ಶೂಟಿಂಗ್ ಸೆಟ್ ನಿಂದ ಅಧ೯ಕ್ಕೆ ಹೊರನಡೆದ ನಟಿ ರಕ್ಷಿತಾ, ಇಂತ ಅವಮಾನ ಯಾರಿಗೂ ಬೇಡ
Sep 12, 2024, 19:05 IST
|
ಕನ್ನಡ ಚಿತ್ರರಂಗದಲ್ಲಿ ಬೋಲ್ಡ್ ನಟಿ ಆಂಡ್ ಕ್ರೀಜಿ ಕ್ವೀನ್ ಎಂದೇ ಕರೆಸಿಕೊಳ್ಳುವ ರಕ್ಷಿತಾ ಸೈನ್ ಮಾಡಿದ ಪ್ರತಿಯೊಂದು ಪ್ರಾಜೆಕ್ಟ್ ಸೂಪರ್ ಹಿಟ್ ಆಂಡ್ ಬಾಕ್ಸ್ ಆಫೀಸ್ ಕಲೆಕ್ಷನ್. ಇದುವರೆಗೂ ಸಿನಿಮಾ ತಂಡದಿಂದ ಅಥವಾ ಶೂಟಿಂಗ್ ಸೆಟ್‌ನಲ್ಲಿ ಎಂದೂ ಕಹಿ ಘಟನೆ ನಡೆದಿಲ್ಲ ಎಂದಿರುವ ರಕ್ಷಿತಾ ತಮ್ಮ ಜೀವನದ ಮರೆಯಲಾಗದ ಘಟನೆಯನ್ನು ರಿವೀಲ್ ಮಾಡಿದ್ದಾರೆ.
ಹೌದು ಕೆಲ ವರ್ಷಗಳ ಹಿಂದೆ ತಂದೆ ಕಳೆದು ಕೊಂಡ ಮೂರೇ ದಿನಕ್ಕೆ ಶೂಟಿಂಗ್ ಸೆಟ್‌ಗೆ ಕಾಲಿಟ್ಟಾಗ ಖ್ಯಾತ ನಿರ್ದೇಶಕರು ಮಾಡಿದ ಅವಮಾನವನ್ನು ಇನ್ನೂ ಮರೆತಿಲ್ಲ.ಕಳೆದ 20 ವರ್ಷಗಳಿಂದ ರಾಕೇಶ್ ನನ್ನ ಅಸಿಸ್ಟೆಂಟ್ ಆಗಿದ್ದಾರೆ.ಅಂದಿನಿಂದ ನನ್ನ ಜರ್ನಿಯನ್ನು ನೋಡಿಕೊಂಡು ಬಂದಿದ್ದಾರೆ. 2004ರಲ್ಲಿ ನನ್ನ ತಂದೆ ಆರೋಗ್ಯ ಗಂಭೀರವಾಗಿತ್ತು ತುಂಬಾ ಬ್ಲೀಡಿಂಗ್ ಆಗುತ್ತಿದ್ದ ಕಾರಣ ಸ್ನೇಹಿತರು ಪ್ಲೇಟ್ಲೆಟ್ ಕೊಡುತ್ತಿದ್ದರು.
ಆಗ ನನ್ನ ಕೈಯಲ್ಲಿ ದೊಡ್ಡ ಸಿನಿಮಾಗಳ ಪ್ರಾಜೆಕ್ಟ್ ಇತ್ತು, ಈಗಲೂ ನೆನಪಿದೆ ಚಿತ್ರೀಕರಣ ಮುಗಿಸಿಕೊಂಡು ಅದೇ ಮೇಕಪ್‌ನಲ್ಲಿ ನನ್ನ ತಂದೆಯನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೆ. ಕಷ್ಟ ಪಟ್ಟು ಉಸಿರಾಡುತ್ತಿರುವುದು ನನಗೆ ಐಸಿಯುಯಿಂದ ಹೊರಗೆ ಕೇಳಿಸುತ್ತಿತ್ತು. ಅವರು ಅಗಲಿದ ದಿನ ಅವರ ಮುಖವನ್ನು ಗಮನಿಸುತ್ತಿದ್ದೆ ಮೂಗಿನಿಂದ ರಕ್ತ ಬರುತ್ತಿತ್ತು.ಯಾರಾದರೂ ಟಿಶು ಪೇಪರ್ ಕೊಡಿ ಎಂದು ಒರೆಸುತ್ತಿದ್ದೆ. ಆಗ ಅರ್ಥವಾಗಿತ್ತು ಇದು ಜೀವನ ಅಂದ್ರೆ ಏನು ಎಂದು.
ಏನೇ ಸ್ಟಾರ್ ಸಾಧನೆ ಮಾಡಿದರೂ ಸಾಯುವಾಗ ಏನೂ ಎತ್ತಿಕೊಂಡು ಹೋಗಲ್ಲ. ತಂದೆ ಅಗಲಿದ ಮೂರನೇ ದಿನಕ್ಕೆ ಹಾಲು ತುಪ್ಪ ಹಾಕಿ ಶೂಟಿಂಗ್ ಮಾಡಲು ಹೋಗಿದ್ದೆ ಆಗ ಅಲ್ಲಿದ್ದ ಡೈರೆಕ್ಟ್ ಒಬ್ಬರು ಏನು ಅವಳು ಅಪ್ಪ ಸತ್ತೋದರೆ ನಾವು ಶೂಟಿಂಗ್ ನಿಲ್ಲಿಸಬೇಕಾ? ಪ್ರಡ್ಯೂಸರ್ ದುಡ್ಡು ಹೋಗುತ್ತಿಲ್ವಾ? ಎಂದು ಹೇಳಿದರು. ಅದೇ ಮೊದಲು ನಾನು ಶೂಟಿಂಗ್ ಸೆಟ್‌ನಿಂದ ಹೊರ ನಡೆದಿದ್ದು, ನಿರ್ಮಾಪಕರಿಗೆ ತಕ್ಷಣವೇ ಕರೆ ಮಾಡಿ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದೆ ಎಂದು ರ್ಯಾಪಿಡ್ ರಶ್ಮಿಕಾ ಯೂಟ್ಯೂಬ್ ಚಾನೆಲ್‌ನಲ್ಲಿ ರಕ್ಷಿತಾ ಪ್ರೇಮ್ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.