ನಟ ಧ್ರುವ ಸಜಾ೯ ಗೆ ಗಂಡು ಮಗ ಆಗಿದ್ದಕ್ಕೆ ನಟಿ ಮೇಘನಾ ರಾಜ್ ಎಂತಹ ಮಾತಾಡಿದ್ದಾರೆ ಗೊತ್ತಾ

 | 
Vc

ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಮಗ ಜನಿಸಿದ ಖುಷಿಯಲ್ಲಿದ್ದಾರೆ. ಅವರ ಪತ್ನಿ ಪ್ರೇರಣಾ ಶಂಕರ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಧ್ರುವ ಸರ್ಜಾ, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಗಣೇಶ ಹಬ್ಬದ ದಿನವೇ ಧ್ರುವ ಸರ್ಜಾ ಕುಟುಂಬಕ್ಕೆ ಗಂಡು ಮಗುವಿನ ಆಗಮನವಾಗಿದೆ.

ನಾನು ಮಗುಗಿಂತ ಮೊದಲು ಮಗುವಿನ ತಾಯಿಯನ್ನು ನೋಡುತ್ತಿದ್ದೆ. ತಾಯಿ ಆರೋಗ್ಯವಾಗಿದ್ದಾಳಾ ಅಂತ ನೋಡುತ್ತಿದ್ದೆ. ಡಾಕ್ಟರ್ ನನಗೆ ಮಗು ನೋಡಿ ಅಂತ ಬೈದಮೇಲೆ ಮಗು ನೋಡಿದೆ. ಮಗ ನನಗಿಂತ ಬೆಳ್ಳಗಿದ್ದಾನಲ್ಲಾ ಅಂತ ಅನಿಸ್ತು. ಮೊದಲು ಅರ್ಜುನ್ ಸರ್ಜಾಗೆ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸಿದೆ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಗಂಡು ಮಗು ಜನಿಸಿದೆ, ಖುಷಿಯಾಗಿದೆ. ಗಂಡು ಮಗು ಹುಟ್ಟಿದ್ದಕ್ಕೆ ಅಭಿಮಾನಿಗಳು ತಮ್ಮನ ಮಡಿಲು ಸೇರಿದ ಚಿರು ಅಂತೆಲ್ಲ ಪೋಸ್ಟ್ ಮಾಡುತ್ತಿರೋದರ ಬಗ್ಗೆ ಪ್ರತಿಕ್ರಿಯೆ ನೀಡಿದ ಧ್ರುವ ಅವರು ದೇವರ ದಯೆಯಿಂದ ಹಂಗೇನಾದ್ರೂ ಆಗಿದ್ರೆ ಇದಕ್ಕಿಂತ ದೊಡ್ಡದು ಏನಿಲ್ಲ. ಅದೇ ನನ್ನ ಪ್ರಪಂಚ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇನ್ನು ಈ ಕುರಿತಾಗಿ ಮಾತನಾಡಿರುವ ಮೇಘನಾ ರಾಜ್ ಸೀಮಂತ ಶಾಸ್ತ್ರದಲ್ಲಿ ಕೂಡ ಬರಲಾಗಲಿಲ್ಲ.

ಇದೀಗ ಮನೆಗೆ ಪುಟ್ಟ ಗಣೇಶನೇ ಬಂದಿದ್ದಾನೆ. ಮನೆಗೆ ಇನ್ನಷ್ಟು ಹರುಷ ನೀಡಲಿದ್ದಾನೆ ಎಂದು ಸಂತೋಷದಿಂದ ನುಡಿದರು. ಅಲ್ಲದೇ ರಾಯನ್ ಈ ಮಗುವನ್ನು ನೋಡಿ ಈಗಾಗಲೇ ಅನಂದದಲ್ಲಿ ತೇಲಾಡುತ್ತಿದ್ದಾನೆ ಮನೆಯಲ್ಲಿ ಮತ್ತೊಮ್ಮೆ ಸಂತಸ ತುಂಬಿದೆ. ನಮ್ಮ ಈ ಕುಟುಂಬಕ್ಕೆ ಇನ್ಯಾರ ದೃಷ್ಟಿಯೂ ಬೀಳದಿರಲಿ ಎಂದು ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.