ಬಹುದಿನಗಳ ಬಳಿಕ ಸತ್ಯ ಹೇಳಿದ ಡಾಕ್ಟರ್, ದಿಢೀರ್ ಸಾ.ವಿಗೆ ಕಾರಣ ಏನು ಗೊತ್ತಾ

 | 
ಕಿ

ಇತ್ತೀಚೆಗಿನ ದಿನಗಳಲ್ಲಿ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹಾಗೂ ಪುನೀತ್‌ ರಾಜಕುಮಾರ್‌ ಸೇರಿದಂತೆ ಕೆಲವು ಪ್ರಸಿದ್ಧರ ಹಠಾತ್ತಾದ, ಅಕಾಲಿಕ ಸಾವು ಹೃದಯ ಸ್ತಂಭನದ ಬಗ್ಗೆ ಎಲ್ಲರೂ ಕಳವಳ ಹೊಂದುವಂತೆ ಮಾಡಿದೆ. ಎಲ್ಲರನ್ನೂ ಕಾಡುತ್ತಿರುವ ಒಂದು ಪ್ರಶ್ನೆ ಎಂದರೆ, ಅಷ್ಟು ಆರೋಗ್ಯವಂತರಾಗಿದ್ದ, ಸಣ್ಣ ವಯಸ್ಸಿನವರು ಯಾಕೆ ಹಾಗೆ ಹಠಾತ್‌ ಸಾವನ್ನಪ್ಪುತ್ತಾರೆ? ಅದು ಹೃದಯಾಘಾತವೇ ಅಥವಾ ಹಠಾತ್‌ ಹೃದಯ ಸ್ತಂಭನವೇ? ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಡಾಕ್ಟರ್ ಅಂಜನಪ್ಪ ಅವರು ಮಾಡಿದ್ದಾರೆ.

ಹೃದಯಾಘಾತಗಳು ಸರ್ವೇಸಾಮಾನ್ಯವಾಗಿವೆ. ಹೃದಯಾಘಾತವನ್ನು ಅನುಭವಿಸಿಯೂ ಬದುಕುಳಿದವರನ್ನು ನೋಡಿ, ಕೇಳಿ ನಮಗೆ ಗೊತ್ತಿದೆ. ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಮೂರು ಪ್ರಧಾನ ಹೃದಯ ರಕ್ತನಾಳ ಹೃದಯಾಭಿಧಮನಿಗಳಲ್ಲಿ ಯಾವುದಾದರೂ ಒಂದರಲ್ಲಿ ಅಡೆತಡೆ ಉಂಟಾಗಿ, ಇದರಿಂದಾಗಿ ಹೃದಯದ ಸ್ನಾಯುಗಳಲ್ಲಿ ಸ್ವಲ್ಪ ಭಾಗಕ್ಕೆ ರಕ್ತ ಪೂರೈಕೆ ಸರಿಯಾಗಿ ಆಗದ್ದರಿಂದ ಹೃದಯಾಘಾತ ಸಂಭವಿಸುತ್ತದೆ. 

ರಕ್ತ ಪೂರೈಕೆ ಹಠಾತ್ತನೆ ಕುಸಿಯುವುದರಿಂದ ಹೃದಯ ಬಡಿತ ದುರ್ಬಲವಾಗುತ್ತದೆ. ಇದನ್ನು ಆ್ಯಂಜಿಯೊಪ್ಲಾಸ್ಟಿ, ಸ್ಟೆಂಟ್‌ ಅಳವಡಿಕೆ ಇತ್ಯಾದಿ ಚಿಕಿತ್ಸಾ ಕ್ರಮಗಳಿಂದ ಸರಿಪಡಿಸದೆ ಇದ್ದಲ್ಲಿ ಶಾಶ್ವತ ಹಾನಿ ಉಂಟಾಗಬಹುದು.
ಹೃದಯಾಘಾತಕ್ಕೆ ತುತ್ತಾಗುವ ಬಹುತೇಕ ಮಂದಿ ಚೇತರಿಸಿಕೊಳ್ಳುತ್ತಾರೆ ಮತ್ತು ವೈದ್ಯಕೀಯ ಚಿಕಿತ್ಸಾ ಕ್ರಮಗಳಲ್ಲಿ ಆಗಿರುವ ಪ್ರಗತಿ ಹಾಗೂ ಹೃದಯ ಚಿಕಿತ್ಸಾ ವಿಶೇಷ ಸೌಲಭ್ಯಗಳುಳ್ಳ ಆಸ್ಪತ್ರೆಗಳು ಸುಲಭ ಲಭ್ಯವಿರುವುದರಿಂದ ಹೃದಯಾಘಾತವನ್ನು ಅನುಭವಿಸಿದವರಲ್ಲಿ ಶೇ. 10ಕ್ಕಿಂತ ಕಡಿಮೆ ಮಂದಿ ಸಾವನ್ನಪ್ಪುತ್ತಾರೆ. 

ಹೃದಯಾಘಾತ ಉಂಟಾದ ಬಳಿಕ ಮೊದಲ ಒಂದು ತಾಸು “ಗೋಲ್ಡನ್‌ ಅವರ್‌’ ಎಂದು ಪರಿಗಣಿತವಾಗಿದೆ. ಏಕೆಂದರೆ ಹೃದಯಾಘಾತದಿಂದ ಮರಣಗಳು ಬಹುತೇಕ ಈ ಒಂದು ತಾಸಿನಲ್ಲೇ ಸಂಭವಿಸುತ್ತವೆ. ಹೃದಯದ ಒಂದು ಭಾಗಕ್ಕೆ ರಕ್ತ ಸರಬರಾಜು ಕುಸಿದಾಗ ಹೃದಯದ ಎಲೆಕ್ಟ್ರಿಕಲ್‌ ವ್ಯವಸ್ಥೆ ಅಸ್ಥಿರವಾಗುತ್ತದೆ, ಅಪಾಯಕಾರಿ ವೇಗದಲ್ಲಿ ಬಡಿದುಕೊಳ್ಳಲು ಆರಂಭಿಸುತ್ತದೆ, ಇದನ್ನು ವೆಂಟ್ರಿಕ್ಯುಲಾರ್‌ ಟ್ಯಾಕಿಕಾರ್ಡಿಯಾ ಅಥವಾ ಫೈಬ್ರಿಲೇಶನ್‌ ಎಂದು ಕರೆಯುತ್ತಾರೆ. 

ಇದು ಪ್ರಾಣಾಪಾಯಕಾರಿ ಸ್ಥಿತಿಯಾಗಿದ್ದು, ಹೃದಯವು ಹಠಾತ್ತನೆ ಸ್ತಂಭನಗೊಳ್ಳಲು ಅಥವಾ ತನ್ನ ಕಾರ್ಯಾಚರಣೆಯನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸಲು ಕಾರಣವಾಗುತ್ತದೆ. ಹಠಾತ್‌ ಹೃದಯ ಸ್ತಂಭನ ಅಥವಾ ಸಡನ್‌ ಕಾರ್ಡಿಯಾಕ್‌ ಅರೆಸ್ಟ್‌ ಎಂದು ಕರೆಯುವುದು ಇದನ್ನೇ. ಅದೃಷ್ಟವಶಾತ್‌ ಎಸ್‌ಸಿಎಯು ಹೃದಯಾಘಾತವಾದ ಎಲ್ಲ ಸಂದರ್ಭಗಳಲ್ಲಿಯೂ ಉಂಟಾಗುವುದಿಲ್ಲ; ಶೇ. 2ರಿಂದ 5 ಪ್ರಕರಣಗಳಲ್ಲಿ ಮಾತ್ರ ಉದ್ಭವಿಸುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.