ನಟಿ ರಶ್ಮಿಕಾ ಮಂದಣ್ಣ ದಾಖಲೆ ಸಂಭಾವನೆ, ಮೌನವಾಗಿ ಉಳಿದ ರಕ್ಷಿತ್ ಶೆಟ್ಟಿ

 | 
ಲಿ

ನಟಿ ರಶ್ಮಿಕಾ ಮಂದಣ್ಣ ಇಂದು ಇಡೀ ಭಾರತ ಚಿತ್ರರಂಗವೇ ಮೆಚ್ಚುವಂತಹ ನಾಯಕ ನಟಿಯಾಗಿದ್ದು ಕೇವಲ ಜನಪ್ರಿಯತೆ ವಿಚಾರದಲ್ಲಿ ಮಾತ್ರವಲ್ಲದ ಸಂಭಾವನೆ ವಿಚಾರದಲ್ಲಿ ಕೂಡ ಬೇರೆಲ್ಲ ನಟಿಯರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವ ನಟಿಯಾಗಿದ್ದಾರೆ. ಇನ್ನು ಅವರಿಗೆ ವಯಸ್ಸು 26 ಅಷ್ಟೇ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಹೆಮ್ಮೆ ಪಡಬೇಕಾದದ್ದು.

ಯಾಕೆಂದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಕೂಡ ಕನ್ನಡ ಸಿನಿಮಾ ರಂಗದಿಂದ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿ ಇಂದು ತಮಿಳು ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಕೂಡ ಅತ್ಯಂತ ಬಹು ಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರೂ ಮೆಚ್ಚ ಬೇಕಾಗಿರುವ ವಿಚಾರ. ಇನ್ನು ನಿಮಗೆಲ್ಲರಿಗೂ ನೆನಪಿರಬಹುದು ನಟಿ ರಶ್ಮಿಕಾ ಮಂದಣ್ಣ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹಾಗೂ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಂತಹ ಕಿರಿಕ್ ಪಾರ್ಟಿ ಸಿನಿಮಾದ ಮೂಲಕವೇ ಸಿನಿಮಾ ಜಗತ್ತಿಗೆ ಕಾಲೇಜ್ ದಿನಗಳಲ್ಲಿ ಪಾದರ್ಪಣೆ ಮಾಡಿದ್ದರು. 

ಈ ಸಿನಿಮಾಗೆ ಅವರು ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಇದು ರಶ್ಮಿಕ ಮಂದಣ್ಣ ಅವರಿಗೆ ಮೊದಲ ಸಿನಿಮಾ ಆಗಿದ್ದ ಕಾರಣದಿಂದಾಗಿ ಹಾಗೂ ಅವರ ಪಾತ್ರ ಕೇವಲ ಮೊದಲ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಹಿನ್ನೆಲೆಯಲ್ಲಿ ರಶ್ಮಿಕ ಮಂದಣ್ಣಅವರಿಗೆ ಕಿರಿಕ್ ಪಾರ್ಟಿ ಸಿನಿಮಾ ಗಾಗಿ 5 ರಿಂದ 10 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿರಬಹುದು ಎಂಬುದಾಗಿ ಅಂದಾಜಿಸಬಹುದಾಗಿದೆ. 

ಅಂದು ಸಾನ್ವಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಇಂದು ಇಡೀ ಭಾರತೀಯ ಚಿತ್ರರಂಗವನ್ನೇ ಆಳುತ್ತಿದ್ದಾರೆ ಎನ್ನುವುದು ಕನ್ನಡಿಗರು ಕೂಡ ಹೆಮ್ಮೆಪಡುವ ಸಂಗತಿ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.