ನಟಿ ರಕ್ಷಿತಾ ನಟ ದಶ೯ನ್ ರನ್ನ ಮದ್ವೆ ಆಗ್ಬೇಕಿತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ
ಸ್ಯಾಂಡಲ್ ವುಡ್ ನ ಸುಂಟರಗಾಳಿ ಜೋಡಿ ಎಂದೇ ಖ್ಯಾತಿ ಗಳಿಸಿದ ದರ್ಶನ್ ಮತ್ತು ರಕ್ಷಿತಾ ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಂದು ಕಾಲದ ಸೂಪರ್ ಹಿಟ್ ಜೋಡಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಒಂದೆಡೆ ಸ್ಟಾರ್ ವಾರ್, ಅಭಿಮಾನಿಗಳ ಕಿತ್ತಾಟ, ಪೈರಸಿ ಸಮಸ್ಯೆ ನಡುವೆ ಕ್ರೇಜಿ ಕ್ವೀನ್, ದರ್ಶನ್ ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಇವರಿಬ್ಬರೂ ಮದುವೆ ಆಗ್ತಾರೆ ಎನ್ನೋ ಸುದ್ದಿ ಎಲ್ಲೆಡೆ ಹರಡಿತ್ತು. ಅದ್ರೆ ಅದ್ಯಾರ ಕಣ್ಣು ಬಿತ್ತೋ ಇವರಿಬ್ಬರೂ ದೂರ ಅದರು ಸ್ನೇಹಿತರಾಗಿಯೇ ಇದ್ದಾರೆ.ಕಲಾಸಿಪಾಳ್ಯ, ಅಯ್ಯ, ಮಂಡ್ಯ ಮತ್ತು ಸುಂಟರಗಾಳಿ ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ಈ ಜೋಡಿಗೆ ಕನ್ನಡ ಚಿತ್ರರಸಿಕರು ಫಿದಾ ಆಗಿದ್ದರು. ದಶಕದ ಹಿಂದೆ ಅಭಿಮಾನಿಗಳ ನಿದ್ದೆ ಗೆಡಿಸಿದ್ದ ರಕ್ಷಿತಾ ಮತ್ತು ದರ್ಶನ್ ಸುಂಟರಗಾಳಿ ನಂತರ ಮತ್ತೆ ಕಾಣಿಸಿಕೊಂಡಿಲ್ಲ. ಆದ್ರೀಗ ವರ್ಷಗಳ ಬಳಿಕ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚಿಗೆ ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್ಚಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಎ ಫ್ರೆಂಡ್ ಫಾರ್ ಲೈಫ್ ಎಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ. ರಕ್ಷಿತಾ ದಿಢೀರನೆ ದರ್ಶನ್ ಜೊತೆ ಫೋಟೋ ಹಾಕಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಅಥವಾ ದರ್ಶನ್ ಸಿನಿಮಾ ನಿರ್ಮಾಣ ಮಾಡುತ್ತಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.ದರ್ಶನ್ ಮತ್ತು ರಕ್ಷಿತಾ ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್. ಸಿನಿಮಾ ಹೊರತು ಪಡಿಸಿ ಇಬ್ಬರ ನಡುವೆ ಉತ್ತಮವಾದ ಸ್ನೇಹ ಬಾಂಧವ್ಯವಿದೆ. ದರ್ಶನ್ ಕೆಲವೆ ಕೆಲವು ಸ್ನೇಹಿತರಲ್ಲಿ ರಕ್ಷಿತಾ ಕೂಡ ಒಬ್ಬರು. ದರ್ಶನ್ ಅವರನ್ನು ಏಕವಚನದಲ್ಲಿ ಮಾತನಾಡಿಸುವ ಸ್ನೇಹಿತೆ ರಕ್ಷಿತಾ. ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ರಕ್ಷಿತಾ ಹಲವು ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.