ಕಾಟೇರ ಸಿನಿಮಾದಲ್ಲಿ ಮಾಲಾಶ್ರೀ ಮಗಳು ಪಡೆದ ಸಂಭಾವನೆ ಸ್ವತಃ ನಟ ದಶ೯ನ್ ಗೆ ಇಲ್ಲ!

 | 
ರಿ

ನಟ ದರ್ಶನ್​​ ಅಭಿನಯದ ಬಹುನೀರಿಕ್ಷಿತ ಸಿನಿಮಾ ಕಾಟೇರ ತೆರೆಯ ಮೇಲೆ ಅಬ್ಬರಿಸುತ್ತಿದೆ. ಈ ಸಿನಿಮಾ ಮೂಲಕವಾಗಿ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ . ಈಗಾಗಲೆ ಆರಾಧನಾ ರಾಮ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದರು . ಇದೀಗ ಅವರ ಸೌಂದರ್ಯ ಹಾಗೂ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ಮೂಲಕ ಅನೇಕ ಹೊಸ ನಟಿಯರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಲಿಸ್ಟ್​ಗೆ ಇದೀಗ ಆರಾಧನಾ ರಾಮ್​ ಸೇರಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾಟೇರ ಸಿನಿಮಾಗಾಗಿ ಆರಾಧನಾ ಪಡೆದ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳಲು ಫ್ಯಾನ್ಸ್​​ ಸೋಶಿಯಲ್​​ ಮೀಡಿಯಾದಲ್ಲಿ ಹುಡುಕಾಡಿದ್ದಾರೆ.

ಮೊದಲ ಸಿನಿಮಾ ಕಾಟೇರಗೆ ನಟಿ ಆರಾಧನಾ ಪಡೆದ ಸಂಭಾವನೆ ಎಷ್ಟು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಆರಾಧನಾ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು 10 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಆದರೆ ದರ್ಶನ್ ಸಿನೆಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಅವರು ಹೆಸರು ಮಾಡೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್​, ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆಲ್ಲಲು ಭರ್ಜರಿ ಪ್ಲಾನ್ ಮಾಡಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಆರಾಧನಾ ರಾಮ್​ ಕಾಟೇರ್ ಪ್ರಮೋಷನ್ ಜೋರಾಗಿ ಮಾಡಿದ್ದರು. ಆರಾಧನಾ ರಾಮ್​ ಆ್ಯಕ್ಟಿಂಗ್​ ಕೂಡ ಸೂಪರ್ ಎಂದು  ಕಾಟೇರಾ ಸಿನೆಮಾ ನೋಡಿದ ಪ್ರೇಕ್ಷಕರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.