ಗುಟ್ಟಾಗಿ 2ನೇ ಮದುವೆ ಆದ ನಟಿ ಜ್ಯೋತಿ ರೈ? ಸೋಷಿಯಲ್ ಮೀಡಿಯಾದಲ್ಲಿ ಹೆಸರು ಬದಲಾವಣೆ

 | 
ಕಿ

 ವೈಯಕ್ತಿಕ ವಿಚಾರಗಳಿಂದ ಇತ್ತೀಚೆಗೆ ಕಿರುತೆರೆ ನಟಿ ಜ್ಯೋತಿ ರೈ ಬಹಳ ಸುದ್ದಿಯಲ್ಲಿದ್ದಾರೆ. ಈಗಾಗಲೇ ಒಂದು ಮದುವೆ ಆಗಿರುವ ಜ್ಯೋತಿ ಸದ್ಯ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಸಹಜೀವನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಪದೇ ಪದೆ ಈ ವಿಚಾರವನ್ನು ಪರೋಕ್ಷವಾಗಿ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸುಕು ಪುರ್ವಜ್ ಜೊತೆಗಿನ ಫೋಟೊಗಳನ್ನು ಇತ್ತೀಚೆಗೆ ಹೆಚ್ಚು ಹೆಚ್ಚು ಪೋಸ್ಟ್ ಮಾಡುತ್ತಿದ್ದಾರೆ. ತಮ್ಮ ಎಲ್ಲಾ ಪೋಸ್ಟ್‌ಗಳಿಗೂ ಜ್ಯೋತಿಪೂರ್ವಜ್ ಎನ್ನುವ ಹ್ಯಾಷ್‌ಟ್ಯಾಗ್ ಹಾಕುತ್ತಿದ್ದಾರೆ. ಇದೀಗ ಜ್ಯೋತಿ ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದಾರೆ. ಇನ್ನು ಮುಂದೆ ನನ್ನನ್ನು ನೀವು ಟ್ವಿಟ್ಟರ್‌ನಲ್ಲೂ ಫಾಲೋ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ ಪುತ್ತೂರಿನಲ್ಲಿ ಓದಿ ಬೆಳೆದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಆಕೆಗೆ ಒಬ್ಬ ಮಗ ಕೂಡ ಇದ್ದಾನೆ. ಮೊದಲು ಕನ್ನಡ ಕಿರುತೆರೆಯಲ್ಲಿ ನಟಿಸಲು ಆರಂಭಿಸಿದ ಜ್ಯೋತಿ ನಂತರ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸದ್ಯ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ.

ಸದ್ಯ ಟ್ವಿಟರ್‌ನಲ್ಲೂ ಜ್ಯೋತಿ ರೈ ತಮ್ಮ ಹೆಸರಿನ ಜೊತೆ ಪ್ರಿಯಕರನ ಹೆಸರು ಸೇರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಗುಟ್ಟಾಗಿ ಮದುವೆ ಆಗಿದ್ದಾರಾ? ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಅಥವಾ ಶೀಘ್ರದಲ್ಲೇ ಮದುವೆ ಆಗುವ ಲೆಕ್ಕಾಚಾರದಲ್ಲಿದ್ದಾರಾ? ಎನ್ನುವ ವದಂತಿ ಹರಿದಾಡುತ್ತಿದೆ. ಒಟ್ನಲ್ಲಿ ಪರೋಕ್ಷವಾಗಿ ತಾವಿಬ್ಬರು ರಿಲೇಷನ್‌ಶಿಪ್‌ನಲ್ಲಿ ಇರುವ ಸಂಗತಿಯನ್ನು ಆಗಿಂದಾಗ್ಗೆ ಜ್ಯೋತಿ ರೈ ಎಲ್ಲರಿಗೂ ತಿಳಿಸುವ ಪ್ರಯತ್ನವನ್ನಂತು ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಸುಕು ಪೂರ್ವಜ್ ನಿರ್ದೇಶನದ 'ಮಾಸ್ಟರ್‌ ಪೀಸ್' ಚಿತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ.

ಪದ್ಮನಾಭ್ ಎಂಬುವವರನ್ನು ಬಹಳ ಹಿಂದೆಯೇ ಜ್ಯೋತಿ ರೈ ಮದುವೆ ಆಗಿದ್ದರು. ಆದರೆ ಏನಾಯ್ತೋ ಏನೋ ಈಗ ನಿರ್ದೇಶಕ ಸುಕು ಪೂರ್ವಜ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸದ್ಯ ಟ್ವಿಟ್ಟರ್‌ನಲ್ಲಿ ಹೆಸರು ಬದಲಿಸಿಕೊಂಡಿರುವುದು ನೋಡುತ್ತಿದ್ದರೆ ಮೊದಲ ಪತಿಯಿಂದ ಜ್ಯೋತಿ ರೈ ಡಿವೋರ್ಸ್ ಪಡೆದಿದ್ದಾರೆ ಎನ್ನುವ ವದಂತಿ ಶುರುವಾಗಿದೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.