ನಾನು ಮದುವೆ ಆಗದೇ ಇರೋದಕ್ಕೆ ಕಾರಣ ನಟ ಉಪೇಂದ್ರ, ನಟಿ ಅನುಪಮಾ ಗೌಡ ಹೇಳಿಕೆ ವೈರಲ್
Sep 12, 2024, 12:13 IST
|

ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಟಿ ಕಮ್ ನಿರೂಪಕಿ ಎಂದೇ ಫೇಮಸ್ ಆಗಿದ್ದಾರೆ.
ಆದರೆ ಅನುಪಮಾ ಇದುವರೆಗೂ ಸಿಂಗಲ್ ಆಗಿಯೇ ಇದ್ದಾರೆ. ಅವರು ಪ್ರೀತಿಯ ವಿಷಯದಲ್ಲಿ ತುಂಬಾ ನೋವನ್ನುಂಡವರು. ನನ್ನ ಲವ್ ಬ್ರೇಕಪ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಅಷ್ಟು ವರುಷಗಳ ಕಾಲ ಪ್ರೀತಿಸಿ, ಇನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗುತ್ತೇನೆ ಎನ್ನುವಾಗ ನನ್ನ ಲವ್ ಮುರಿದುಬಿತ್ತು ಎಂದು ಹಿಂದೊಮ್ಮೆ ಹೇಳುತ್ತಲೇ ಅದರ ಬಗ್ಗೆ ಮಾತನಾಡಿದ್ದರು. ಅದರ ನೋವಿನಲ್ಲಿಯೇ ಅವರು ಇಂದಿಗೂ ಮದುವೆಯಾಗಲಿಲ್ಲ.
ಆದರೆ ಇದೀಗ ಅವರು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ತಾವು ಮದುವೆಯಾಗದೇ ಇರೋದಕ್ಕೆ ಉಪೇಂದ್ರ ಅವರೇ ಕಾರಣ ಎಂದಿದ್ದಾರೆ! ಹೌದು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಬಂದಿದ್ದು, ಅವರ ಎದುರೇ ನಟಿ ಹೀಗೆ ಹೇಳಿದ್ದಾರೆ. ಅಷ್ಟಕ್ಕೂ ಅವರು ಅದನ್ನು ತಮಾಷೆಗಾಗಿ ಹೇಳಿದ್ದಾರೆ. ಪ್ರೀತಿ- ಪ್ರೇಮ ಪುಸ್ತಕದ ಬದನೆಕಾಯಿ ಅಂತ ಡೈಲಾಗ್ ಹೇಳಿಬಿಟ್ರು.
ಅದಕ್ಕೇ ನಾನು ಇನ್ನೂ ಮದ್ವೆಯಾಗಿಲ್ಲ ಎಂದು ತಮಾಷೆ ಮಾಡಿದ್ರೆ ಡೈಲಾಗ್ ಕಿಂಗ್ ಉಪೇಂದ್ರ ಸುಮ್ನೇ ಇರ್ತಾರಾ? ಆ ಡೈಲಾಗೇ ಪುಸ್ತಕದ ಬದನೆಕಾಯಿ ಅಮ್ಮಾ ಎಂದ್ರು. ಅದಕ್ಕೆ ಅನುಪಮಾ ನಮಗೆ ನಿಮ್ಮನ್ನು ನೋಡಿದ್ರೆ ಹೊಟ್ಟೆ ಉರಿಯತ್ತೆ ಎಂದ್ರು. ಆಗ ಉಪೇಂದ್ರ ಹೊಟ್ಟೆ ಉರ್ಕೊಳ್ಳಿ ಅಂತನಾ ಮದ್ವೆಯಾಗಿದ್ದು ಅಂದ್ರು! ನಂತ್ರ ರೊಮಾಂಟಿಕ್ ಸಾಂಗ್ಗೆ ಡಾನ್ಸ್ ಮಾಡೋಣ ಎಂದ್ರೆ, ಪ್ರಿಯಾಂಕಾ ಇಲ್ಲೇ ಇದ್ದಾರೆ, ನೀವು ಬೇಕಾದ್ರೆ ಮಾಡಿಕೊಳ್ಳಿ ಅಂತ ತಮಾಷೆ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025