ರವಿಚಂದ್ರನ್ ಜೊತೆ ನಟಿಸಿದ ಬಳಿಕ ಸಿಕ್ಕಪಟ್ಟೆ ದಪ್ಪವಾದ ನ.ಟಿ, ನಿಜ ವಿಚಾರ ಏನು ಗೊ.ತ್ತಾ

 | 
Y

ಸಿನಿಮಾ ನಟಿಯರಿಗೆ ವಯಸ್ಸೇ ಆಗಲ್ವಲ್ಲ ಗುರೂ.. ಈಗಲೂ ಅದೇ ಮೈಮಾಟ, ಅದೇ ಅಂದ ಚೆಂದ. ಇವರ ಬ್ಯೂಟಿ ಸೀಕ್ರೇಟ್‌ ಏನಿರಬಹುದು? ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ನಟಿಯರನ್ನು ಕಂಡೊಡನೆ ಕೇಳಿ ಬರುವ ಮೊದಲ ಮಾತಿದೆ. ಏಕೆಂದರೆ, ಸಾರ್ವಜನಿಕ ವಲಯದಲ್ಲಿ ಹೆಚ್ಚು ಕಾಣಿಸುವ ಸೆಲೆಬ್ರಿಟಿಗಳು ತಮ್ಮ ಬ್ಯೂಟಿ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ತೂಕದಲ್ಲಿ ಚೂರು ಏರುಪೇರಾದರೂ ಡಯಟ್, ಯೋಗದ ಮೊರೆ ಹೋಗಿ ಹಳೇ ಲಯಕ್ಕೆ ಬರುತ್ತಾರೆ.

 ಆದರೆ, ಇದೀಗ ಒಂದು ಕಾಲದ ಬಳುಕೋ ಬಳ್ಳಿಯಂತಿದ್ದ ನಟಿ ನಗ್ಮಾ ಅವರ ಹೊಸ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ನಗ್ಮಾನಾ ಎಂಬ ಪ್ರಶ್ನೆ ಮೂಡಿದೆ.ಭಾರತೀಯ ಚಿತ್ರರಂಗದಲ್ಲಿ 90ರ ಕಾಲದಲ್ಲಿ ಎಲ್ಲರ ಗಮನ ಸೆಳೆದಿದ್ದ ನಟಿ ನಗ್ಮಾ. ಬಾಲಿವುಡ್‌, ಕಾಲಿವುಡ್, ಸ್ಯಾಂಡಲ್‌ವುಡ್‌, ಟಾಲಿವುಡ್‌ ಎಲ್ಲ ಕಡೆಗಳಲ್ಲೂ ನಟನೆಯ ಮೂಲಕವೇ ಹೆಸರು ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದ ಒಂದಷ್ಟು ಅಂತರ ಕಾಯ್ದುಕೊಂಡಿದ್ದಾರೆ.

 2008ರಲ್ಲಿಯೇ ಸಿನಿಮಾ ಸಾಕಿನ್ನು ಎಂದು ಅದರಿಂದ ಹೊರಬಂದ ನಗ್ಮಾ, ರಾಜಕೀಯದಲ್ಲೂ ಸಕ್ರಿಯರಾದರು. ಅದಾದ ಮೇಲೆ ಮತ್ತೆ ಸಿನಿಮಾಕ್ಕೆ ಬರುವ ಆಸೆ ಇದ್ದರೂ ಅದಕ್ಕೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ತೂಕ ಹೆಚ್ಚಾದಂತೆ ಚಿತ್ರರಂಗದಿಂದಲೂ ತುಂಬ ದೂರ ಉಳಿದರು. ಇದೀಗ ಇದೇ ನಟಿಯ ಲೇಟೆಸ್ಟ್‌ ವಿಡಿಯೋ ವೈರಲ್‌ ಆಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ರವಿಮಾಮ, ಕುರುಬನ ರಾಣಿ. ಹೃದಯವಂತ ಸಿನಿಮಾಗಳಲ್ಲಿ ನಟಿಸಿರುವ ನಗ್ಮಾ, ದಶಕಗಳು ಕಳೆದರೂ ಕನ್ನಡದ ಸಿನಿಮಾ ಪ್ರಿಯರಿಗೆ ಪರಿಚಿತ ಮುಖ. ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್‌ ಜತೆಗೆ 1990ರಲ್ಲಿ ಭಾಗಿ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದರು. ಟಾಲಿವುಡ್‌ನಲ್ಲೂ ಚಿರಂಜೀವಿ, ನಾಗಾರ್ಜುನ್‌, ಬಾಲಣ್ಣ ಸೇರಿ ಬಹುತೇಕ ಸ್ಟಾರ್‌ ನಟನರ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಭೋಜಪುರಿ, ಮರಾಠಿ, ಮಲಯಾಳಂ ಸಿನಿಮಾಗಳನ್ನೂ ನಟಿಸಿದ್ದಾರೆ.

ಕಾರ್‌ನಲ್ಲಿ ಕುಳಿತ ನಗ್ನಾರನ್ನು ಮುಂಬೈನ ಪಾಪರಾಜಿಗಳು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಹಸಿರು ಬಣ್ಣದ ಮೇಲುಡುಪು, ಬೂದು ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಅತಿಯಾದ ತೂಕದಿಂದ ದೇಹ ಊದಿಕೊಂಡಿದೆ. ಮುಖವೂ ದಪ್ಪಗಾಗಿದೆ. ಕಣ್ಣಿನ ಸುತ್ತಲೂ ಡಾರ್ಕ್‌ ಸರ್ಕಲ್‌ಗಳು ಮೂಡಿವೆ. ಒಟ್ಟಾರೆ, ಈ ವಿಡಿಯೋ ನೋಡಿದವರು ನಗ್ಮಾಗೆ ಏನಾಗಿದೆ? ಅಷ್ಟಕ್ಕೂ ಇವರು ಆರೋಗ್ಯವಾಗಿದ್ದಾರಾ? ಗುರುತೇ ಸಿಗುತ್ತಿಲ್ಲ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಪ್ರಶ್ನೆ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.