ದೇಹದ 'ಆ' ಭಾಗವನ್ನು ದೊಡ್ಡದು ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಸ್ಟಾರ್ ನಟಿ ಉಫಿ೯ ಜಾವೇದ್

 | 
Jh

      ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಾರೆ ಉರ್ಫಿ ಜಾವೇದ್. ಫ್ಯಾಷನ್ ಲೋಕದಲ್ಲಿ ಚಿತ್ರ-ವಿಚಿತ್ರ ಪ್ರಯೋಗಳನ್ನು ಮಾಡುವಲ್ಲಿ ಅವರು ಫೇಮಸ್. ಯಾವಾಗಲೂ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಅವರು ಸುಂದರವಾಗಿ ಕಾಣುತ್ತಾರೆ. ಆದರೆ ಈಗ ಅವರ ಮುಖ ವಿಕಾರವಾಗಿದೆ.

     ಉರ್ಫಿ ಜಾವೇದ್ ಅವರನ್ನು ಫಾಲೋ ಮಾಡುವ ಎಲ್ಲರಿಗೂ ಈಗಾಗಲೇ ವಿಷಯ ಏನೆಂಬುದು ತಿಳಿದಿದೆ. ಚೆನ್ನಾಗಿ ಕಾಣಬೇಕು ಎಂಬ ಆಸೆಯಿಂದ ಉರ್ಫಿ ಜಾವೇದ್ ಅವರು ತುಟಿಗಳಿಗೆ ಫಿಲ್ಲರ್ ಮಾಡಿಸಿಕೊಂಡಿದ್ದರು. ಆದರೆ ಫಿಲ್ಲರ್ ಮಾಡುವ ಪ್ರಕ್ರಿಯೆ ತಪ್ಪಾದ ಕಾರಣ ಅದನ್ನು ತೆಗೆಸುವುದು ಅನಿವಾರ್ಯ ಆಯಿತು. ಫಿಲ್ಲರ್ ತೆಗೆಸಿದ್ದರಿಂದ ಅವರ ತುಟಿಗಳು ಊದಿಕೊಂಡಿವೆ.
https://www.instagram.com/reel/DMaFmCht0fE/?igsh=cWRlaHUyZ2ZqMHky
     ಆರಂಭದಲ್ಲಿ ತುಟಿಗಳು ಮಾತ್ರ ಊದಿಕೊಂಡಿದ್ದವು. ಅದರ ವಿಡಿಯೋವನ್ನು ಉರ್ಫಿ ಜಾವೇದ್ ಅವರು ಹಂಚಿಕೊಂಡಿದ್ದರು. ಆದರೆ ನಂತರ ಅವರ ಸಂಪೂರ್ಣ ಮುಖ ದಪ್ಪ ಆಗಿದೆ. ಇದು ಉರ್ಫಿ ಜಾವೇದ್ ಹೌದೋ ಅಲ್ಲವೋ ಎಂದು ಅನುಮಾನ ಮೂಡುವಷ್ಟು ದಪ್ಪ ಆಗಿದೆ. 
     ತುಟಿ ಮತ್ತು ಬಹುಪಾಲು ಮುಖ ಊದಿಕೊಂಡಿದ್ದರಿಂದ ಉರ್ಫಿ ಜಾವೇದ್ ಅವರಿಗೆ ಮಾತನಾಡಲು ಕೂಡ ಕಷ್ಟ ಆಗುತ್ತಿದೆ. ಆದರೆ ಅವರು ಹೆಚ್ಚು ಚಿಂತೆ ಮಾಡುತ್ತಿಲ್ಲ. ತಮಗೆ ಬಂದಿರುವ ಈ ಪರಿಸ್ಥಿತಿಯಲ್ಲಿ ಕೂಡ ಅವರು ತಮಾಷೆ ಮಾಡುತ್ತಿದ್ದಾರೆ. ಬೇರೆಯವರಾಗಿದ್ದರೆ ಇಂಥ ವಿಡಿಯೋವನ್ನು ಪೋಸ್ಟ್ ಮಾಡುತ್ತಿರಲಿಲ್ಲ. ಆದಷ್ಟು ಬೇಗ ತಾನು ಮೊದಲಿನಂತೆ ಆಗುತ್ತೇನೆ ಎಂಬ ಭರವಸೆ ಅವರಿಗೆ ಇದೆ.