇನೆ ಎಂದು ಹೇಳಿದ್ದರು. ನನ್ನ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಭಿನ್ನಾಭಿಪ್ರಾಯವಿದೆ. ಈ ಭಿನ್ನಾಭಿಪ್ರಾಯ ಬೇಗ ಇತ್ಯರ್ಥವಾಗುತ್ತವೆ. ನಮ್ಮ ಸಂಬಂಧದಲ್ಲಿ ಏರಿಳಿತ ಕೂಡ ಇದೆ. 

ಇಬ್ಬರ ಪರಸ್ಪರ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದು ಐಶ್ವರ್ಯಾ ರೈ ಈ ಹಿಂದೆ ಹೇಳಿಕೊಂಡಿದ್ರು. ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಇರುವ ಭಿನ್ನಾಭಿಪ್ರಾಯದ ದೊಡ್ಡದಾಗಿ ಬೆಳೆದಿದ್ದು ವಿಚ್ಛೇದನದವರೆಗೆ ಬಂದಿದೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.