ನಟ ದರ್ಶನ್ ಗೆ ಮತ್ತೆ ಜೈಲು? ಹೆದರಿ ದೇಶ ಬಿಟ್ಟು ಹೋಗಿದ್ದಾರೆ ಎಂದ ಶತ್ರುಗಳು

 | 
Js

      ಕನ್ನಡ ಸಿನಿಮಾ ರಂಗದ ದೊಡ್ಡ ನಟನಾಗಿ, ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಹೀರೋ ಆಗಿ ಇಡೀ ಇಂಡಿಯಾ ಪೂರ್ತಿ ಹವಾ ಇಟ್ಟಿದ್ದ ನಟ ಡಿ-ಬಾಸ್ ದಶ೯ನ್ ಅವರ ಬಾಳಲ್ಲಿ ಈಗ ಬಿರುಗಾಳಿ ಎದ್ದಿದೆ. 

     ರೇಣುಕಾಸ್ವಾಮಿ ಕೊಲೆ ಕೇಸ್ಸುಳಿಯಲ್ಲಿ ಸಿಲುಕಿ ಬಳ್ಳಾರಿ ಜೈಲಿಗೆ ಹೋಗಿದ್ದ ಡಿ-ಬಾಸ್ ದಶ೯ನ್, ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಹೀಗಿದ್ದಾಗ ಥಾಯ್‌ಲ್ಯಾಂಡ್ ಪ್ರವಾಸ ಕೈಗೊಂಡು ಡೆವಿಲ್ ಸಿನಿಮಾದ ಶೂಟಿಂಗ್ ಕೂಡ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಹೆದರಿ ದೇಶ ಬಿಟ್ಟು ಹೋಗಿದ್ದಾರೆ ಅಂತಾ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. 
     ಅಂದಹಾಗೆ ರೇಣುಕಾಸ್ವಾಮಿ ಒಬ್ಬ ಕಾಮುಕ,ನಮ್ಮ ಬಾಸ್ ಸರಿಯಾಗೇ ಮಾಡಿದ್ದಾರೆ ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಪವಿತ್ರಾ ಗೌಡ ಅವರು ಡಿ-ಬಾಸ್ದರ್ಶನ್ ತೂಗುದೀಪ್ ಅವರು 10 ವರ್ಷಗಳಿಂದಲೂ ಸ್ನೇಹ ಕಾಪಾಡಿಕೊಂಡು ಬಂದಿದ್ದರು. ಆದರೆ ರೇಣುಕಾಸ್ವಾಮಿ ತಮಗೆ ಕೆಟ್ಟ ಕೆಟ್ಟದಾಗಿ ಫೋಟೋ ಕಳಿಸಿ, ಅಶ್ಲೀಲ ಮೆಸೇಜ್ಮಾ ಡುತ್ತಿದ್ದ ವಿಚಾರ ಗೊತ್ತಾದ ಕಾರಣಕ್ಕೆ ಈ ರೀತಿ ಪಾಠ ಕಲಿಸಿದ್ದಾರೆ ಅಂತಾ ಹೇಳುತ್ತಾರೆ ಫ್ಯಾನ್ಸ್.
      ಇಷ್ಟೆಲ್ಲದರ ನಡುವೆ, ಇನ್ನೇನು ಪರಿಸ್ಥಿತಿ ಸರಿ ಆಯ್ತು ಅನ್ನುವಾಗಲೇ ಮತ್ತೊಂದು ಆಘಾತ ಎದುರಾಗಿದೆ. ಅದರಲ್ಲೂ ಥಾಯ್ಲೆಂಡ್‌ಗೆ ಡೆವಿಲ್ ಶೂಟಿಂಗ್ ಮಾಡೋದಕ್ಕೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೋಗಿರುವಾಗಲೇ, ಶತ್ರುಗಳ ಬಾಯಿ ಕೂಡ ದೊಡ್ಡದಾಗಿದೆ ಅಂತಾ ರೊಚ್ಚಿಗೆದ್ದಿದ್ದಾರೆ ಅಭಿಮಾನಿಗಳು! ಇಷ್ಟೆಲ್ಲದರ ನಡುವೆ ಜಾಮೀನು ವಿಚಾರ ಕೂಡ ವಿಚಾರಣೆಗೆ ಬಂದಿದ್ದು, ಗುರುವಾರ ಈ ಕುರಿತು ಮಾನ್ಯ ಸುಪ್ರೀಂ ಕೋರ್ಟ್ ಅಂತಿಮ ಆದೇಶ ಹೊರಡಿಸುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ಅಭಿಮಾನಿಗಳು ಡೆವಿಲ್ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.