50ನೇ ವಯಸ್ಸಿನಲ್ಲಿ ಮದುವೆ ಆಗೋಕೆ ಗಂಡು‌‌ ಹುಡುಕುತ್ತಿರುವ ನಟಿ

 | 
Hjj
ಚಿತ್ರರಂಗ ಬಣ್ಣ ಬಣ್ಣದ ದುನಿಯಾ ಇಲ್ಲಿ ಎಲ್ಲವೂ ಕಂಡಷ್ಟು ಉತ್ತಮವಲ್ಲ. ಹೌದು ಕನ್ನಡದ ಈ ಸ್ಟಾರ್‌ ನಟಿ ಮೂರು ವಿವಾಹಿತ ನಟರೊಂದಿಗೆ ಡೇಟಿಂಗ್‌ ಮಾಡಿದ್ದಾರೆಂಬ ವದಂತಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಲಿವುಡ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್‌ವರೆಗೆ ಹಲವು ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. 
ನಟಿ ನಗ್ಮಾ ಸೌತ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ನಗ್ಮಾ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದವರು.ಬಾಲಿವುಡ್‌ ಸಿನಿಮಾಗಳ ನಂತರ ದಕ್ಷಿಣಕ್ಕೆ ಬಂದು ಸೌತ್‌ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದರು. ನಂತರ ಭೋಜ್‌ಪುರಿ ಚಿತ್ರಗಳಲ್ಲಿ ಸಹ ನಟಿಸಿದರು. ನಟ ಶಿವರಾಜ್ ಕುಮಾರ್ ಜೊತೆ ಕುರುಬನ ರಾಣಿ ಚಿತ್ರದಲ್ಲಿ ನಟಿಸಿ ಕುರುಬನ ರಾಣಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ನಗ್ಮಾ ಬಾಲಿವುಡ್, ಸೌತ್‌ ಸಿನಿರಂಗ ಮತ್ತು ಭೋಜ್‌ಪುರಿ ಸೇರಿದಂತೆ 81 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಗೆದ್ದರು. ನಗ್ಮಾ ಸಿನಿಮಾಗಳಿಗೆ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲಿ ಸದಾ ಸುದ್ದಿಯಲ್ಲಿದ್ದರು. ನಗ್ಮಾ 1974 ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಈಗ ಅವರಿಗೆ 50 ವರ್ಷ ವಯಸ್ಸು. ನಗ್ಮಾ ಈಗಲೂ ಮದುವೆಯಾಗಿಲ್ಲ. 
ನಟಿ ಮಾತ್ರವಲ್ಲ ರಾಜಕಾರಣಿ ಸಹ ಆಗಿರುವ ನಟಿ ನಗ್ಮಾ ಒಂಟಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಅವರ ಮದುವೆ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ನಟಿ ನಗ್ಮಾ ಯಾವಾಗ ಮದುವೆ ಆಗಲಿದ್ದಾರೆ ಮತ್ತು ಯಾರನ್ನು ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಯಾವ ರೀತಿಯೂ ಸ್ಪಷ್ಟನೆಯೂ ಇಲ್ಲ. ಇದು ಕೇವಲ ವದಂತಿಯಾಗಿದ್ದು, ಈ ಬಗ್ಗೆ ಹಲವು ಸುದ್ದಿಗಳು ಹರಡುತ್ತಿವೆ.