ಗಂಡ ಯಾರೆಂದು ತಿಳಿಯದೆ ತುಂಬು ಗರ್ಭಿಣಿಯಾದ ನಟಿ, ಬೆ ಚ್ಚಿಬಿದ್ದ ಕರುನಾಡು

 | 
ಹಗದ

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಜೀವನಶೈಲಿ ಬಹಳ ಭಿನ್ನವಾಗಿರುತ್ತದೆ. ಲವ್​, ಡೇಟಿಂಗ್​, ಮದುವೆ, ಮಕ್ಕಳು, ವಿಚ್ಛೇದನ ಮುಂತಾದ ವಿಚಾರದಲ್ಲಿ ಅವರು ಜನಸಾಮಾನ್ಯರಿಗಿಂತ ಡಿಫರೆಂಟ್​ ಆದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ . ಇತ್ತೀಚೆಗೆ ಅವರು ಒಂದು ಬ್ರೇಕಿಂಗ್​ ನ್ಯೂಸ್​ ನೀಡಿದ್ದರು. ತಾವು ಪ್ರೆಗ್ನೆಂಟ್​ ಎಂಬುದನ್ನು ಅವರು ಘೋಷಿಸಿದ್ದರು. ಅಚ್ಚರಿ ಎಂದರೆ ಇಲಿಯಾನಾ ಡಿಕ್ರೂಜ್​ ಅವರಿಗೆ ಇನ್ನೂ ಮದುವೆ ಆಗಿಲ್ಲ. 

ಅಲ್ಲದೇ, ಅವರು ಮಗು ಪಡೆಯುತ್ತಿರುವುದು ಯಾರಿಂದ ಎಂಬ ವಿಷಯ ಕೂಡ ಬಹಿರಂಗ ಆಗಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೂ ಮುನ್ನವೇ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಬೇಬಿ ಬಂಪ್​ ಫೋಟೋ  ವೈರಲ್​ ಆಗಿದೆ. ಬಂಪ್​ ಅಲರ್ಟ್​ ಎಂಬ ಕ್ಯಾಪ್ಷನ್​ ಜೊತೆಗೆ ಇಲಿಯಾನಾ ಡಿಕ್ರೂಜ್​ ಅವರು ಈ ಫೋಟೋ ಹಂಚಿಕೊಂಡಿದ್ದಾರೆ. ಸಾವಿರಾರು ಜನರು ಕಮೆಂಟ್​ ಮಾಡಿದ್ದಾರೆ. ಎಲ್ಲಿಯತನಕ ಈ ವಿಚಾರ ಮುಚ್ಚಿಡುತ್ತೀರಿ ಇಲಿಯಾನಾ? ಈಗ ನೀವು ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಲು ಸೂಕ್ತ ಸಮಯ ಬಂದಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. 

ಇಲಿಯಾನಾ ಡಿಕ್ರೂಜ್​ ಅವರು ಏಪ್ರಿಲ್​ 14ರಂದು ತಾವು ಪ್ರೆಗ್ನೆಂಟ್​ ಎಂಬ ವಿಷಯ ಬಹಿರಂಗಪಡಿಸಿದ್ದರು. ಕಮಿಂಗ್​ ಸೂನ್​.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್​ ಡಾರ್ಲಿಂಗ್​’ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು. ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮ ಎಂಬ ಡಾಲರ್​ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಜ್​ ಕೂಡ ಕಮೆಂಟ್​ ಮಾಡಿದ್ದರು. ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ ಎಂದು ಅವರು ಬರೆದುಕೊಂಡಿದ್ದರು. 

2006ರಿಂದಲೂ ಇಲಿಯಾನಾ ಡಿಕ್ರೂಜ್​ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸೂಪರ್​ ಹಿಟ್​ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಏಪ್ರಿಲ್​ 24ರಂದು ಅವರ ಹೊಸ ಸಾಂಗ್​ ಬಿಡುಗಡೆ ಆಗಿದೆ.ಇಲಿಯಾನಾ ಡಿಕ್ರೂಜ್​ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್​ ಆ್ಯಂಡ್ರ್ಯೂ ನೀಬೋನ್​ ಜೊತೆ ಡೇಟಿಂಗ್​ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು ಎಂದು ವರದಿ ಆಯಿತು. 

ಇತ್ತೀಚೆಗೆ ಇಲಿಯಾನಾ ಡಿಕ್ರೂಜ್​ ಅವರು ನಟಿ ಕತ್ರಿನಾ ಕೈಫ್​ ಸಹೋದರ ಸೆಬ್ಬಾಸ್ಟಿಯನ್​ ಲೊರಾನ್​ ಮಿಶಾಲ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಇತ್ತೀಚಿಗೆ ಹಣ ಪಡೆದು ಇಲಿಯಾನ ಮೋಸ ಮಾಡಿದ್ದಾರೆ ಅವರನ್ನು ಬ್ಯಾನ್ ಮಾಡಲಾಗುವುದು ಎಂಬ ಸುದ್ದಿ ಕೂಡ ಹಬ್ಬಿತ್ತು. ಇದೀಗ ಅಪ್ಪ ಯಾರು ಎಂದು ಅದೆಷ್ಟು ದಿನ ಮುಚ್ಚಿಡ್ತೀರಿ ಎಂಬ ಪ್ರಶ್ನೆ ಮಾಡುತ್ತಿದ್ದಾರೆ ನೆಟ್ಟಿಗರು.