ಸ್ಟಾರ್ ಹೀರೋ ಆದ್ರೂ ಅವತ್ತಿನಿಂದ ಇವತ್ತಿನವರೆಗೂ ಒಂದೇ ಕಾರಿನಲ್ಲಿ ಓಡಾಡುತ್ತಿರುವ ನಟ ಸತೀಶ್ ನೀನಾಸಂ, ಕಾರಣ ಏನು ಗೊತ್ತಾ
Jul 23, 2025, 20:03 IST
|

2008ರಲ್ಲಿ ಸಿನಿಮಾ ಜೀವನಕ್ಕೆ ಕಾಲಿಟ್ಟ ನಟ ಸತೀಶ್ ನೀನಾಸಂ ಲೈಫ್ ಇಷ್ಟೇನೇ, ಪಂಚರಂಗಿ, ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಹಿಸಿದ್ದಾರೆ. ನಂತರ "ಲುಸಿಯಾ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ನೀನಾಸಂ ಸತೀಶ್ ಆಗಿ ಹೊರ ಹೊಮ್ಮಿದರು. ರಾಕೆಟ್ ಚಿತ್ರಕ್ಕೆ ನಿರ್ದೇಶನ, ನಿರ್ಮಾಪಕ, ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡರು.
ಇದೀಗ ನಟ ಸತೀಶ್ ನೀನಾಸಂ ತನ್ನ ಕಾರು ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ಹೌದು ಕಾರು ಚಲಾಯಿಸುವುದೆಂದರೆ ನನಗೆ ಬಹಳ ಪ್ರೀತಿ. ಟ್ರಾಫಿಕ್ ಕಿರಿಕಿರಿ ಇರದ ಶಾಂತ ವಾತಾವರಣದ ಮಲೆನಾಡು, ಚಿಕ್ಕ ಚಿಕ್ಕ ಕಾಡು ಪ್ರದೇಶ, ಬಂಡೀಪುರ ರಸ್ತೆ, ವಯನಾಡುನಂತಹ ರಸ್ತೆಗಳಲ್ಲಿ ನನಗೆ ಕಾರು ಡ್ರೈವ್ ಮಾಡುವುದು ತುಂಬಾ ಖುಷಿ ನೀಡುತ್ತದೆ. ಅದರಲ್ಲೂ ಮಳೆ ಬರುವಾಗ ಕಾರು ಚಲಾಯಿಸಲು ನನಗೆ ತುಂಬಾ ಚಾಲೆಂಜಿಂಗ್ ಮತ್ತು ಥ್ರಿಲ್ ಎನಿಸುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ನನ್ನ ಬಳಿ ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿದೆ. ಅತ್ಯಾಧುನಿಕ ಡ್ರೈವಿಂಗ್ ಮತ್ತು ತಂತ್ರಜ್ಞಾನ ಒಳಗೊಂಡ ವಿಶಾಲವಾದ ಸ್ಪೇಸ್ ಇರುವ ಲಕ್ಷುರಿ ಫೀಲ್ ಕೊಡುವ ಈ ಕಾರು ನನಗೆ ಸಿಕ್ಕಾಪಟ್ಟೆ ಕಂಫರ್ಟಬಲ್. ಈ ಕಾರಿನಲ್ಲಿ ಓಡಾವುದಕ್ಕೆ ನನಗೆ ತುಂಬಾ ಖುಷಿಯಾಗುತ್ತದೆ. ಎಂದಿಗೂ ಬೋರ್ ಎನಿಸಲಿಲ್ಲ. ಅದು ನನಗೆ ಕೇವಲ ಕಾರಲ್ಲ. ಅದರ ಜತೆ ತುಂಬಾ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಈಗಿನ ಯುವಕರಿಗೆ ಕಾರು ಮತ್ತು ಬೈಕ್ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಕ್ರೇಜ್ ಇರುವುದು ತಪ್ಪಲ್ಲ. ಆದರೆ ನಮ್ಮ ಸ್ಥಿತಿವಂತಿಕೆ, ಆರ್ಥಿಕ ಪರಿಸ್ಥಿತಿ ಪರಿಗಣಿಸಬೇಕು. ವಾಹನಗಳಿಗೆ ಕೊನೆಗೆ ಆದ್ಯತೆ ನೀಡಬೇಕು. ಜೀವನದಲ್ಲಿ ಸೆಟಲ್ ಆಗುವ ಬಗ್ಗೆ ಹೆಚ್ಚು ಗಮನಹರಿಸಬೇಕು. ಕಾರಿನ ಅವಶ್ಯಕತೆ ಇದ್ದರೆ ಮಾತ್ರ ಕಾರು ಖರೀದಿಸುವುದು ಉತ್ತಮ. ಸಾಲ ಮಾಡಿ ಕಾರು ಖರೀದಿಸುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023