ಬಿಗ್ ಬಾಸ್ ಕಾರ್ತಿಕ್ ವಿನ್ನರ್ ಆದ ಬಳಿಕ ಸ್ವಂತ ತಾಯಿ ಕೈಮುಗಿದು ಹೇಳಿದ್ದೇನು ಗೊ.ತ್ತಾ, ಬೆ ಚ್ಚಿಬಿದ್ದ ಕನ್ನಡಿಗರು

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಸದ್ಯ ಟ್ರೋಪಿ ಹಿಡಿದು ಸುತ್ತಾಡುತ್ತಿದ್ದಾರೆ. ತಮಗೆ ವೋಟ್ ಮಾಡಿ ಗೆಲ್ಲಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಇತ್ತೀಚಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಕಾರ್ತಿಕ್, ಅದಾದ ಬಳಿಕ ಹುಟ್ಟೂರು ಚಾಮರಾಜನಗರಕ್ಕೂ ಭೇಟಿ ನೀಡಿದ್ದಾರೆ. ಕಾರ್ತಿಕ್ ಆಗಮಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಸ್ನೇಹಿತರು ಸ್ವಾಗತಿಸಿದ್ದಾರೆ. ವಿಶೇಷ ಕಾರ್ಯಕ್ರಮ ಮಾಡಿದ್ದಾರೆ. ಇದೇ ವೇಳೆ ಅಜ್ಜಿ ಮನೆಯಲ್ಲಿದ್ದ ತಂಗಿಯ ಬಳಿಯೂ ಹೋಗಿ ಪುಟಾಣಿ ಅಳಿಯನನ್ನು ಕಣ್ತುಂಬಿಕೊಂಡಿದ್ದಾರೆ.
ನಟನಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದ ಕಾರ್ತಿಕ್ ಮಹೇಶ್ ಬಿಗ್ ಬಾಸ್ ಮನೆಯಿಂದ ಟ್ರೋಫಿ ಸಮೇತ ಮರಳಿದ್ದಾರೆ. ಇಂದು ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದ ಕಾರ್ತಿಕ್ ಮಹೇಶ್ ಪುನೀತ್ ರಾಜ್‌ಕುಮಾರ್ ಸಮಾಧಿ ಮುಂದೆ ಬಿಗ್‌ಬಾಸ್ ಟ್ರೋಫಿ ಇಟ್ಟು ನಮಸ್ಕರಿಸಿದ್ದಾರೆ. ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭೂಮಿ ಮುಟ್ಟಿ ನಮಸ್ಕರಿಸಿಕೊಂಡ ಕಾರ್ತಿಕ್ ಬಳಿಕ ಅಪ್ಪು ಅವರ ಭಾವಚಿತ್ರಕ್ಕೆ ನಮಿಸಿದ್ದಾರೆ. ಕಾರ್ತಿಕ್, ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ಈ ಹಿಂದೆ ಕೂಡ ಅಪ್ಪು ಅವರನ್ನು ಸ್ಮರಿಸಿಕೊಂಡಿದ್ದರು.
ಇನ್ನು ಅವರ ತಾಯಿ ಮೀನಾಕ್ಷಿ ಮಗನನ್ನು ಗೆಲ್ಲಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಅವನು ತುಂಬಾ ಒಳ್ಳೆಯವ ಕಷ್ಟ ಪಟ್ಟು ಬೆಳೆಯಬೇಕು ಎಂದುಕೊಂಡವ ಎಂದು ಆಭಿಮಾನಿಗಳಿಗೆ ಕೈ ಮುಗಿದು ಧನ್ಯವಾದ ಹೇಳಿದ್ದಾರೆ. ಅವನಿಗೆ ಹೊಸ ಹೊಸ ಸಿನಿಮಾಗಳನ್ನು ಮಾಡುವ ಕನಸಿದೆ ಹಾಗಾಗಿ ಈಗಲೇ ಮದುವೆ ಆಗುವುದು ಅನುಮಾನ. ಮನೆ ಕಟ್ಟಿಸಿ ಮುಗಿದ ಮೇಲೆ ಮದುವೆ ಎಂದಿದ್ದಾನೆ ಎಂದರು.
ಬಿಗ್ ಬಾಸ್ ನಲ್ಲಿ ಏನೇ ನಡೆದಿದ್ದರೂ ಎಲ್ಲರ ಜೊತೆ ಫ್ರೆಂಡ್‌ಶಿಪ್ ಬೆಳೆಸಿಕೊಳ್ಳುತ್ತೇನೆ. ನನಗೆ ಸಾಕಷ್ಟು ಆಫರ್‌ಗಳು ಬಂದಿದೆ. ಕಥೆ ನೋಡಿ ಆಯ್ಕೆ ಮಾಡಬೇಕಾಗಿದೆ. ಜನರು ನನಗೆ ಹೆಚ್ಚು ಮತ ನೀಡಿ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರೆ. ನನಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ, ಮಾಡಿದವರು ಮಾಡಲಿ ನನ್ನ ಕೆಲಸ ಮಾಡುತ್ತೇನೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಎಲ್ಲರ ವ್ಯಕ್ತಿತ್ವವನ್ನು ಹೊರತರುವ ರಿಯಾಲಿಟಿ ಶೋ ಅದಾಗಿದೆ. ನಾವು ಯಾರೂ ಪಾತ್ರ ಮಾಡಲಿಲ್ಲ, ನಮ್ಮ ವ್ಯಕ್ತಿತ್ವ ಹೊರ ಹಾಕಿದೆವು ಎಂದು ತಿಳಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.